ಅಂಕೋಲಾ : ಕೆನರಾಟಿವಿಯ 20 ನೇವರ್ಷದಸಂಭ್ರಮದಅಂಗವಾಗಿವಿಭಿನ್ನರೂಪುರೇಷೆಯೊಂದಿದೆ “ಕೆನರಾಕಫ್” 2023 ತಾಲೂಕಾ ಮಟ್ಟದ ಕ್ರಿಕೇಟ್ ಟೂರ್ನಾಮೆಂಟ್ ಆಯೋಜಿಸಲಾಗಿದೆ ಎಂದು ಕೆನರಾ ಟಿವಿಯ ಪ್ರಧಾನ ಸಂಪಾದಕ ಮಂಜುನಾಥ ನಾಯ್ಕ ಬೆಳಂಬಾರ ಹೇಳಿದರು.
ಅವರು ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕೆನರಾ ಬಾಯ್ಸ್ ಸಮಿತಿಯ ಅಡಿಯಲ್ಲಿ ಡಿ. 8,9,10 ರಂದು ಅಂಕೋಲಾದ ಜೈ ಹಿಂದ್ ಮೈದಾನದಲ್ಲಿ ಕೆನರಾ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಂದ್ಯಾವಳಿಯ ನೇರ ಪ್ರಸಾರವನ್ನು ಕೆನರಾ ಟಿವಿ ಹಾಗೂ ಆ್ಯಪ್ನಲ್ಲಿ ವೀಕ್ಷಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೃಹತ ಎಲ್ಇಡಿ ಸ್ಕಿçÃನ್ ಹಾಗೂ ಥರ್ಡ್ ಅಂಪೈರ್ ನಿರ್ಣಯಕ್ಕೆ ಡಿಜಿಟಲ್ ನಿರ್ಣಯ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ ಎಂದರು.
ಕೆನರಾ ಪಂದ್ಯಾವಳಿ ಸಮಿತಿಯ ಕಾರ್ಯದರ್ಶಿ ಮಂಜುನಾಥ ನಾಯ್ಕ ಮಾತನಾಡಿ ತಾಲೂಕಿನಲ್ಲಿಯೇ ಪ್ರಪ್ರಥಮ ಬಾರಿಗೆ ವಿನೂತನವಾಗಿ ಈ ಪಂದ್ಯಾವಳಿ ಕೆನರಾ ಟಿವಿಯ ಅಡಿಯಲ್ಲಿ ತೆರೆದುಕೊಳ್ಳಲಿದೆ. ಪ್ರಥಮ ಬಹುಮಾನ 30001 ರೂ, ದ್ವಿತೀಯ ಬಹುಮಾನ 15001 ರೂ ಹಾಗೂ ಆಕರ್ಷಕ ಟ್ರೋಫಿ ಮತ್ತು ಇತರ ಬಹುಮಾನಗಳ ಜೊತೆಗೆ ಪಂದ್ಯಾವಳಿಗಳಲ್ಲಿ ಅಂತಾರಾಷ್ಟಿçÃಯ ಮಟ್ಟದ ಎಲ್ಲಾ ನಿಯಮಗಳು ಪಂದ್ಯಾವಳಿಯಲ್ಲಿ ಇರಲಿದೆ ಎಂದರು.
ಸಮಿತಿಯ ಸದಸ್ಯ ಸುದೀಪ್ ಕೇಣಿ ಮಾತನಾಡಿ ಹೆಚ್ಚು ಶ್ರಮ ವಹಿಸಿ ಪಂದ್ಯಾವಳಿ ಸಂಘಟಿಸಲಾಗಿದೆ. ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಆಸಕ್ತ ತಂಡಗಳು ಮಂಜುನಾಥ ನಾಯ್ಕ (9964215459), ಸುದೀಪ (8317382439) ಮಂಜುನಾಥ (9844388399) ಈ ನಂಬರಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಪಾಂಡುರAಗ ಕೃಷ್ಣಾ ನಾಯ್ಕ ಅಭಿಷೇಕ ನಾಯ್ಕ, ಸುಂದರ್ ಖಾರ್ವಿ, ರಾಜೇಶ್ ನಾಯ್ಕ, ಪಾಂಡುರAಗ ನಾವಗೆ, ಭಾಸ್ಕರ ಮಾರುತಿ ನಾಯ್ಕ, ಸುಧಾಕರ ನಾಯ್ಕ ಉಪಸ್ಥಿತರಿದ್ದರು.
