ಅಂಕೋಲಾ : ಕ್ಷತ್ರೀಯ ಕೋಮಾರಪಂಥ ಸಮಾಜದ ಹೊಂಡೆ ಉತ್ಸವದಲ್ಲಿ ಭಜರಂಗಿಯ ಕಲಾಕೃತಿಯನ್ನು ಆಕರ್ಷಕವಾಗಿ ನಿರ್ಮಿಸಿದ ಕಲಾಕಾರ ದಿನೇಶ ಡಿ ಮೇತ್ರಿ ಅವರ್ಸಾ ಅವರನ್ನು ಕೇಣಿಯ ನಾಗರಿಕರು ಸನ್ಮಾನಿಸಿ ಗೌರವಿಸಿದರು.
ಕೇಣಿಯ ಶ್ರೀ ದತ್ತಾತ್ರೇಯ ದೇವಸ್ಥಾನದ ಆವಾರದಲ್ಲಿ ಆಯೋಜಿಸುದ್ದ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು. ಭಾವಿಕೇರಿ ಗ್ರಾಪಂ ಮಾಜಿ ಸದಸ್ಯ ಅಮರ ನಾಯ್ಕ. ಕೇಣಿ ಮಾತನಾಡಿ, ತನ್ನ ಕಲಾ ಶ್ರೀಮಂತಿಕೆಯ ಮೂಲಕ ನಾಡಿನಾದ್ಯಂತ ಹೆಸರು ಗಳಿಸಿರುವ ದಿನೇಶ ಮೇತ್ರಿ ಅವರು ನಮ್ಮ ಕೋಮಾರಪಂಥ ಸಮಾಜದ ಹೆಮ್ಮೆಯ ಕುಡಿ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ಸಂತೋಷ ಆರ್. ನಾಯ್ಕ ಮಾತನಾಡಿ, ಸಾವಿರಾರು ಕಲಾಕೃತಿಗಳು ದಿನೇಶ ಮೇತ್ರಿ ಅವರ ಕಲಾಕುಂಚದಲ್ಲಿ ಮೂಡಿ ಬಂದು ಜನಮಾನಸದಲ್ಲಿ ಅಚ್ಚಳಿಯುವಂತೆ ಮಾಡಿದೆ. ಅತಿ ಕಡಿಮೆ ಸಂಬಾವನೆಯಲ್ಲಿ ಅವರ ಕಲಾ ಸೇವೆ ನಡೆಯುತ್ತಿರುವದು ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪುಂಡ್ಲೀಕ ನಾಯ್ಕ, ಗಣಪತಿ ಬೇಲಿಪ್, ಘನಶ್ಯಾಮ ನಾಯ್ಕ, ಮಂಜುನಾಥ ನಾಯ್ಕ, ಮಾದೇವ ಬೇಲಿಪ್, ದೇವಸ್ಥಾನ ಕಮಿಟಿಯ ಅಧ್ಯಕ್ಷ ರವಿ ಟಿ. ನಾಯ್ಕ, ಉದಯ ವಿ. ನಾಯ್ಕ, ಸುನೀಲ ಆರ್. ನಾಯ್ಕ ಸೇರಿದಂತೆ ಕೇಣಿ ಊರ ನಾಗರಿಕರು ಉಪಸ್ಥಿತರಿದ್ದರು.
