ಅಂಕೋಲಾ : ಸದಾ ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡು, ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ಅಂಕೋಲಾ ಮೂಲದ ಡಾ. ಸಂಜೀವ.ಆರ್,ನಾಯಕ ಅವರಿಗೆ ಪಂಚತAತ್ರ ದುರ್ಗಸಿಂಹ ರಾಷ್ಟ್ರೀಯ ಪ್ರಶಸ್ತಿ ಪ್ರಧಾನಗೊಂಡು ಅವರ ಸಾಧನೆಯ ಹಿರಿಮೆಗೆ ಇನ್ನೊಂದು ಗರಿ ಮೂಡುವಂತಾಗಿದೆ.

ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಳಗಾವಿ, ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇದರ ಸಹಯೋಗದಲ್ಲಿ ನಡೆದ ವಾರ್ಷಿಕ ಸಂಭ್ರಮಾಚರಣೆ ಕಥಾಗೋಷ್ಠಿ, ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಸಹ ಪ್ರಾಧ್ಯಾಪಕರಾಗಿರುವ ಡಾ. ಸಂಜೀವ.ಆರ್,ನಾಯಕ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಡಾ. ಸಂಜೀವ ನಾಯಕ ಅವರಿಗೆ ಧಾರವಾಡದ ಶ್ರೀ ಮುರುಘಾಮಠದ ಮ.ನಿ. ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಧಾರವಾಡದ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಗೋಕಾಕದ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾಂವಶಿ ಬೆಂಗಳೂರಿನ ಕನ್ನಡಪರ ಚಿಂತಕ, ಸಾಹಿತಿ ನಾಗಲೇಖ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷ ಸಿ. ಎ. ಗಾಳೆಪ್ಪ ಪ್ರಶಸ್ತಿ ನೀಡಲಾಯಿತು.

ಗದಗದ ಯೋಗ ತರಬೇತಿದಾರರಾದ ನಾಜಿಯಾಬೇಗಂ ನೂರಭಾಷಾ, ಹೊನ್ನಾವರದ ಸಾಹಿತಿ ಶುಭ ವಿಷ್ಣು ಸಭಾಹಿತ, ಸಮಾಜ ಸೇವಕಿ ಶೈಲಜಾ ಪಾಟೀಲ ಗದಗ, ಅಕ್ಷರ ದೀಪ ಸಾಹಿತ್ಯ ವೇದಿಕೆಯ ವ್ಯವಸ್ಥಾಪಕ ಎಸ್. ಐ. ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಸಂಜೀವ.ಆರ್.ನಾಯಕ ಅವರು ಅಂತರ ರಾಷ್ಟ್ರೀಯ ಸಂಶೋಧನಾ ಮ್ಯಾಗಜಿನ್ ಪ್ರತಿಕೆಯ ನ್ಯೂಡೆಲ್ಲಿ ಅಕ್ಕಿನಿಕ್ಕಿ ಪಬ್ಲಿಕೇಷನ್ ಇದರ ಉಪಸಂಪದಾಕರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ 15 ಕ್ಕೂ ಹೆಚ್ಚು ಅಂತರ್ ರಾಷ್ಟ್ರೀಯ ಪ್ರತಿಕೆಯಲ್ಲಿ ವಿವಿಧ ಸಾಮಾಜಿಕ ಮತ್ತು ಸಂಶೋಧನಾ ಸಂಬ0ದಿತ ಲೇಖನಗಳು ಪ್ರಕಟವಾಗಿವೆ. ಹಾಗೇಯೆ 20 ಕ್ಕೂ ಹೆಚ್ಚು ಅಂತರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಾಗೂ 300 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡನೆ ಮಾಡಿರುವ ಕಿರ್ತಿ ಇವರದ್ದಾಗಿದೆ.

ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಇವರು ಹಲವಾರು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದ್ದಾರೆ. ಎರಡು ವಿಶ್ವವಿದ್ಯಾಲಯಗಳ (ಬಿ.ಓ.ಎಸ್/ಬಿ.ಓ.ಇ) ಪಠ್ಯಪುಸ್ತಕ ಮಂಡಳಿಯ ಸದ್ಯಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ. ಸಂಜೀವ.ಆರ್. ನಾಯಕ ಅವರು ಈ ಹಿಂದೆ ಸುಮಾರು 25 ವರ್ಷಗಳ ಕಾಲ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಕಾರವಾರ ಜಿಲ್ಲೆಯಲ್ಲಿ ಜ್ಞಾನ ವಿಕಾಶ ಕೇಂದ್ರ ಮತ್ತು ಜ್ಞಾನಜ್ಯೋತಿ ಮತ್ತು ಏಷಿಯನ್ ಕಂಪ್ಯೂಟರ ಸೆಂಟರ್ಗಳನ್ನು ಉತ್ತರ ಕನ್ನಡ ಜಿಲ್ಲಾ ಸಾಮಾಜಿಕ ಶೈಕ್ಷಣಿಕ ಉತ್ತೇಜನ ಸಮಿತಿಯಡಿ ಹಲವಾರು ಕಾರ್ಯಕ್ರಮಗಳನ್ನು ನೆಡಿಸಿ ಸಮಾಜ ತನ್ನದೆ ಆದ ವಿಶೇಷ ಕೊಡುಗೆ ನೀಡಿ ಆದರ್ಶಪ್ರಾಯರಾಗಿದ್ದಾರೆ.

ಮುಖ್ಯವಾಗಿ ಹಲವಾರು ಈ ಭಾಗದ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜನಿಯಿರಿ0ಗ್ ಮತ್ತು ಇನ್ನಿತರ ಕೋರ್ಸಗಳಿಗೆ ಆಯ್ಕೆಯಾಗಲು ಕಾರಣಿಭೂತರಾಗಿದ್ದಾರೆ. ಇವರ ನೇತ್ರತ್ವದ ಕೇಂದ್ರದಲ್ಲಿ ತರಭೇತಿ ಪಡೆದವರು ದೇಶ-ವಿದೇಶದಲ್ಲಿ ಉನ್ನತ ಸ್ಥಾನದಲ್ಲಿ ನೌಕರಿಯಲ್ಲಿದ್ದಾರೆ.

2005 ರ ನಂತರ ಯ.ಜಿ.ಸಿ ಯೋಜನೆಯಡಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಮಾಡಿ ಖಾಯಂ ಪ್ರಾಧ್ಯಾಪಕರಾಗಿ ಪ್ರತಿಷ್ಠತ ಕೆ.ಎಲ್.ಇ ಸಂಸ್ಥೆಯಲ್ಲಿ ನೇಮಕಗೊಂಡರು. ಆ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ./ಬಿಕಾಂ/ ಬಿಎಸ್ಸಿ ಎಲ್ಲಾ ತರಗತಿಗಳ ತರಗತಿಗಳ ಪದವಿ ಓದುತ್ತಿರುವ ವಿಧ್ಯಾರ್ಥಿಗಳ ಪಠ್ಯಪುಸ್ತಕ ರಚನೆಯ ಪ್ರಧಾನ ಸಂಪಾದಾಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಅನೇಕ ಪ್ರಶಸ್ತಿಗೆ ಪಾತ್ರರಾದ ಸಂಜೀವ ನಾಯಕ ಅವರಿಗೆ ಡಾ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಠನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ಇತ್ತೀಚಿಗೆ ರಾಷ್ಟಿçÃಯ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನಗೊಂಡಿದೆ.

ಅಂಕೋಲೆಯ ಹಿರಿಮೆಗೆ ಗರಿ ಮೂಡಿಸಿದ ಡಾ.ಸಂಜೀವ.ಆರ್,ನಾಯಕ ಅವರ ಅತ್ಯುನ್ನತ್ ಸಾಧನೆಗೆ ಜಿಲ್ಲೆಯಲ್ಲಿಯೆ ಹರ್ಷದ ವಾತಾವರಣ ಕಂಡು ಬಂದಿದೆ. ಪಾದರಸದ ವ್ಯಕ್ತಿತ್ವದ ಡಾ. ಸಂಜೀವ ನಾಯಕ ಅವರು ಇನ್ನು ಹೆಚ್ಚಿನ ಸಾಧನೆ ಪ್ರಕಟಿಸುವಂತಾಗಲಿ ಎಂದು ಅವರ ಹಿತೈಷಿಗಳು, ಅಭಿಮಾನಿಗಳು, ನಾಗರಿಕರು ತುಂಬು ಹೃದಯದಿಂದ ಹಾರೈಸಿದ್ದಾರೆ.