ಅಂಕೋಲಾ : ಇತ್ತೀಚಿನ ದಿನಗಳಲ್ಲಿ ಎಲ್ಲಡೆ ಹಾರ್ಟ್ ಎಟ್ಯಾಕ್ ಆಗುತ್ತಿರುವದು ಹೆಚ್ಚಾಗಿ ಕಂಡು ಬರುತ್ತಿದೆ. ಹೆಚ್ಚಾಗಿ ಯುವ ತರುಣರಲ್ಲೆ ಕಾಣಿಸಿಕೊಳ್ಳುತ್ತಿರುವ ಈ ಎಟ್ಯಾಕ್‌ನಿಂದಾಗಿ ವೈಧ್ಯಕೀಯ ಕ್ಷೇತ್ರದಲ್ಲಿ ತಲ್ಲಣವನ್ನ ಉಂಟು ಮಾಡಿದೆ. ಈ ಹಾರ್ಟ ಎಟ್ಯಾಕ್‌ನ ಕರಾಳ ದೃಷ್ಠಿಗೆ ಅಗಸೂರಿನ 32 ವರ್ಷದ ತರುಣ ನಾರಾಯಣ ವೆಂಕಟೇಷ ನಾಯಕ ಸೋಮವಾರ ತಡರಾತ್ರಿ ಬಲಿಯಾಗಿದ್ದಾನೆ.

ಎಲ್ಲರೊಂದಿಗೂ ಚೆನ್ನಾಗಿದ್ದೂ, ಉತ್ತಮ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದ ನಾರಾಯಣ ನಾಯಕ ಅವರು ಪತ್ನಿ ಹಾಗೂ ಮೂರು ವರ್ಷದ ಮಗುವಿನೊಂದಿಗೆ ತನ್ನದೇ ಆದ ಪುಟ್ಟ ಸಂಸಾರವನ್ನು ಕಟ್ಟಿಕೊಂಡು ನೆಮ್ಮದಿಯಿಂದಲೆ ಜೀವನ ಸಾಗಿಸುತ್ತಿದ್ದ.
ತನ್ನ ಜೀವನ ನಿರ್ವಹಣೆಗಾಗಿ ಗುಳ್ಳಾಪುರಲ್ಲಿ ಚಿಕನ್ ಸೆಂಟರ್ ಅಂಗಡಿಯನ್ನು ಇಟ್ಟುಕೊಂಡು, ಅಲ್ಲಿಯೆ ಹತ್ತಿರದಲ್ಲಿ ಬಾಡಿಗೆ ಮನೆ ಪಡೆದುಕೊಂಡು ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದ. ಸೋಮವಾರ ಮದ್ಯ ರಾತ್ರಿ 12 ಗಂಟೆಗೆ ನಾರಾಯಣ ನಾಯಕಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೆ ಆತನ ಪತ್ನಿ ಯಲ್ಲಾಪುರದ ಆಸ್ಪತ್ರೆಗೆ ಪತಿಯನ್ನು ಚಿಕಿತ್ಸೆಗೆ ದಾಖಲಾಸಿದ್ದಾಳೆ. ವೈದ್ಯರು ಚಿಕಿತ್ಸೆ ನೀಡುತ್ತಿರುವಾಗ ನಾರಾಯಣ ನಾಯಕ ಇಹಲೋಕ ತ್ಯಜಿಸಿ, ಕಣ್ಣು ಮುಚ್ಚಿದ್ದಾನೆ.
ಮೃತ ನಾರಾಯಣ ನಾಯಕ, ತಂದೆ-ತಾಯಿ, ಇರ್ವರು ಸಹೋದರಿಯರು, ಪತ್ನಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾನೆ.
ಶಾಸಕ ಸತೀಶ ಸೈಲ್, ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ. ಅಡ್ಲೂರು, ಅನ್ನಪೂರ್ಣ ಸೌಹಾರ್ದದ ಅಧ್ಯಕ್ಷ ಮಂಜು ನಾಯಕ. ಹುಂಡಿಮನೆ, ಅಗಸೂರು ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯಕ, ರಾಜೇಶ ನಾಯಕ. ಮಂದಾರ, ಆನಂದು ಗೌಡ. ಹೊನ್ನಳ್ಳಿ, ಗಜಾನನ ಶಿವಾನಂದ ನಾಯ್ಕ. ಸರಳೇಬೈಲ ಸೇರಿದಂತೆ ಮೊದಲಾದವರು ಮೃತರ ಸಂತಾಪ ಸೂಚಿಸಿದ್ದಾರೆ.
