
ಸಿಬಿಐ ಅಧಿಕಾರಿ ಎಂದು ಹೇಳಿ ತಮಾಷೆ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿ ಕೊಂಡನೆ ಹೊಸ್ಕೇರಿಯ ರಾಘವ ನಾಯಕ..?
ರಾಘು ಕಾಕರಮಠ.
ಅಂಕೋಲಾ : ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿ ಎಂದು ಹೇಳಿಕೊಂಡು, ಮೊಬೈಲ ಮೂಲಕ ಜೀವ ಬೆದರಿಕೆ ಹಾಗೂ ಬ್ಲಾಕಮೇಲ ಮಾಡಿದ ಪ್ರಕರಣವು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಜಿಗಿರಿ ಗೆಳೆತನದಲ್ಲಿ, ತಮಾಷೆ ಹೋಡಲು ಹೋಗಿ, ಇಲ್ಲಿನ ತಹಸೀಲ್ದಾರ ಕಚೇರಿಯ ಸರ್ವೆಯರ ಹೊಸ್ಕೇರಿಯ ರಾಘವ ನಾಯಕ ಕಾನೂನಿನ ಇಕ್ಕಿಟ್ಟಿಗೆ ಸಿಲುಕುವಂತಾಗಿದ್ದು, ಪೊಲೀಸ್ ತನಿಖೆಯ ವೇಳೆ ಬಯಲಿಗೆ ಬಂದಿದೆ.
ಅಕ್ಟೋಬರ್ 23 ರ ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ 9148951637 ಮೋಬೈಲ ಸಂಖ್ಯೆಯಿAದ ಪೋನ್ ಮಾಡಿ ತಾನು ಸಿಬಿಐ ಅಧಿಕಾರಿಯೆಂದು ಎಂದು ಹೇಳಿ ಬ್ಲಾಕಮೇಲ ಹಾಗೂ ಜೀವ ಬೆದರಿಕೆಗೆ ಒಡ್ಡಿದ್ದರು ಎಂದು ಪೊಲೀಸ್ ದೂರನ್ನು ವಂದಿಗೆಯ ರಮೇಶ ನಾರಾಯಣ ನಾಯಕ ಅವರು ದಾಖಲಿಸಿದ್ದರು.
ಡೈನಾಮಿಕ್ ಅಧಿಕಾರಿ ಸಿಪಿಐ ಸಂತೋಷ ಶೆಟ್ಟಿ ಪ್ರಕರಣದ ಸತ್ಯಾನುಸ್ಯತೆ ಅರಿಯಲು ವಿವಿಧ ಆಯಾಮಗಳಲ್ಲಿ ತನಿಖೆಯ ಆಳಕ್ಕೆ ಇಳಿದಿದ್ದರು. ಈ ವೇಳೆ ಪ್ರಾಥಮಿಕವಾಗಿ ಈ ಮೋಬೈಲ ಸಂಖ್ಯೆ ಅಂಕೋಲಾದ ತಹಸೀಲ್ದಾರ ಕಚೇರಿಯಲ್ಲಿ ಸರ್ವೆಯರ್ ಆಗಿ ಕರ್ತವ್ಯದಲ್ಲಿರುವ ಹೊಸ್ಕೇರಿಯ ರಾಘವ ನಾಯಕ ಅವರದಾಗಿತ್ತು ಎಂದು ತಿಳಿದು ಬಂದಿತ್ತು.
ರಾಘವ ನಾಯಕ ಅವರನ್ನು ವಿಚಾರಣೆ ನಡೆಸಿದಾಗ ನಾವಿಬ್ಬರು ಕಳೆದ 4 ವರ್ಷಗಳಿಂದ ಆತ್ಮೀಯ ಗೆಳೆತನದಲ್ಲಿ ಇದ್ದ ಬಗ್ಗೆ ದಾಖಲೆಯನ್ನು ಮುಂದಿಟ್ಟಿದ್ದಾರೆ. ಕಳೆದ 4 ವರ್ಷಗಳಿಂದ 4526 ಕ್ಕೂ ಹೆಚ್ಚು ಪರಸ್ಪರ ಪೋನ್ ಮಾಡಿರುವದು ಕೂಡ ಪೊಲೀಸರಿಗೆ ತಾಂತ್ರಿಕ ಸಾಕ್ಷಿ ಒದಗಿಸಿತ್ತು.
ಸಂಗ್ಯಾ-ಬಾಳ್ಯಾರ0ತಿದ್ದ ಈ ಜಿಗರಿ ಗೆಳೆಯರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವದು ಕೂಡ ಸಾರ್ವಜನಿಕರಲ್ಲಿ ಹುಬ್ಬೇರುವಂತೆ ಮಾಡಿತ್ತು. ರಾಘು ನಾಯಕ ಠಾಣೆಗೆ ಹಾಜರಾಗಿ ನ್ಯಾಯಾಲಯ ನೀಡಿದ ನೀರಿಕ್ಷಣಾ ಜಾಮೀನು ಪ್ರತಿಯನ್ನು ಠಾಣೆಗೆ ನೀಡಿ ತನಿಖೆಗೆ ಸಹಕರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಘು ನಾಯಕ ಪ್ರತಿಕೃಯಿಸಿ, ನಾನು ಹೊಸ ಸಿಮ್ ತೆಗೆದುಕೊಂಡಿದ್ದೆ. ಅತ್ಯಂತ ಆತ್ಮೀಯ ಗೆಳೆಯನಾಗಿದ್ದ ರಮೇಶ ನಾಯಕ ಅವರಿಗೆ ತಮಾಷೆ ಮಾಡಲೆಂದು ಕರೆ ಮಾಡಿದ್ದು ನಿಜ್. ಆದರೆ ಇದನ್ನೆ ಅಪಾರ್ಥ ಕಲ್ಪಿಸಿಕೊಂಡು, ರಮೇಶ ನಾಯಕ ಅವರು ಪೊಲೀಸ್ ಎಫ್.ಐ.ಆರ್. ದಾಖಲಿಸಿರುವದು ಮನಸ್ಸಿಗೆ ತುಂಬಾ ತಂದಿದೆ. ನಾನು ಹಾಗೂ ರಮೇಶ ನಡುವೆ ಇರುವ ಅತ್ಯಂತ ಆತ್ಮೀಯ ಸಂಬ0ದದ ಬಗ್ಗೆ ಪೊಲೀಸ್ ಇಲಾಖೆಗೆ ಸಾಕ್ಷಿ ಸಮೇತ ಮನವರಿಕೆ ಮಾಡಿದ್ದೇನೆ. ನನ್ನನ್ನು ಮಾನಸಿಕವಾಗಿ ಹಿಂಸಿಸುವ ಹಿಂದಿನ ಉದ್ದೇಶ ರಮೇಶ ನಾಯಕ ಅವರಿಗೆ ಏನಿದೆ ಎಂದು ಅರ್ಥವಾಗುತ್ತಿಲ್ಲ. ಎಲ್ಲವನ್ನೂ ಕಾನೂನಿನ ಮೂಲಕ ಇರ್ತಥ್ಯ ಪಡಿಸಿಕೊಂಡು, ನನ್ನ ಮೇಲೆ ಬಂದಿರುವ ಆರೋಪವನ್ನು ಮುಕ್ತವಾಗುವ ಅಛಲವಾದ ನಮ್ಮ ನಂಬಿಕೆ ನನ್ನಲ್ಲಿದೆ ಎಂದು ತಿಳಿಸಿದ್ದಾರೆ.
ದೂರು ದಾಖಲಿಸಿರುವ ರಮೇಶ ನಾಯಕ ಮಾತನಾಡಿ, ತಮಾಷೆಗೂ ಒಂದು ಮೀತಿ ಇರುತ್ತದೆ. ಆದರೆ ಇದು ತಮಾಷೆಗೂ ಮೀರಿದ ದುರ್ವತನೆ ಆಗಿದೆ. ನನಗೆ ಸಿಬಿಐ ಅಧಿಕಾರಿ ಎಂದು ಬ್ಲಾಕಮೇಲ ಹಾಗೂ ಬೆದರಿಕೆ ಒಡ್ಡಿದ ನಾಲ್ಕು ದಿನದ ನಂತರ ಪೊಲೀಸ್ ದೂರು ನೀಡಿದ ಮೇಲೆ ರಾಘು ನಾಯಕ ಪೋನ್ ಮಾಡಿ ನಾನು ಮಾಡಿದ್ದು ಎಂದು ಹೇಳಿದ್ದಾರೆ. ಅಂದೆ ಪೋನ್ ಮಾಡಿ, ನಾನೆ ಮಾಡಿದ್ದು ಎಂದು ಹೇಳಬಹುದಿತ್ತು ಅಲ್ವಾ.
ಈ ಪ್ರಕರಣದಿಂದ ನಮ್ಮ ಮನೆಯಲ್ಲಿ ನಾವು ಸರಿಯಾಗಿ ನಿದ್ದೆ ಕೂಡ ಮಾಡಿಲ್ಲ. ಅಷ್ಟು ಆತಂಕಗೊ0ಡಿದ್ದೇವು. ಆತ್ಮೀಯ ಗೆಳೆಯನಾಗಿದ್ದರೆ ಹೀಗೆ ಮಾಡುತ್ತಿದ್ದನೆ. ಇದರ ಹಿಂದೆ ಬೇರೆಯದೆ ಕರಾಮತ್ತು ಅಡಗಿದೆ ಎಂದು ನನಗೆ ಗೊತ್ತಾಗಿದೆ. ನಾನು ಈ ಪ್ರಕರಣವನ್ನು ಇಲ್ಲಿಗೆ ಬಿಡುವದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಎಲ್ಲಾ ದಾಖಲೆಗಳನ್ನು ನೀಡುವಂತೆ ಕೇಳಿಕೊಂಡಿದ್ದೇನೆ. ನಾನು ಕಳೆದೊಂದು ವರ್ಷದ ಹಿಂದೆ ಸರ್ವೆಯರ್ ಒಬ್ಬರ ನನ್ನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಾಗ ಅವನ್ನು ಲೋಕಾಯುಕ್ತದ ಬಲೆಗೆ ಬೀಳಿಸಿದ್ದೆ. ಇದಕ್ಕೂ ರಾಘು ನಾಯಕ ಅವರು ನನಗೆ ಕರೆ ಮಾಡಿದಕ್ಕೂ ಒಂದಕ್ಕೊ0ದು ಸಂಬ0ದ ಇದ್ದರೂ ಇರಬಹುದು. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣ ಏನಾಗಿತ್ತು..?
ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿ ಎಂದು ಹೇಳಿಕೊಂಡು, ಮೊಬೈಲ ಮೂಲಕ ಜೀವ ಬೆದರಿಕೆ ಹಾಗೂ ಬ್ಲಾಕಮೇಲ ಮಾಡಿದ್ದಾರೆ ಎಂದು ವಂದಿಗೆಯ ರಮೇಶ ನಾರಾಯಣ ನಾಯಕ ಪೊಲೀಸ್ ದೂರು ನೀಡಿದ್ದರು.
ಸಾಮಾಜಿಕ ಕಾರ್ಯಕರ್ತರಾಗಿರುವ ವಂದಿಗೆಯ ರಮೇಶ ನಾರಾಯಣ ನಾಯಕ ಅವರು ಅಪಘಾತಗೊಂಡು ಮಂಗಳೂರಿನ ತೇಜಸ್ವಿನಿ ಆಸ್ಪತ್ತೆಯಲ್ಲಿ ಚಿಕಿತ್ಸೆಯನ್ನು ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಹೀಗೆ ಮನೆಯಲ್ಲಿ ವಿಶ್ರಾಂತಿಯಲ್ಲಿರುವ ರಮೇಶ ನಾಯಕ ಅವರಿಗೆ 23-10-2003 ರ ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ 9148951637 ಮೊಬೈಲ್ ಸಂಖ್ಯೆಯಿ0ದ ಕರೆ ಬಂದಿದೆ. ರಮೇಶ ನಾಯಕ ಅವರು ಕರೆಯನ್ನು ಸ್ವೀಕರಿಸಿದಾಗ ಇಂಗ್ಲೀಷ್ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ನನಗೆ ಇಂಗ್ಲೀಷ್ ಬರುವದಿಲ್ಲ ಎಂದು ಹೇಳಿ ಮೋಬೈಲನ್ನು ರಮೇಶ ನಾಯಕ ಅವರ ಮಗನ ಬಳಿ ನೀಡಿದ್ದಾರೆ.
ಕರೆ ಮಾಡಿದ ವ್ಯಕ್ತಿ ರಮೇಶ ನಾಯಕ ಅವರ ಮಗನನ್ನು ಉದ್ದೇಶಿಸಿ ಇಂಗ್ಲೀಷ್ನಲ್ಲಿ ರಮೇಶ್ ನಾಯಕ ಮನೆಯಲ್ಲಿ ಇದ್ದಾರೆಯೇ ಎಂದು ಕೇಳಿದ್ದಾರೆ. ನಾವು ಸಿಬಿಐನವರು ನಾವು ನಿಮ್ಮ ಮನೆಗೆ ಇನ್ವೆಸ್ಟಿಗೇಶನ್ ಮಾಡಲು ಬರುತ್ತಿದ್ದೇವೆ.
ನಿಮ್ಮ ತಂದೆಗೆ ಮನೆಯಿಂದ ಹೊರಬಾರದು ಎಂದು ತಿಳಿಸು, ನಿಮ್ಮ ಮನೆಯ ಲೊಕೇಶನ್ ಎಲ್ಲಿದೆ ಎಂದು ಕೇಳಿದ್ದಾರೆ. ಆಗ ನಾವು ವಂದಿಗೆ ಗ್ರಾಮದಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ. ಮತ್ತು ನೀವು ಯಾವ ಇನ್ವೆಸ್ಟಿಗೇಶನ್ ಮಾಡುತ್ತಿದ್ದೀರಿ ಎಂದು ಕೇಳಿದಾಗ ಅದಕ್ಕೆ ಕರೆ ಮಾಡಿದ ವ್ಯಕ್ತಿ ಅದೆಲ್ಲ ನಿನಗೆ ಬೇಡ, ನಾವು ನಿಮ್ಮ ಮನೆಗೆ ಬರುತ್ತೇವೆ, ಈಗ ನಾವು ಕಾರವಾರದಲ್ಲಿ ಇದ್ದೇವೆ. ಈ ಮೊಬೈಲ್ ಕಾಲನ ಕುರಿತು ಪೊಲೀಸರಿಗಾಗಲಿ ಅಥವಾ ಬೇರೆ ಯಾರಿಗೊಬ್ಬರಿಗೂ ತಿಳಿಸ ಕೂಡದು ಎಂದು ಹೇಳಿ ಥಟ್ಟನೆ ಕಾಲ್ ಕಟ್ ಮಾಡಿದ್ದಾರೆ.
ನಂತರದಲ್ಲಿ ಮತ್ತೆ ಸುಮಾರು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಕಾಲ್ ಮಾಡಿ, ರಮೇಶ ನಾಯಕ ಅವರು ಮನೆಯಿಂದ ಹೊರಗೆ ಬರಬಾರದು ಎಚ್ಚರಿಕೆ ನೀಡಿ ಪೋನ್ ಮಾಡಿದ್ದಾರೆ.
ಪುನ: ಸಾಯಂಕಾಲ 5-10 ರ ಸುಮಾರಿಗೆ ಅದೇ ವ್ಯಕ್ತಿಯಿಂದ ಅದೇ ನಂಬರಿನಿ0ದ ಕಾಲ ಬಂದಾಗ ರಮೇಶ ನಾಯಕನಿಗೆ ಮೊಬೈಲ್ ಕೊಡು, ನಾವು ರಮೇಶ ನಾಯಕನ ವಾಯ್ಸ್ ಕೇಳಬೇಕು, ರಮೇಶ್ ನಾಯಕನು 3 ರಿಂದ 4 ದಿನ ಮನೆಯಿಂದ ಹೊರಗೆ ಬರಬಾರದು. ಆತನಿಗೆ ಜೀವಕ್ಕೆ ಅಪಾಯ ಇದೆ ಎಂದು ಹೇಳಿದಾಗ, ನನ್ನ ತಂದೆಗೆ ಯಾರಿಂದ ಜೀವಕ್ಕೆ ಅಪಾಯವಿದೆ ಎಂದು ಕೇಳಿದಾಗ, ಅವರು ಅದನ್ನೆಲ್ಲ ತಿಳಿಸಲು ಬರುವುದಿಲ್ಲ, ನಿಮ್ಮ ಮನೆ ಅಗ್ರಿಕಲ್ಚರ್ ಆಫೀಸಿನ ಹತ್ತಿರವಿದೆಯಲ್ಲ, ನಾವು ಇಲ್ಲೇ ಇದ್ದೇವೆ, ನಮ್ಮ ನಂಬರಿಗೆ ಕಾಲ್ ಮಾಡಬೇಡ‘ ಎಂತ ಹೇಳಿ ಕಾಲ್ ಕಟ್ ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ರಮೇಶ ನಾಯಕ ಅವರು ಉಲ್ಲೇಖಿಸಿದ್ದರು.
ಹವಾಲ್ದಾರ ಸುಧಾಕರ ಮಾದಪ್ಪ ಈ ಬಗ್ಗೆ ದೂರು ಪಡೆದು, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಸಿಪಿಐ ಸಂತೋಷ ಶೆಟ್ಟಿ ಪ್ರಕರಣದ ತನಿಖೆ ಕೈಗೊಂಡಿದ್ದರು.
