ವರದಿ : ಜಿ. ಸುಬ್ರಾಯ
ಅಂಕೋಲಾ : ತಾಲೂಕಿನ ಜೀವನದಿಯಾಗಿರುವ ಗಂಗಾವಳಿ ನದಿ ಅಕ್ರಮ ಮರಳು ಮಾಫಿಯಾದ ಕರಿ ನೆರಳಿನಲ್ಲಿ ನಲುಗಿ ಹೋಗಿದೆ. ಇಲ್ಲಿ ನಡೆಯುತ್ತಿರುವ ನಿರಾತಂಕ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕಾದ ಇಲಾಖೆಯೇ ಮೌನ ತಾಳಿ ಅಕ್ರಮಕ್ಕೆ ಸಾಥ್ ನೀಡಿರುವುದು ವಿವಿಧ ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಅಕ್ರಮ ಮರಳು ಗಣಿಗಾರಿಕೆಯ ಹೂರಣ ಬೆಳಕಿಗೆ ಬಂದಿದೆ.
ಯಾವುದೇ ಭೀತಿ ಇಲ್ಲ :
ತಾಲೂಕಿನ ಗಂಗಾವಳಿ ನದಿ ಪಾತ್ರದ ಕೋಡ್ಸಣಿ, ವಾಸರೆಕುದ್ರಿಗೆ, ವಾಸರೆ, ಮೊರಳ್ಳಿ, ಸಗಡಗೇರಿ, ಭಾಗಗಳು ಅಕ್ರಮ ಮರಳು ಗಣಿಗಾರಿಕೆಯಿಂದ ನಲುಗಿ ಹೋಗುವಂತಾಗಿದೆ. ತಾಲೂಕಾಡಳಿತ ಮಾತ್ರ ಇಲ್ಲಿ ನಡೆಯುತ್ತಿರುವುದರ ಬಗ್ಗೆ ಏನೂ ಗೊತ್ತೆ ಇಲ್ಲ ಎಂಬAತೆ ವರ್ತಿಸುತ್ತಿರುವುದು ಇಲ್ಲಿನ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಪ್ರಭಾವಿಗಳು ಗಣಿಗಾರಿಕೆ ನಡೆಸುತ್ತಿರುವುದರಿಂದ ಯಾವುದನ್ನೂ ಬಾಯಿ ಬಿಡದೇ ಸುಮ್ಮನೆ ಉಳಿಯಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.
ಯಾಂತ್ರಿಕ ದೋಣಿಗಳ ಬಳಕೆ :
ಯಾಂತ್ರಿಕ ದೋಣಿಗಳನ್ನು ಬಳಸಿ ನೂರಾರು ಲಾರಿಗಳಷ್ಟು ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ಒಂದಡೆ ಡಿಸೈಲ್ ನದಿ ನೀರು ಸೇರಿ ಜಲಚರಗಳು ನಾಶವಾಗುತ್ತಿವೆ. ಇನ್ನೊಂದಡೆ ಅಪಾರ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ನೆರೆಯ ಗ್ರಾಮದ ಭಾಗಗಳ ಬಾವಿಗಳಲ್ಲಿ ಈಗಲೇ ಉಪ್ಪು ನೀರು ಕಾಣಿಸಿಕೊಂಡಿದೆ.
ಹಗಲೀಡಿ ಕಾರ್ಯಾಚರಣೆ :
ಅಕ್ರಮ ಮರಳನ್ನು ದಿನದ 24 ಗಂಟೆಯೂ ಸಹ ಯಾಂತ್ರಿಕೃತ ದೋಣಿಗಳನ್ನು ಬಳಸಿ ತೆಗೆದು ಸಂಗ್ರಹಿಸಲಿಡಲಾಗುತ್ತದೆ. ಹಾಗೆ ಟಿಪ್ಪರ್ ಲಾರಿ ಹಾಗೂ ಮಿನಿ ಬುಲೆರೋಗಳ ಮೂಲಕ ಸಂಬAಧ ಪಟ್ಟ ಇಲಾಖೆಯ ಕೃಪಾಶೀರ್ವಾದದ ಮೂಲಕ ರಸ್ತೆಯಲ್ಲಿ ಸಾಗಿಸಲಾಗುತ್ತಿದೆ. ಕೋಡ್ಸಣಿ ಬ್ರಿಜ್ ಬಳಿ 2 ಕಾರು ಮತ್ತು ಅಗಸೂರಿನ ತಿರುವಿನ ಬಳಿ 2 ಕಾರುಗಳಲ್ಲಿ ಅಕ್ರಮ ದಂಧೆಕೋರರು ಕಾವಲು ಇಟ್ಟು ಹಾದು ಹೋಗುವ ಲಾರಿಗಳ ಮೇಲೆ ನಿಗಾ ಇಡುತ್ತಾರೆ.
ಅಧಿಕಾರಿಗಳಲ್ಲಿ ನಡುಕ :
ಅಂಕೋಲಾದಲ್ಲಿ 18 ಅಕ್ರಮ ಮರಳು ಅಡ್ಡೆಗಳಿಗೆ ಎಂದು ತಿಳಿದು ಬಂದಿದೆ. ಇವೆಲ್ಲವನ್ನು ನೋಡಿ ಅಧಿಕಾರಿಗಳು ಮಾತ್ರ ತೆಪ್ಪಗಾಗಿದ್ದಾರೆ. ಏಕೆಂದರೆ ಈ ಅಧಿಕಾರಿಗಳಿಗೆ ಈ ಅಕ್ರಮ ದಂಧೆಯ ಪ್ರಸಾದವೆ ಮೂಲ ಆದಾಯ. ತಿಂಗಳಿಗೆ 18 ಲಕ್ಷ ಕ್ಕೂ ಹಣವನ್ನು ಸಂಗ್ರಹಿಸಿ, ಎಲ್ಲರನ್ನು ಸಂತೋಷ ಪಡಿಸುತ್ತಿರುವದು ಕೂಡ ಗುಟ್ಟಾಗಿ ಉಳಿದಿಲ್ಲ.
ಅಧಿಕಾರಿಯನ್ನು ಕೊಲ್ಲಲು ಮುಂದಾಗಿದ್ದ ಮರಳು ಮಾಫಿಯಾ :
ಕಳೆದ 2 ವರ್ಷದ ಹಿಂದೆ ಕೋಡ್ಸಣಿ ಬಳಿ ಗಣಿಗಾರಿಕೆಯ ಇಲಾಖೆಯ ಅಧಿಕಾರಿಗಳು ದಾಳಿ ಹೋದಾಗ ಅವರ ಮೆಲೆಯೆ ಟಿಪ್ಪರ್ ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆಯು ಕೂಡ ಕರಾಳ ವಿದ್ಯಮಾನಕ್ಕೆ ಸಾಕ್ಷಿಯಾಗಿ ನಿಂತಿದೆ.
ತಾಲೂಕಿನಲ್ಲಿ 190 ವಾಹನಗಳ ಲೆಕ್ಕ ಇಲಾಖೆಯ ರಾಮಕೃಷ್ಣನ ಢೈರಿಯಲ್ಲಿ ಇದೆ. ಇದನ್ನು ಬಿಟ್ಟು ಒಂದೆ ಒಂದೆ ವಾಹನ ಮರಳು ತುಂಬಿಕೊAಡು ರಸ್ತೆಗೆ ಇಳಿದಲ್ಲಿ ಅಕ್ರಮ ಮರಳು ಸಾಗಾಟದ ಪ್ರಕರಣ ಇಲಾಖೆಯ ಅಧಿಕೃತನಲ್ಲಿ ಪೈನಲ್ಲಿ ದಾಖಲಾಗಲಿದೆ ಎಂಬದು ಕೂಡ ಮರಳು ಗಣಿಕಾರಿಕೆಯ ತಂಡದವರಿAದಲೆ ಹೊರ ಬಿದ್ದಿದೆ.
