ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಸಮುದ್ರ ಪ್ರವೇಶಿಸುವ ಅಳಿವೆ ಬಾಗಿಲು ಮತ್ತು ಹಿನ್ನೀರು ಪ್ರದೇಶದಲ್ಲಿ ಸಿಗುವ ವಿಶೇಷ ತಳಿಯ ಕ್ರಾಭ್ (ಏಡಿ) ಯೊಂದು ಮೀನುಗಾರರ ಬಲೆಗೆ ಸಿಕ್ಕಿದೆ.
ಮಾದನಗೇರಿಯ ಭೈರವ ನಾಗಪ್ಪ ಹರಿಕಂತ್ರ ಅವರಿಗೆ ದೊರೆತ ಈ ಕ್ರಾಭ್ ( ಏಡಿ) ಯು ಸಂಯಾಮಿ ಕಾಲುಗಳನ್ನು ಹೊಂದಿದೆ. ಅಲ್ಲದೇ 2.5 ಕೆಜಿಯ ಭಾರಿ ತೂಕ ಹೊಂದಿದ ಈ ಏಡಿಯು ಒಂದು ಅಡಿ ಅಗಲವಿದೆ. ವಿದೇಶಕ್ಕೆ ರಪ್ತಾಗುವ ಈ ಏಡಿಗೆ ಭಾರಿ ಭೇಡಿಕೆ ಇದೆ.
ಕಳೆದ 30 ವರ್ಷದಿಂದ ಮಾದನಗೇರಿಯ ಆನಂದು ಹರಿಕಂತ್ರ, ಭೈರವ ಹರಿಕಂತ್ರ ಹಾಗೂ ಮೋಹನ ಹರಿಕಂತ್ರ ಸಹೋದರರು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಈ ಏಡಿಯ ವಿಶೇಷವಾಗಿ ಗಮನ ಸೆಳೆದಿದೆ. ಅಲ್ಲದೆ ಭಾರಿ ಬೆಲೆಯು ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
