ಅಂಕೋಲಾ : ಬೈಕ್ ಹಾಗೂ ಕಾರ್ ನಡುವೆ ಸಂಭವಿಸಿದ ರಸ್ತೆ ಅಘಘಾತದಲ್ಲಿ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ಬಾಳೆಗುಳಿಯ ವರದರಾಜ್ ಹೊಟೇಲ ಎದುರು ಸೋಮವಾರ ನಡೆದಿದೆ.
ಕೃಷ್ಣಾಪುರದ ನಜೀರ್ ಹುಸನ ಮೀಯಾ (44) ಮೃತಪಟ್ಟವ. ಹಾಗೂ ಮೃತನ ತಂಗಿಯ ಮಗ ಅಬ್ದುಲ ರೆಹಮಾನ ಮುರ್ಜಿ. ಹುಬ್ಬಳ್ಳಿ (10) ಗಾಯಗೊಂಡವನಾಗಿದ್ದಾನೆ.
ಘಟನೆಯ ವಿವರ :
ಮೃತ ನಜೀರ್ ಹುಸನ ಮೀಯಾ ಅವರ ತಾಯಿ ಖರುನ್ನಿಸಾ ಕಳೆದ ೧೦ ದಿನದ ಹಿಂದೆ ಮೃತಪಟ್ಟಿದ್ದರು. ತಾಯಿಯ ಅಂತ್ಯ ಸಂಸ್ಕಾರವನ್ನು ಮಾಡಿದ ಬೊಬ್ರವಾಡದ ಕಬರಸ್ಥಾನದಲ್ಲಿ 10 ನೇ ದಿನದ ಕಾರ್ಯ ಮಾಡಿಕೊಂಡು ವಾಪಸ್ಸು ಬರುತ್ತಿದ್ದಾಗ ವರದರಾಜ್ ಹೊಟೇಲ ಎದುರು, ಕುಮಟಾ ಕಡೆಯಿಂದ ಕಾರವಾರ ಕಡೆಗೆ ಸಾಗುತ್ತಿದ್ದ ಕಾರಗೆ ಬೈಕ್ ಅಫಘಾತಗೊಂಡಿದೆ.
ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ನಜೀರ್ ಹುಸನ ಮೀಯಾ ಹಾಗೂ ಭೈಕ್ ಹಿಂಬದಿಯಲ್ಲಿ ಕುಳಿತಿದ್ದ ಅಬ್ದುಲ ರೆಹಮಾನ ಮುರ್ಜಿ ಅವರನ್ನು ಚಿಕಿತ್ಸೆಗಾಗಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ನಜೀರ್ ಹುಸನ ಮೀಯಾ ಮೃತಪಟ್ಟಿದ್ದಾರೆ. ಇನ್ನು ಅಬ್ದುಲ ರೆಹಮಾನ ಮುರ್ಜಿ ಅವರಿಗೆ ತಲೆಯ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ವೈಧ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ.
ಮೃತ ನಜೀರ್ ಹುಸನ ಮೀಯಾ ಅವರು ಪತ್ನಿ, ಇರ್ವರು ಹೆಣ್ಣು, ಒರ್ವ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

