ಮಕ್ಕಳ ಮೇಲೆ ಒತ್ತಡ ಸರಿಯಲ್ಲ : ಪಿಎಸೈ ಪ್ರೀಯಾಂಕಾ ನ್ಯಾಮಗೌಡ

ಅಂಕೋಲಾ : ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ಪಡೆಯಲು ಅವಕಾಶ ಕೊಟ್ಟು, ಅವರಲ್ಲಿರುವ ಕೌಶಲ್ಯತೆಯನ್ನು ಪತ್ತೆ ಹಚ್ಚಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಗುರುತರ ಜವಬ್ದಾರಿಯನ್ನ ಪಾಲಕರು ಅರಿಯಬೇಕಿದೆ ಎಂದು ಬೇಲೆಕೆರಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿಎಸೈ ಪ್ರಿಯಾಂಕಾ ನ್ಯಾಮಗೌಡ ಹೇಳಿದರು.

       ಅವರು ಹಟ್ಟಿಕೇರಿಯಲ್ಲಿ ಜೇಸೀ ಡೇ ಸಂಭ್ರಮೋತ್ಸವವನ್ನು ಉದ್ಘಾಟಸಿ ಮಾತನಾಡಿ, ಅನೇಕ ಸೈಬರ್ ಪ್ರಕರಣದಲ್ಲಿ ಮಕ್ಕಳು ಕೂಡ ಸಿಲುಕುತ್ತಿರುವದು ಆಂತಕಕಾರಿ ಸಂಗತಿಯಾಗಿದೆ. ಮಕ್ಕಳ ಮೇಲೆ ಗಮನ ಇಟ್ಟು ಮೋಬೈಲನಿಂದ ದೂರ ಇಡಲು ಪಾಲಕರು ಮುಂದಾಗಬೆಕು ಎಂದರು.

       ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಅಂಕೋಲೆಯ ಹಟ್ಟಿಕೇರಿಯ ಅತಿ ಹಿಂದುಳಿದ ಪ್ರದೇಶದ ಪರಿಸರದಲ್ಲಿ ಹೈಟೆಕ್ ಶಿಕ್ಷಣದ ಕ್ರಾಂತಿಯನ್ನ ಹುಟ್ಟು ಹಾಕಿದ ಜೇಸೀ ಶಾಲೆಯ ಲತಾ ಮಂಗಲದಾಸ ಕಾಮತ ದಂಪತಿಗಳ ಅವರ ಸಾಧನೆ ಮಾದರಿಯಾಗಿದೆ ಎಂದರು.

       ಅವರ್ಸಾ ಎಜ್ಯುಕೇಶನ್ ಎಂಡ್ ವೆಲಫೇರ್ ಅಸೋಷಿಯೆಶನ ಕಾರ್ಯದರ್ಶಿ ಲತಾ ಕಾಮತ ಮಾತನಾಡಿ ಮಕ್ಕಳನ್ನು ಕೇವಲ ಓದುವ ಪ್ರಕ್ರಿಯೆಗೆ ಅಷ್ಟೆ ಸಿದ್ಧಪಡಿಸದೆ, ಅವರಲ್ಲಿ ಆತ್ಮವಿಶ್ವಾಸ ಮತ್ತು ಕೌಶಲ್ಯತೆಯನ್ನು ಜೀಸೀ ಸಂಸ್ಥೆ ಹುಟ್ಟು ಹಾಕುತ್ತ ಬಂದಿರುವದು ನಮ್ಮಲ್ಲಿಯ ಯಶಸ್ಸಿಗೆ ಕಾರಣವಾಗಿದೆ ಎಂದರು.

       ಜೇಸೀ ಪ್ರೌಡ ಶಾಲೆಯ ಪ್ರೌಢ ಮುಖ್ಯಾಧ್ಯಾಪಕಿ ಮಂಜುಳಾ ನಾಯ್ಕ, ಜೇಸೀ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ರಾಘವೇಂದ್ರ ಭಟ್, ಜೇಸೀ ಬಾಲವನ ಶಾಲೆಯ ಮುಖ್ಯಾಧ್ಯಾಪಕಿ ಅಶ್ವೀನಿ ನಾಯ್ಕ, ರಾಧಾಬಾಯಿ ಅಚ್ಯುತ್ ಕಾಮತ ಕೆಜಿ ಸ್ಕೂಲನ ಮುಖ್ಯಾಧ್ಯಾಪಕಿ ಶಿಲ್ಪಾ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

       ಶಿಕ್ಷಕಿ ಸಂಪದಾ ಗೌಡ ಸ್ವಾಗತಿಸಿದರು. ದೀಪ್ತಿ ಸಂಗಡಿಗರು ಪ್ರಾರ್ಥಿಸಿದರು. ಪ್ರತಿಕ್ಷಾ ಎಚ್. ನಿರೂಪಿಸಿದರು. ವರ್ಷಾ ಹಾರವಾಡೇಕರ ಮತ್ತು ಅಂಕಿತಾ ಗಾಂವಕರ ಬಹಮಾನಿತರ ಯಾದಿ ಪ್ರಕಟಿಸಿದರು. ಶಿಕ್ಷಕಿ ಅಶ್ವೀನಿ ನಾಯ್ಕ ವಂದಿಸಿದರು.