ವರದಿ : ದಿನಕರ ನಾಯ್ಕ‌ ಅಲಗೇರಿ.

ಅಂಕೋಲಾ : ಕಾರವಾರದ ಕಿಮ್ಸ್ ನಲ್ಲಿ ಪ್ಯಾರಾ ಮೆಡಿಕಲ್ ಕಾಲೇಜ್‌ನಲ್ಲಿ 2 ನೇ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮನೆಯಿಂದ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಕೋಲಾದ‌ ಬೆಲೆಕೇರಿಯ ಖಾರ್ವಿವಾಡಾದ ನಾಗರತ್ನಾ ರಾಜಾ ನಾಯ್ಕ 20 ವರ್ಷ ನಾಪತ್ತೆಯಾದವಳು.ಪ್ರಕರಣವೇನು..? ಕಾರವಾರದ ಕಿಮ್ಸ್ ನಲ್ಲಿ ಪ್ಯಾರಾ ಮೆಡಿಕಲ್ ಕಾಲೇಜ್‌ನಲ್ಲಿ 02 ನೇ ವರ್ಷದಲ್ಲಿ ಓದುತ್ತಿದ್ದ ನಾಗರತ್ನಾ ರಾಜಾ ನಾಯ್ಕ ದಿನಾಲೂ ಮನೆಯಿಂದಲೇ ಕಾಲೇಜಿಗೆ ಹೋಗಿ ಬರುತ್ತಿದ್ದಳು.

ನವಂಬರ 16 ರ ಗುರುವಾರದಂದು ರಾತ್ರಿ ಊಟ ಮಾಡಿ ಬೇಲೆಕೇರಿಯ ಖಾರ್ವಿವಾಡದಲ್ಲಿರುವ ತನ್ನ ಮನೆಯಲ್ಲಿ ಮಲಗಿದ್ದವಳು. ತಡರಾತ್ರಿ ಸುಮಾರು 1-00 ಗಂಟೆಯಿಂದ ಬೆಳಗಿನ ಜಾವ 05-30 ಗಂಟೆಯ ನಡುವಿನ ಅವಧಿಯಲ್ಲಿ ಎದ್ದು ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ನಾಗರತ್ನಾಳ ಚಿಕ್ಕಮ್ಮ ಸುಮತಿ ವಿಠಲ ನಾಯ್ಕ ಅಂಕೋಲಾ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.

ನಾಗರತ್ನಾ ನಾಯ್ಕ 5 ಪೂಟ್ 2 ಇಂಚ್ ಎತ್ತರವಿದ್ದು, ಕನ್ನಡ ಹಾಗೂ ಕೊಂಕಣಿ ಹಾಗೂ ಹಿಂದಿ ಭಾಷೆ ಬಲ್ಲವಳಾಗಿದ್ದು, ಗೋದಿ ಮೈ ಬಣ್ಣ, ಉದ್ದನೆಯ ಮುಖ, ಸಾದಾರಣ ಮೈ ಕಟ್ಟು ಹೊಂದಿದ್ದಾಳೆ.

ನಾಪತ್ತೆಯಾಗುವ ವೇಳೆಯಲ್ಲಿ ಬಿಳಿ ಬಣ್ಣದ ಗೆರೆವುಳ್ಳ ನೀಲಿ ಬಣ್ಣದ ಟಾಪ್, ಕಪ್ಪು ಬಣ್ಣದ ಲಗಿನ್ಸ್ ಪ್ಯಾಂಟ್, ಕುತ್ತಿಗೆಯಲ್ಲಿ ಬೆಳ್ಳಿ‌ ನಮೂನೆಯ ಪ್ಯಾನ್ಸಿ ಚೈನ್ ಧರಿಸಿದ್ದಳು ಎಂದು ಸುಮತಿ ನಾಯ್ಕ ದೂರಿನಲ್ಲಿ ವಿವರಿಸಿದ್ದಾರೆ.

ಇವರ ಬಗ್ಗೆ ಎಲ್ಲಾದರೂ ಮಾಹಿತಿ ಕಂಡು ಬಂದಲ್ಲಿ ಅಂಕೋಲಾ ಠಾಣೆಯ ಮೊಬೈಲ ಸಂಖ್ಯೆ 9480805250 _ಅಥವಾ 9480805268 ನಂಬರಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.