ಅಂಕೋಲಾ : ಊಟ ಮಾಡಿ ಮಲಗಿಕೊಂಡಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೆಟಗೇರಿಯ ನಿವಾಸಿ ಸಾವಿತ್ರಿ ಹನುಮಂತ ಪಂಚಪುತ್ರ ನಾಪತ್ತೆಯಾದವಳಾಗಿದ್ದು, ತನ್ನ ಮಗಳನ್ನು ಹುಡುಕಿ ಕೊಡುವಂತೆ ಯುವತಿಯ ತಂದೆ ಹನುಮಂತ ಕೃಷ್ಣಪ್ಪ ಪಂಚಪುತ್ರ ದೂರು ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಮೂಲದವರಾದ, ಹನುಮಂತ ಪಂಚಪುತ್ರ ಅವರ ಕುಟುಂಬ ಅಂಕೋಲಾಕ್ಕೆ ಕೂಲಿ ಕೆಲಸಕ್ಕಾಗಿ ಆಗಮಿಸಿ ಶೆಟಗೇರಿಯಲ್ಲಿ ವಾಸವಾಗಿದ್ದರು.
ಅಕ್ಟೋಬರ್ 31 ರಂದು ರಾತ್ರಿ 9-30 ಗಂಟೆಗೆ ಶೆಟಗೇರಿಯಲ್ಲಿರುವ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿಕೊಂಡಿದ್ದರು. ಈ ವೇಳೆ 10 ಗಂಟೆಯಿAದ 11 ಗಂಟೆಯ ನಡುವಿನ ವೇಳೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಕಾಣೆಯಾಗಿದ್ದಾಳೆ ಅಥವಾ ತನ್ನ ಮಗಳನ್ನು ಯಾರಾದರೂ ಅಪಹರಿಸಿರಬಹುದು ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
5 ಅಡಿ 4 ಇಂಚ್ ಎತ್ತರವಿದ್ದು, ಕನ್ನಡ ಭಾಷೆ ಬಲ್ಲವಳಾಗಿದ್ದು, ಗೋದಿ ಮೈ ಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು ಹಾಗೂ ಬಲ ಕೈಗೆ ಅಣ್ಣ ಎಂದು ಇಂಗ್ಲೀಷನಲ್ಲಿ ಟ್ಯಾಟೋ ಇದ್ದು, ಯುವತಿ ನಾಪತ್ತೆಯಾದ ವೇಳೆಯಲ್ಲಿ ತಿಳಿ ಹಸಿರು ಬಣ್ಣದ ಅರ್ಧ ತೋಳಿನ ಟೀಶರ್ಟ್, ನೈಟ್ ಪ್ಯಾಂಟ್ ಧರಿಸಿದ್ದಾಳೆ ಎಂದು ತಿಳಿದುಬಂದಿದೆ.
ಈಕೆಯ ಬಗ್ಗೆ ಎಲ್ಲಾದರೂ ಮಾಹಿತಿ ಕಂಡು ಬಂದಲ್ಲಿ 9480805250 ಅಥವಾ 9480805268 ನಂಬರಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
