ಅಂಕೋಲಾ : ಪುರಸಭೆಯ ( ANKOLA MUNICIPALITY ) 16 ನೇ (ಗುಡಿಗಾರಗಲ್ಲಿ) ವಾರ್ಡ್ನನಲ್ಲಿ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುಡಿಗಾರಲ್ಲಿಯ ಉಮೇಶ ಗೋವಿಂದ ನಾಯ್ಕ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಉಮೇಶ ನಾಯ್ಕ ಅವರು ಎಲ್ಲರೊಂದಿಗೂ ಚೆನ್ನಾಗಿದ್ದು, ಆತ್ಮೀಯರಾಗಿ ಉಮೇಶಣ್ಣ ಎಂದೇ ಪ್ರಖ್ಯಾತಿ ಪಡೆದವರಾಗಿದ್ದಾರೆ. ಸರಳ ವ್ಯಕ್ತಿತ್ವದವರಾಗಿ, ನಿಗರ್ವದ ಮೂಲಕದ ಉಮೇಶ ನಾಯ್ಕ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊ0ಡವರಾಗಿದ್ದಾರೆ.
ಅಂಕೋಲಾದ ಪ್ರತಿಷ್ಠಿತ ಅಂಕೋಲಾ ಅರ್ಬನ ಬ್ಯಾಂಕಿನ ನಿರ್ದೇಶಕರಾಗಿ ಎರಡು ಭಾರಿ ಸೇವೆ, ಅಂಕೋಲಾದ ಪ್ರಖ್ಯಾತ್ ನಾಮಧಾರಿ ದಹಿಂಕಾಲ ಉತ್ಸವ ಸಮಿತಿಯ ಅಧ್ಯಕರಾಗಿ ಎರಡು ಭಾರಿ ಸೇವೆ ಮತ್ತು ಅಂಕೋಲಾ ನಾಮಧಾರಿ ಸಮಾಜದ ಶ್ರೀ ಗಣೇಶೋತ್ಸವ ಸಮಿತಿಗೆ 3 ಭಾರಿ ಅಧ್ಯಕರಾಗಿ ಅತ್ಯುತ್ತವಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಉಮೇಶ ನಾಯ್ಕ ಅವರದ್ದಾಗಿದೆ.
ನಾಮಪತ್ರ ಸಲ್ಲಿಕೆ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ತಾಲೂಕ ಪಂಚಾಯತ ಮಾಜಿ ಅಧ್ಯಕ್ಷೆ ಸುಜಾತಾ, ಜಿಪಂ ಮಾಜಿ ಸದಸ್ಯ ವಿನೋದ ನಾಯಕ. ಬಾಸ್ಗೋಡ, ಮಂಜೇಶ್ವರ, ಪುರಸಭೆಯ ಸದಸ್ಯರಾದ ಪ್ರಕಾಶ ಗೌಡ, ಕಾರ್ತಿಕ ನಾಯ್ಕ, ಜಯಪ್ರಕಾಶ ನಾಯ್ಕ, ಸಬ್ಬೀರ ಶೇಖ, ಅಶೋಕ ಶೆಡಗೇರಿ, ಮಂಜುನಾಥ ನಾಯ್ಕ. ಕಾಕರಮಠ, ನಾರಾಯಣ ಶೆಟ್ಟಿ. ಕಂತ್ರಿ, ನೆಹರು ಮಂಚನ ಜಿಲ್ಲಾಧ್ಯಕ್ಷ ಪುರುಷೋತ್ತಮ ನಾಯ್ಕ, ಚಟ್ನಿ ಮಂಜು, ಪಪ್ಪು ಸೈಯ್ಯದ, ಸೋಷಿಯಲ್ ಮೀಡಿಯಾದ ಸಂಚಾಲಕ ಸುರೇಶ ನಾಯ್ಕ ಅಸ್ಲಗದ್ದೆ, ಶಾಸಕರ ಆಪ್ತ ಕಾರ್ಯದರ್ಶಿ ಜಗಧೀಶ ಖಾರ್ವಿ, ಸತೀಶ ನಾಯ್ಕ. ದಿನೇಶ ಪಳ್ಳಿಕೇರಿ, ಸಂಜು ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

