ರಾಘು ಕಾಕರಮಠ.
ಅಂಕೋಲಾ : ವಿಶ್ವದ ಬೆಸ್ಟ್ ಥ್ರೋಡೌನ ಸ್ಪೆಷಲಿಸ್ಟ್, ಭಾರತ ಕ್ರಿಕೇಟ್ ತಂಡದ ಮುಖ್ಯ ಟ್ರೇನರ್ ರಾಘು ದಿವಗಿ ಅವರು ಅಂಕೋಲಾದ ಮಠಾಕೇರಿಯಲ್ಲಿರುವ ಶ್ರೀ ವೀರ ವಿಠ್ಠಲ ಮಠಕ್ಕೆ ಧರ್ಶನ ಪಡೆದು, ಶ್ರೀ ವಿದ್ಯಾಧೀಶ ಶ್ರೀಪಾದ ಸ್ವಾಮೀಜಿಗಳಿಂದ ಆರ್ಶಿವಾದ ಪಡೆದರು.
ವಿಶ್ವ ಕಫ್ ಕ್ರಿಕೇಟ್ನ ನಂತರ ಅಹಮಬಾದದಿಂದ ನೇರವಾಗಿ ಅಂಕೋಲಾಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ಸ್ವಾಮೀಜಿಗಳಿಂದ ಮುದ್ರಾ ದಾರಣೆ ಪಡೆದು ಶೃದ್ಧಾಭಕ್ತಿ ಮರೆದರು.
ಉಕ ಜಿಲ್ಲೆಯ ಕುಮಟಾ ತಾಲೂಕಿನವರಾದ ರಾಘು ಅವರು ಕ್ರಿಕೇಟಿಗ ಆಗುವ ಕನಸು ಕಂಡಿದ್ದರು. ಆದರೆ ಆ ಕನಸು ನನಸಾಗದಿದ್ರೂ, ವಿಶ್ವದ ಬೆಸ್ಟ್ ಥ್ರೋಡೌನ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ರಾಘು ಎಮ್.ಸಿ.ಎ. ಗೆ ಸೇರಿಕೊಂಡ ಕೆಲವೆ ದಿನಗಳಲ್ಲಿ ರಾಹುಲ ದ್ರಾವಿಡ್ ಮತ್ತು ಸಚಿನ್ ತೆಂಡಲ್ಕೂರ ಅವರ ಗಮನ ಸೆಳೆದಿದ್ದರು.
2011 ರಲ್ಲಿ ಸಚೀನ ಹಾಗು ರಾಹುಲ ಅವರ ನೆರವಿನಿಂದ ಟೀಮ್ ಇಂಡಿಯಾದ ಸಹಾಯಕ ಕೋಚ್ ಸಿಬಂದಿಯಾಗಿ ಆಯ್ಕೆಯಾದರು. ಆ ಬಳಿಕ ರಘು ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಬಿಟ್ರು. ಏಕೆಂದರೆ ಬಾಟ್ಸಮನಗಳ ಪುಟ್ ವರ್ಕ್ ನೋಡಿ ರಘು ಥ್ರೋಡೌನ ಮಾಡುತ್ತಾರೆ. ಇದೇ ಕಾರಣಕ್ಕೆ ರಘು ಥ್ರೋಡೌನಲ್ಲಿ ಪ್ರಾಸ್ಟೀಸ್ ಮಾಡಿದ ಭಾರತೀಯ ಬಾಟ್ಸಮನಗಳು ವಿದೇಶಿ ನೆಲದಲ್ಲಿ ನಿರರ್ಗಳವಾಗಿ ಬ್ಯಾಟಿಂಗ್ ಮಾಡೋಕೆ ಶುರು ಮಾಡಿದ್ರು.
ರಘು ಟೀಮ್ ಇಂಡಿಯಾ ಸೇರಿಕೊಂಡ ಮೇಲೆ ಭಾರತೀಯ ಬಾಟ್ಸಮನಗಳ ಖದರ ಬದಲಾವಣೆಯಾಗಿತ್ತು. ಬೌನ್ಸಿ ಪಿಚ್ಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಭಾರತೀಯ ತಂಡದ ಬಾಟ್ಸಮನಗಳು ಥ್ರೋಡೌನ ಸ್ಪೆಷಲಿಸ್ಟ್ ರಘುನಿಂದ ಅದ್ಬುತ್ ಪ್ರದರ್ಶನ ನೀಡುತ್ತಿದ್ದಾರೆ.
2013 ರ ಬಳಿಕ ವಿದೇಶಿ ನೆಲದಲ್ಲಿ ಸ್ಟಾರ್ ವೇಗಿ ಬೌಲರಗಳನ್ನು ಎದುರಿಸಲು ರಘು ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡು ಸ್ವತ: ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಸ್ತುತ ನಾಯಕ ರೋಹಿತ್ ಶರ್ಮಾ ಹಾಡಿ ಹೊಗಳಿದ್ದಾರೆ.
ರಘು ಬೌಲಿಂಗ್ ಸ್ಟಿಕ್ ಬಳಸಿ ಪ್ರತಿ ಗಂಟೆಗೆ 150 ರಿಂದ 180 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ಯ ಹೊಂದಿದ್ದಾರೆ. 1 ನಿಮಿಷದಲ್ಲಿ 3 ಥ್ರೋ ಬಾಲ್ಗಳನ್ನು ಎಸೆಯುವ ರಘು, 1 ಗಂಟೆಗೆ 180 ಕ್ಕೂ ಥ್ರೋ ಬಾಲ್ ಎಸೆಯುತ್ತಾರೆ. ಆದರೆ ಇದನ್ನು 3 ನೆಟ್ ಬಾಲರ್ಗಳಿಂದಲೂ ಎಸೆಯಲು ಸಾಧ್ಯವಾಗದಿರುವದು ವಿಶೇಷ ಎನಿಸಿದೆ. ಹೀಗಾಗಿ ಭಾರತೀಯ ತಂಡದ ಪಾಲಿಗೆ ರಘು ಅದೃಷ್ಟದ ರೂಪದಲ್ಲಿ ನಿಂತಿದ್ದಾರೆ ಎಂದರೆ ತಪ್ಪಾಗಲಾದರು.
ರಘು ಇಂಡಿಯಾ ತಂಡಕ್ಕೆ ಎಷ್ಟು ಬದ್ಧರಾಗಿದ್ದಾರೆ ಎಂದರೆ 2018 ರಲ್ಲಿ ಇಂಗ್ಲೇ0ಡ್ ಹಾಗೂ ವೆಲ್ಸ್ ಕ್ರಿಕೆಟ್ ಮಂಡಳಿ ರಘುಗೆ ಲಕ್ಷಾಂತರ ರೂ ವೇತನದ ಆಫರ್ ನೀಡಿದರೂ ಅದನ್ನು ತಿರಸ್ಕರಿಸಿದ್ರು. ಹಾಗೆ ಐಪಿಎಲ್ ನಲ್ಲಿಯೂ ಯಾವುದೇ ಪ್ರಾಂಚೈಸಿಗೆ ಸೇರದ ರಘು ಕೇವಲ ರಘು ಟೀಮ್ ಇಂಡಿಯಾಗೆ ಮಾತ್ರ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ.
ವಿಶ್ವ ಮಟ್ಟದಲ್ಲಿ ಬೆಸ್ಟ್ ಥ್ರೋಡೌನ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ರಘು ಅವರು ನಮ್ಮ ಉತ್ತರ ಕನ್ನಡದ ಹೆಸರನ್ನು ಜಗತ್ತಿನ ಸಾಧನೆಯ ಪುಟದಲ್ಲಿ ದಾಖಲಿಸಿರುವದು ಹೆಮ್ಮೆಯನ್ನು ಉಂಟು ಮಾಡಿದೆ.

