ಅಂಕೋಲಾ : ದೈವಜ್ಙ ಸುವರ್ಣಕಾರರ ಕಾರ್ಮಿಕರ ಹಿತರಕ್ಷಣಾ ಸಂಘದಲ್ಲಿರುವ ಒಳ ಜಗಳವು ಇದೀಗ ಬೀದಿಗೆ ಬಂದಿದೆ. ಈ ಬೀದಿ ಜಗಳವು ಈಗ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮೆಟ್ಟಿಲೆರುವಂತಾಗಿದ್ದು, ಸಂಘದ ಅಧ್ಯಕ್ಷ ಸುಬ್ರಮಣ್ಯ ವಿಠ್ಠಲ ರೇವಣಕರ ಅವರು ತಮ್ಮ ಮೇಲೆ ರಾಘವೇಂದ್ರ ಮೋಹನ ರೇವಣ ಅವರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.
ದೈವಜ್ಙ ಸುವರ್ಣಕಾರರ ಕಾರ್ಮಿಕರ ಹಿತರಕ್ಷಣಾ ಸಂಘದ ಸುಬ್ರಮಣ್ಯ ವಿಠ್ಠಲ ರೇವಣಕರ. ಜೋಗಳಸೆ ಅವರು ತಮ್ಮ ದೂರಿನಲ್ಲಿ ವಿವರಿಸಿ ಸಂಘದ ಸಭೆ ನಡೆದಾಗ ಮತ್ತು ದಾರಿಯಲ್ಲಿ ಸಿಕ್ಕಾಗಲೆಲ್ಲಾ, ಈ ಹಿಂದೆ ಅಧ್ಯಕ್ಷನಾಗಿದ್ದ, ಹಾಲಿ ಸದಸ್ಯ ರಾಘವೇಂದ್ರ ಮೋಹನ ರೇವಣಕರ ಅಲಗೇರಿ ಅವರು ವಿನಾಕಾರಣ ನನಗೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿ ಅಂತ ಗಲಾಟೆ ಮಾಡಿ, ಸಭೆ ಸರಿಯಾಗಿ ನಡೆಯಲು ಕೊಡದೆ ನನಗೆ ತೊಂದರೆ ಕೊಡುತ್ತಾ ಬಂದಿದ್ದನು.
ಹೀಗಿರುವಾಗ ನವಂಬರ 17 ರ ಶುಕ್ರವಾರದಂದು ಪಟ್ಟಣದ ಬಂಡಿಕಟ್ಟಾದ ಹತ್ತಿರ, ಹಿತರಕ್ಷಣಾ ಸಂಘದ ಕಾರ್ಯದರ್ಶಿ ಸತೀಶ ಮಾಳಪ್ಪ ಶೇಟ ಇವರೊಂದಿಗೆ ಸಂಘದ ಸಭೆಯ ಬಗ್ಗೆ ಮಾತನಾಡುತ್ತಿದ್ದಾಗ, ರಾಘವೆಂದ್ರ ರೇವಣಕರ ಇತನು ಸತೀಶಗೆ ಪೋನ್ ಮಾಡಿ ಸುಬ್ರಮಣ್ಯ ವಿಠ್ಠಲ ರೇವಣಕರ ಇವರಿಗೆ ಅವಾಚ್ಯವಾಗಿ ಬೈದು ನೀನು ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡು, ಇಲ್ಲದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ. ನೀನು ಅಲ್ಲಿಯೆ ಇರು, ನಾನು ಅಲ್ಲೆಗೆ ಬರುತ್ತೇನೆ ಅಂತಾ ಹೇಳಿ ಮದ್ಯಾಹ್ನ 12-20 ರ ಸುಮಾರಿಗೆ ರಾಘವೇಂದ್ರ ರೇವಣಕರ ಇತನು ತನ್ನ ಎನಪೀಲ್ಡ್ ಮೋಟರ್ ಸೈಕಲನಲ್ಲಿ ಬಂದು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ನಿನಗೆ ಎಷ್ಟು ಸಲ ಹೇಳಬೇಕು. ಸಂಘದ ಸಭೆ ಕರೆದು ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡು. ನಿನಗೆ ಹೀಗೆ ಬಿಟ್ಟರೆ ಆಗುವದಿಲ್ಲ ಅಂತಾ ಹೇಳಿ ಮೋಟಾರ ಸೈಕಲನ ಚಾವಿಯಿಂದ ನನ್ನ ಮೂಗಿನ ಮೆಲೆ ಹೊಡೆದಿದ್ದಲ್ಲದೆ, ಕೆನ್ನೆ ಮತ್ತು ತಲೆಯ ಮೇಲೆ ಕೈಯಿಂದ ಹೊಡೆದು, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪಿಎಸೈ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಪಾದಿತ ರಾಘವೇಂದ್ರ ಅವರ ಮೇಲೆ 504, 506, 341, 324, 323 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
