ದಿನಕರ ನಾಯ್ಕ. ಅಲಗೇರಿ.

ಅಂಕೋಲಾ : ಸುಂದರ ಹೊನ್ಗುಡಿ ಬೀಚ್ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಆದರೆ ಇಲ್ಲಿ ಸಂಜೆಯಾಗುತ್ತಿದ್ದ0ತೆ ಕಿಡಿಗೇಡಿಗಳ ನಡೆಯುತ್ತಿರುವ ಉಪಟಳ ಮಾತ್ರ ಹೇಳತೀರದಾಗಿದೆ. ಬೀಚಿನ ತುಂಬೆಲ್ಲಾ ಕುಡಿದು ಎಸೆದ ಸಾರಾಯಿ ಬಾಟಲ್ಗಳು, ಒಡೆದು ಹಾಕಿರುವ ಗಾಜುಗಳೇ ಕಾಣಸಿಗುತ್ತಿದ್ದು ಹತ್ತಿರದ ನಿವಾಸಿಗಳು ಭಯದಿಂದಲೇ ಕಾಲ ಕಳೆಯುವಂತಾಗಿದೆ.

 ಸಾರಾಯಿ ಬಾಟಲ್ಗಳ ರಾಶಿ ;

ಸಂಜೆಯಾಗುತ್ತಿದ್ದ0ತೆ ಇಲ್ಲಿ ಬಂದು ಸೇರುವ ಕಿಡಿಗೇಡಿಗಳು ಬೀಚಿನಲ್ಲಿ ತಮ್ಮ ವಿಕೃತಿಯನ್ನು ಪ್ರದರ್ಶಿಸುತ್ತಾರೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ಮೋಜು ಮಸ್ತಿ ಮಾಡಿ, ನಸೆ ಏರಿದ ಮೇಲೆ ಬಾಟಲಿ ಒಡೆದು ಬೀಚನ ದಡದಲ್ಲಿಯೆ ಬಿಸಾಡುತ್ತಾರೆ. ಅಲ್ಲದೇ ಗದ್ದಲ ಮಾಡುತ್ತ ಹತ್ತಿರದ ಮನೆಯ ವಾಸಿಗಳ ನೆಮ್ಮದಿಯನ್ನು ಕೆಡಿಸುತ್ತಾರೆ. ಹತ್ತಿರದ ನಿವಾಸಿ ನಾಗೇಶ ಗಣಪತಿ ನಾಯ್ಕ ಅವರು ಚೆಲ್ಲಾಪಿಲ್ಲಿಯಾಗಿ ಬಿದ್ದ ಬಾಟಲಿ ಹಾಗೂ ಗಾಜುಗಳನ್ನು ಒಂದಡೆ ಹಾಕಿ ತಮ್ಮ ಪರಿಸರ ಪ್ರೇಮವನ್ನು ಪ್ರಕಟಿಸುತ್ತ ಬಂದಿದ್ದಾರೆ.

 ಪ್ರೇಮಿಗಳಿಗೆ ಕಾಟ ;

ಕಡಲತೀರದ ಸೌಂದರ್ಯ ಶ್ರೀಮಂತಿಕೆಯನ್ನು ಕಣ್ತುಂಬಿಕೊಳ್ಳಲು ಹಾಗೂ ಏಕಾಂತದ ಸವಿ ಅನುಭವಿಸಲು ಇಲ್ಲಿ ಪ್ರೇಮಿಗಳ ದಂಡೆ ಆಗಮಿಸುತ್ತದೆ. ಆದರೆ ಪ್ರೇಮಿಗಳಿಗೆ ಉಪಟಳ ಕೊಡಲೆಂದೆ ಕೆಲವು ವಿಕೃತರು ಹಿಂಬಾಲಿಸಿ ಕಾಟ ಕೊಡುತ್ತಿದ್ದಾರೆ ಎಂಬ ಆರೋಪ ಹೆಚ್ಚಾಗಿ ಕೇಳಿಬಂದಿದೆ. ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ಬಂದರೂ ಯಾವುದೇ ಪ್ರಯೋಜವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

 ವಿವಸ್ತçವಾಗಿ ಸ್ನಾನ :

ಕೆಲವು ವಿಕೃತರನ್ನು ಸಮುದ್ರದಲ್ಲಿ ವಿವಸ್ತçವಾಗಿಯೇ ಸ್ನಾನ ಮಾಡುತ್ತಾರೆ. ಇದನ್ನು ಕೇಳಲು ಬಂದ ಸ್ಳಳೀಕರೊಂದಿಗೆ ಮೈ ಮೇಲೆ ಎಗರಿ ಹೋಗಿ ಜಗಳಕ್ಕೆ ನಿಂತ ನಿದರ್ಶನಗಳು ಸಾಕಷ್ಠಿದೆ. ಹಾಗೆ ರಾತ್ರಿಯೊಡನೆ ಬೀಚ್ನಲ್ಲಿ ಪಟಾಕಿ ಸಿಡಿಸಿ ಶಾಂತತೆಯನ್ನು ಭಂಗಗೊಳಿಸಿ ಭಯದ ವಾತಾವರಣ ನಿರ್ಮಾಣ ಮಾಡುತ್ತಾರೆ ಎಂಬ ಆರೋಪವು ಇದೆ. ಪಟಾಕಿ ಸಿಡಿಸಿದಾಗಿ ಹತ್ತಿರದ ಮನೆಯವರು ಹೊರಗೆ ಬಂದು ನೋಡಿದಾಗ ಎಲ್ಲರೂ ನಾಪತ್ತೆಯಾಗುತ್ತಾರೆ ಎನ್ನುತ್ತಾರೆ ಸ್ಥಳಿಯರು.

 ವಾಮಾಚಾರಕ್ಕೂ ಬೀಚ್ :

ಮೃತರ ಕ್ರೀಯಾಕರ್ಮದ ಅಸ್ತಿ ಬಿಡಲು ಹಾಗೂ ವಾಮಚಾರದ ಪ್ರಯೋಗಕ್ಕೂ ಇಲ್ಲಿನ ಬೀಚ್ ಬಳಕೆಯಾಗುತ್ತದೆ. ಕುಂಬಳಕಾಯಿ, ಕುಂಕುಮ ಹಾಗೂ ಗೊಂಬೆಗಳನ್ನು ತಂದು ಬೀಚ್ನಲ್ಲಿ ಇಟ್ಟು ಸುಟ್ಟು ಹಾಕುತ್ತಿರುವದು ಆತಂಕಕ್ಕೆ ಕಾರಣವು ಆಗಿz ೆ.

 ಆಸನ, ಸೋಲಾರ ದ್ವಂಸ :

ಇಲ್ಲಿಗೆ ಆಗಮಿಸುವ ಕೆಲ ಕಿಡಿಗೇಡಿಗಳು ಮೂಲ ಸೌಲಭ್ಯವನ್ನು ಹಾಳುಗೆಡುವುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯವರು ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಆಸನ ವ್ಯವಸ್ಥೆ, ಸೋಲಾರ್ ದೀಪವನ್ನು ಕೆಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ವಿಶೇಷಾಭಿವೃದ್ಧಿ ಯೋಜನೆಯಡಿ ನದಿಭಾಗಕ್ಕೆ ಸಾಗುವ ರಸ್ತೆ ಸೇರಿದಂತೆ ಆಸನ ವ್ಯವಸ್ಥೆ, ಸೋಲಾರ್ ದೀಪಗಳನ್ನು ಅಳವಡಿಸಿ ಹೊನ್ಗುಡಿ ಕಡಲತೀರದ ಅಂದಕ್ಕೆ ಇನ್ನಷ್ಟು ಮೆರಗು ತಂದಿತ್ತು.

ಅಂದಾಜು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಮಗಾರಿಯ ನೇತೃತ್ವವಹಿಸಿದ್ದು ಜಿಲ್ಲಾ ನಿರ್ಮಿತಿ ಕೇಂದ್ರ. ಹೊನ್ಗುಡಿ ಬೀಚ್ ಹಾಗೂ ನದಿಭಾಗ ಗುಡ್ಡದ ಮೇಲೆ 5 ಆಸನ ವ್ಯವಸ್ಥೆ ಮಾಡಿದ್ದರು. ನೆರಳಿಗಾಗಿ ಚಾವಣಿ ಮಾಡಿದ್ದರು. ಇಲ್ಲಿ ಅಳವಡಿಸಿದ್ದ 5 ಸೋಲಾರ್ ದೀಪಗಳು ಪ್ರವಾಸಿಗರಿಗೆ ದಾರಿ ದೀಪವಾಗಿದ್ದವು. ಅಲ್ಲದೇ ಇಂಟರ್ಲಾಕ್ ಜೋಡಿಸಿ ವಾಹನ ನಿಲುಗಡೆಗೆ ಕ್ರಮ ಕೈಗೊಂಡಿದ್ದರು. ಎಲ್ಲ ಅನುಕೂಲಗಳಿಂದ ಪ್ರವಾಸಿಗರು ಯಾವ ಅಂಜಿಕೆ, ಅಳುಕಿಲ್ಲದೇ ಹೊನ್ಗುಡಿ ಬೀಚ್ಸೌಂದರ್ಯ ಸವಿದು ಸಂತಸದಿAಸಾಗುವಂತಾಗಿತ್ತು.

ಆದರೆ ಬೀಚಿನ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಪ್ರವಾಸಿಗರಿಗೆ ಕಲ್ಪಿಸಿಕೊಟ್ಟಿದ್ದ ಆಸನದ ಸ್ಥಿತಿ ಅಸ್ತವ್ಯಸ್ತವಾಗಿದೆ. ಚಾವಣಿಯ ಹೊದಿಕೆಗಳನ್ನು ತುಂಡರಿಸಲಾಗಿದೆ. ಸೋಲಾರ್ ದೀಪವನ್ನು ಹಾಳುಗೆಡವಿದ್ದು, ಕಗ್ಗತ್ತಲು ಹೊನ್ಗುಡಿಯನ್ನು ಮತ್ತೆ ಕವಿದುಕೊಂಡಿದೆ.

ಅಂಕೋಲಾ ತಾಲೂಕು ಕೇಂದ್ರದಿ0ದ ಸುಮಾರು 4 ಕಿ.ಮೀ. ದೂರದಲ್ಲಿರುವ ಹೊನ್ಗುಡಿ ಬೀಚ್ ಸುಂದರ ಕಡಲ ಕಿನಾರೆಗಳಲ್ಲೊಂದು. ಬೊಬ್ರುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜರೆಯಾಗಿರುವ ನದಿಭಾಗಕ್ಕೆ ಹೊನ್ಗುಡಿ ಹೊಂದಿಕೊAಡಿದೆ. ಈ ಕಡಲ ತಟಕ್ಕೆ ಸಾಗುವ ರಸ್ತೆಯುದ್ದಕ್ಕೂ ಗದ್ದೆಗಳು, ಬಾಗಿ ಬಳುಕುವ ಮರಗಳು, ಹೆಬ್ಬಂಡೆಗಳು ಇವುಗಳ ಸೌಂದರ್ಯವನ್ನು ಸವಿಯುತ್ತಾ ಸಾಗುವುದೇ ರೋಮಾಂಚಕ ಅನುಭವ. ಇವನ್ನೆಲ್ಲ ದಾಟಿ ಮುಂದೆ ಹೋದಾಗ ಎದುರಾಗುವುದೇ ಹೊನ್ಗುಡಿ ಬೀಚ್. ಈ ಬೀಚಿನ ಅಂದಕ್ಕೆ ಮರುಳಾಗದವರೇ ಇಲ್ಲ.

ಸ್ಟಾರ್ ದಂಪತಿಗಳಾದ ಯಶ ಹಾಗೂ ರಾಧಿಕಾ ಪಂಡಿತ ಅಭಿಯನದ ಮೊದಲ ಚಿತ್ರ “ಮೊಗ್ಗಿನ ಮನಸ್ಸು” ಇಲ್ಲಿನ ಕಡಲ ತೀರದಲ್ಲೆ ಚಿತ್ರೀಕರಣವಾಗಿತ್ತು. ತೆಲಗಿನ ‘ಅದ್ಭುತ ದ್ವೀಪಂ’ ಸಿನೆಮಾ ಸೇರಿದಂತೆ ಸುಮಾರು 8 ಕ್ಕೂ ಹೆಚ್ಚು ಚಲನಚಿತ್ರಗಳು ಇಲ್ಲಿನ ಚಿತ್ರೀಕರಣ ಮಾಡಲಾಗಿದ್ದು, ರಾಜ್ಯದಲ್ಲಿ ಗುರುತಿಸಿಕೊಂಡಿದೆ.

ಇಲ್ಲಿನ ಬೀಚ್‌ನ ಸೌಂದರ್ಯವನ್ನು ಸವಿಯಲು ಅನೇಕ ಪ್ರವಾಸಿಗರು ಬಂದು ಕಾಲ ಕಳೆಯುತ್ತಿರುವುದು ಖುಷಿ ತಂದಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಗ್ರಾಪಂ ಬೊಬ್ರವಾಡಕ್ಕೆ ಹಲವಾರು ಭಾರಿ ಮನವಿ ಸಲ್ಲಿಸಲಾಗಿದೆ. ಪ್ರಾಥಮಿಕವಾಗಿ ಇಲ್ಲಿ ಸಿಸಿಟಿವಿ ಅಳವಡಿಸಿದಲ್ಲಿ ವಿಕೃತರ ಉಪಟಳ ಸ್ವಲ್ಪವಾದರೂ ತಪ್ಪಬಹುದು.

 ನಾಗೇಶ ಗಣಪತಿ ನಾಯ್ಕ.

 ಸ್ಥಳೀಕ.