ಅಂಕೋಲಾ : ಹೆರಿಗೆಗೆಂದು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಅಂಬುಲೆನ್ಸ್ನಲ್ಲಿಯೆ ತಾಯಿ ಮಗುವಿಗೆ ಜನ್ಮ ನೀಡಿದ ಘಟನೆ ತಾಲೂಕಿನ ಹೊನ್ನೆಬೈಲದಲ್ಲಿ ನಡೆದಿದೆ.

 ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕ ಅವರ ಸಮಯಪ್ರಜ್ಞೆಯಿಂದ ಒಂದು ಜೀವ ಎರಡಾಗಿ, ಮಗು ಪ್ರಪಂಚದತ್ತಕಣ್ಣು ತೆರೆಯುವಂತಾಯಿತು.

 ನಡೆದದ್ದೇನು..?

ತಾಲೂಕಿನ ಹೊನ್ನೆಬೈಲ್ ಗ್ರಾಮದ ಕಲಾವತಿ ಎನ್ನುವ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿA ಆಕೆಯ ಕುಟುಂಬದವರು ರಿಕ್ಷಾದ ಮೂಲಕ ಅವಳನ್ನು ಆಸ್ಪತ್ರೆಗೆ ಸಾಗಿಸಲು ಹೊರಟಿದ್ದರು. ವೇಳೆ ದಾರಿಯ ಮಧ್ಯೆ ಪ್ರಸವ ವೇದನೆ ಹೆಚ್ಚಾಗಿ ಏನು ಮಾಡಬೇಕೆಂದು ತೋಚದೆ ಹತ್ತಿರದಲ್ಲಿದ್ದ ಮನೆಗೆ ಕರೆದುಕೊಂಡು ಉಪಚರಿಸಲು ಮುಂದಾಗಿದ್ದರು.

 ಆಪತ್ಬಾಂಧವನಾಗಿ ಬಂದ ಸಮುದಾಯ ಆರೋಗ್ಯಾಧಿಕಾರಿ :

ತೀವ್ರ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಸಂಗತಿಯನ್ನ (ಉಪವಿಭಾಗ) ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕ ಅವರಿಗೆ ದೂರವಾಣಿಯ ಮೂಲಕ ತಿಳಿಸಿ ತುರ್ತು ಸಹಾಯದ ಕೋರಿದ್ದರು.

ಕೂಡಲೇ ತಮ್ಮ ವಾಹನದ ಮೂಲಕ ಸ್ಥಳಕ್ಕೆ ಆರೋಗ್ಯಾಧಿಕಾರಿ ಗಣೇಶ ನಾಯ್ಕ, ವೇದನೆ ಪಡುತ್ತಿರುವ ಗರ್ಭಿಣಿಗೆ ಧೈರ್ಯ ತುಂಬಿ ಅಂಬುಲೆನ್ಸ್ಗೆ ಶಿಫ್ಟ್ ಮಾಡಿ ಇನ್ನೇನು ಆಸ್ಪತ್ರೆಗೆ ಸಾಗಿಸಬೇಕನ್ನುವರಲ್ಲಿ ಅವಳ ಪ್ರಸನ ವೇದನೆ ಇನ್ನುಷ್ಟು ಜಾಸ್ತಿಯಾಗಿ ಮಗು ಸರಿಯಾಗಿ ಹೊರಬರಲಾಗದೇ ತಾಯಿ. ಮತ್ತು ಮಗುವಿನ ಜೀವನ್ಮರಣದ ಹೋರಾಟವನ್ನು ಮನಗಂಡು, ಸಮಯ ಪ್ರಜ್ಞೆಯಿಂದ ಅಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಲು ನಿರ್ಧರಿಸಿದರು.

ಅಂಬುಲೆನ್ಸ್ ಸಿಬ್ಬಂದಿಗಳ ಸಹಕಾರದಲ್ಲಿ ಸೂಸೂತ್ರ ಹೆರಿಗೆ ಮಾಡಿಸಿದ್ದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.