ಅಂಕೋಲಾ : ಕಿರಾಣಿ ಸ್ಟೋರ್ಸ್ ಹಾಗೂ ಸ್ಟೇಶನರಿ ಸ್ಟೋರ್‌ನ ಛಾವಣಿ ಮುರಿದು ಕಳ್ಳತನ ನಡೆಸಿರುವ ಘಟನೆ ಗುಳ್ಳಾಪುರದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಕಳ್ಳತನ ನಡೆಸಿ ಕಳ್ಳನ ಕರಾಮತ್ತಿನ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಜಿ.ಆರ್.ಭಟ್ ಹಾಗೂ ವಿಶ್ವಭಟ್ ಅವರಿಗೆ ಸೇರಿದ ಕಿರಾಣಿ ಸ್ಟೋರ್ಸ್ ಹಾಗೂ ಸ್ಟೇಶನರಿ ಸ್ಟೋರ್ ಇದ್ದಾಗಿದ್ದು ಎರಡು ಅಂಗಡಿ ಸೇರಿ 50 ಸಾವಿರಕ್ಕೂ ಅಧಿಕ ನಗದು, ಬೆಲೆಬಾಳುವ ಸಾಮಾಗ್ರಿ ಕಳ್ಳತನಕ್ಕೆ ಒಳಗಾಗಿದೆ.
ಕಳ್ಳರು ಸಿ.ಸಿ.ಟಿ.ವಿ ಯನ್ನು ಮುರಿಯಲು ಯತ್ನಿಸಿ, ವಿಫಲಗೊಂಡಿದ್ದಾರೆ. ಸಿ.ಸಿ.ಟಿ.ವಿ ಯಲ್ಲಿ ಸೆರೆಯಾದ ಕಳ್ಳತನದ ವಿಡಿಯೊ ವೈರಲ್ ಆಗಿದ್ದು, ಆತಂಕದ ಸನ್ನಿವೇಶ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಸ್ಥಳಕ್ಕೆ ಯಲ್ಲಾಪುರ ಪೋಲಿಸರು ಭೇಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊ0ಡು ಕಾನುನು ಕ್ರಮ ಕೈಗೊಂಡಿದ್ದಾರೆ.
