
ಕಾರ್ ತೋರಿಸಿ ಮರುಳು ಮಾಡಿ, ಆಕಾಶ ತೋರಿಸಿದ ಕುಂದಾಪುರದ ಯುವಕ
ವಂಚನೆಗೊಳಗಾದ ಯುವಕ
ವರದಿ : ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಸೆಂಕೆ0ಡ್ ಹ್ಯಾಂಡ್ ಸ್ವಿಪ್ಟ್ ಕಾರನ್ನು ಕೊಡಿಸುದಾಗಿ ನಂಬಿಸಿ (FRAUD), 30 ಸಾವಿರ ಪಡೆದು ಇತ್ತ ಕಾರನ್ನು ನೀಡದೇ, ಅತ್ತ ಹಣವನ್ನು ಮರುಳಿಸದೇ ಅಂಕೋಲಾದ ಯುವಕನನ್ನು ಮೋಸದ ಬಲೆಗೆ ಬೀಳಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಸುಂದರ ಕನಸು ಕಂಡಿದ್ದ ಅಂಕೋಲದ ಯುವಕ :
ಖಾಸಗಿ ವೃತ್ತಿಯಲ್ಲಿರುವ ಪಟ್ಟಣದ ಯುವಕ ಕಾರನ್ನು ಖರೀದಿಸುವ ಹಂಬಲದಲ್ಲಿ ಸುಂದರವಾಗಿ ಕನಸು ಕಟ್ಟಿಕೊಂಡಿದ್ದ. ಈ ವೇಲೆ ಪರಿಚಯನಾದ ಕುಂದಾಪುರದ ಗಿಳಿಯಾರು ಕೋಟಾದ ಆದಿತ್ಯ ರಾಜು ದೇವಾಡಿಗ (25) ಈತ ಸುಸಜ್ಜೀತವಾದ ಕಾರನ್ನು ಕೊಡಿಸುವದಾಗಿ, ಸೆಂಕೆ0ಡ್ ಹ್ಯಾಂಡ್ ಸ್ವಿಪ್ಟ್ ಕಾರನ ಪೋಟೊವನ್ನು ಕೂಡ ತೋರಿಸಿ ವಂಚನೆಗೆ ಬಲೆ ಹಣೆದಿದ್ದ.
ಆದಿತ್ಯ ರಾಜು ದೇವಾಡಿಗನ ಕುತಂತ್ರದ ಬುದ್ದಿಗೆ ಮರುಳಾದ ಯುವಕ ತನ್ನ ಪೋನ್‌ಪೇ ನಿಂದ ಡಿಸೆಂಬರ್ 2 ರಂದು 30 ಸಾವಿರ ರೂಪಾಯಿ ಸಂದಾಯ ಮಾಡಿದ್ದ. ಹಣ ಸಂದಾಯವಾದ ಕೂಡಲೆ ಆದಿತ್ಯ ರಾಜು ದೇವಾಡಿಗನ ವರಸೆಯೆ ಬದಲಾಗಿತ್ತು.
ಹಣ ನೀಡಿದ ಒಂದು ವಾರದ ಕಾರ್ ಬರುತ್ತದೆ ಎಂದು ಕಾದ ಪದೇ ಪದೇ ಪೋನ್ ಮಾಡಿ ಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದ. ಆದರೆ ಕಾರನ್ನು ನೀಡದೆ, ಇತ್ತ ಹಣವನ್ನು ಮರುಳಿದೆ, ಹೀಗೆ ಪದೇ ಪದೇ ಪೋನ್ ಮಾಡುತ್ತಿದ್ದಲ್ಲಿ ಏನು ಮಾಡುತ್ತೇನೆ ನೋಡು ಎಂದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಯುವಕ ಪೊಲೀಸ್ ( ANKOLA POLICE ) ಠಾಣೆಯಲ್ಲಿ ದೂರು ನೀಡಿದ್ದಾನೆ.
ಪಿಎಸೈ ಸುನೀಲ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಆದಿತ್ಯ ರಾಜು ದೇವಾಡಿಗನ ವಿರುದ್ದ ಅವಾಚ್ಯ ಶಬ್ದದಿಂದ ನಿಂದನೆ (IPC 504) ಹಾಗೂ ವಂಚನೆ (IPC 420) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
