ಅಂಕೋಲಾ : ಹಿರಿಯ ನ್ಯಾಯವಾದಿ ಪಳ್ಳಿಕೇರಿಯ ಪಾಂಡು ರಾಮಾ ನಾಯ್ಕ (52) ಹೃದಯಾಘಾತದಿಂದ ಮಂಗಳವಾರ ನಿಧನರಾದರು.
ಅವರು ಮಂಗಳವಾರ ಅಂಕೋಲಾದ ನ್ಯಾಯಾಲಯದ ಕಲಾಪಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಪಾಂಡು ನಾಯ್ಕ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೆ ಅವರನ್ನು ಚಿಕಿತ್ಸೆಗಾಗಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾರವಾರದ ಸಿವಿಲ್ ಆಸ್ಪತ್ರಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾರೆ.
20 ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡ, ಕ್ರಿಯಾಶೀಲ ವ್ಯಕ್ತಿತ್ವದ ಪಾಂಡು ನಾಯ್ಕ ಅವರು ಅಂಕೋಲಾದ ವಕೀಲರ ಸಂಘದ ಅಧ್ಯಕ್ಷರಾಗಿಯೂ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಹೆಮ್ಮೆಗೆ ಪಾತ್ರರಾಗಿದ್ದರು.
ಎಲ್ಲರೊಂದಿಗೂ ಚೆನ್ನಾಗಿದ್ದು, ಆತ್ಮೀಯನಾಗಿದ್ದ ಪಾಂಡು ರಾಮಾ ನಾಯ್ಕ ಅವರು ಪತ್ನಿ ಕಾವ್ಯಾ, ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅಂಕೋಲಾ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಮೃತ ಆತ್ಮಕ್ಕೆ ಸಂತಾಪ ಸೂಚಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.
