ವೃದ್ದ ದಂಪತಿಗಳ ಭೀಕರ ಕೊಲೆ ಪ್ರಕರಣ : ನಾಲ್ವರು ಆರೋಪಿಗಳು ಅಫರಾಧಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ
ರಾಘು ಕಾಕರಮಠ.
ಅಂಕೋಲಾ : ತಾಲೂಕಿನ ಆಂದ್ಲೆಯಲ್ಲಿ ನಡೆದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು, ಅಪಧಾರಿಗಳೆಂದು ಜಿಲ್ಲಾ ಸತ್ರ ನ್ಯಾಯಾಲಯವು ಘೋಷಿಸಿ ಬುಧವಾರ ತಿರ್ಪು ಪ್ರಕಟಿಸಿದೆ.

ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಖೇಶ ಚಂದ್ರು ನಾಯಕ (42), ಬೆಂಗಳೂರಿನ ಇಂಡಸ್ಟ್ರೀಯಲ ಜಿಗಣೆ ಏರಿಯಾದ ವೆಂಕಟರಾಜಪ್ಪ, ಭರತ್ ಇ, ನಾಗರಾಜ್ ವಾಯ್ ಅಫರಾಧಿಗಳೆಂದು ಸಾಬೀತು ಆದವರಾಗಿದ್ದಾರೆ.
ಸರಕಾರದ ವಿಶೇಷ ಅಭಿಯೋಜಕರಾದ ಶಿವಪ್ರಸಾದ ಆಳ್ವ ಕೆ. ಅವರು ಸಮರ್ಥವಾಗಿ ವಾದ ಮಂಡಿಸಿ, ನ್ಯಾಯಾಲಯಕ್ಕೆ ಈ ನಾಲ್ಪರು ಆರೋಪಿಗಳು ಕೃತ್ಯದಲ್ಲಿ ಪಾಲ್ಗೊಂಡಿರುವದನ್ನು ಸಾಬಿತು ಪಡಿಸಿದ್ದಾರೆ. ಶಿವಪ್ರಸಾದ ಆಳ್ವ ಅವರು ಕನ್ನಡ ಅನುವಾದದ 452 ಪುಟಗಳ ಲಿಖಿತ ವರದಿ ಮಂಡಿಸಿದ್ದರು. ನ್ಯಾಯಾಲಯಕ್ಕೆ ಈ ಅವಳಿ ಕೊಲೆ ಘಟನೆಯ ಸಂಬಂದಿಸಿದಂತೆ ಹಾಗೂ ಅಪರೋಕ್ಷ ಘಟನೆಗಳು, ಸಂದರ್ಭಗಳು ಹಾಗೂ ತಾಂತ್ರಿಕ ಸಾಕ್ಷಿಗಳನ್ನು ತೆರೆದಿಟ್ಟು ಒಟ್ಟು 52 ಸಾಕ್ಷಿಗಳು ಹಾಜರಾಗಿ ತಮ್ಮ ಸಾಕ್ಷವನ್ನು ನುಡಿದಿದ್ದರು.
ದಂಡ ಪ್ರಕ್ರಿಯಾ ಸಂಹಿತೆ ಕಲಂ ಅಡಿಯಲ್ಲಿ 302, 201, ಮತ್ತು 449, 235(2), 12೦ (ಬಿ) ರ ಅಡಿಯಲ್ಲಿ ಇವರು ಅಪರಾಧ ಎಸೆಗಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ ಅವರು ಆದೇಶ ಪ್ರಕಟಿಸಿ ಅಪರಾಧಿಗಳೆಂದು ಘೋಷಿಸಿದ್ದಾರೆ.
2 ರಂದು ಶಿಕ್ಷೆಯ ಪ್ರಮಾಣ :
ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು ಅಫರಾದಿಗಳೆಂದು ತಿರ್ಮಾನಕ್ಕೆ ಬಂದಿದ್ದು. ಈ ಅಫರಾಧಿಗಳಿಗೆ ಯಾವ ಶಿಕ್ಷೆ ನೀಡಬೇಕು ಎನ್ನುವದನ್ನು 2024 ಜನವರಿ 2 ರಂದು ಪ್ರಕಟಿಸುವದಾಗಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಈ ಕೊಲೆ ಪ್ರಕರಣವನ್ನು ಪ್ರಾರಂಬಿಕವಾಗಿ ನೊಂದ ಪಿರ್ಯಾದಿದಾರರ ಪರವಾಗಿ ಕಾರವಾರ ಜಿಲ್ಲಾ ನ್ಯಾಯಾಲಯದ ಅಭಿಯೋಜಕಿ ತನುಜಾ ಹೊಸಪಟ್ಟಣ ನಡೆಸಿದ್ದರು. ನಂತರ ಈ ಪ್ರಕರಣಕ್ಕೆ ಸರಕಾರದ ವಿಶೇ಼ಷ ಅಭಿಯೋಜಕರನ್ನಾಗಿ ಶಿವಪ್ರಸಾದ ಆಳ್ವ ಅವರನ್ನು ನೇಮಿಸಲಾಗಿತ್ತು. ತಮ್ಮ ಚಾಕಚಕ್ಯತೆಯ ವಾದ ಹಾಗೂ ಸಾಂದರ್ಭಿಕ ಸಾಕ್ಷಿಗಳನ್ನು ಸಮರ್ಪಕವಾಗಿ ನ್ಯಾಯಾಲಯಕ್ಕೆ ಶಿವಪ್ರಸಾದ ಆಳ್ವ ಮನವರಿಕೆ ಮಾಡಿಕೊಟ್ಟಿದ್ದರು.
ಪ್ರಕರಣದ ತನಿಖಾಧಿಕಾರಿ ಸಿಪಿಐ ಸಂತೋಷ ಶೆಟ್ಟಿ, ತನಿಖಾ ಸಹಾಯಕ ಪರಮೇಶ, ಪ್ರಕರಣದ ಸಹಾಯಕನಾಗಿ ಎಎಸೈ ಮಹಾಬಲೇಶ್ವರ ಗಢೇರ ಅವರು ಪ್ರಕರಣದಲ್ಲಿ ಸಕ್ರೀಯವಾಗಿ ಪಾಲ್ಲೊಡು ಆರೋಪಿತರು ಅಫರಾಧಿಗಳೆಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪರಿಹಾರ ನೀಡಲು ಆದೇಶ:
ಮೃತರ ವಾರಸುದಾರಿಗೆ ಸರಕಾರದ ವತಿಯಿಂದ ಪರಿಹಾರ ನೀಡಬೇಕೆಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಹಾಗೆ ಕೊಲೆ ಮಾಡಿ ದೋಚಿದ್ದ ಚಿನ್ನಾಭರಣ ಮತ್ತು ಹಣವನ್ನು ಸಹ ವಾರಸುದಾರರಿಗೆ ಹಸ್ತಾಂತರಿಸುವಂತೆ ವರದಿಯಲ್ಲಿ ಆದೇಶ ನೀಡಲಾಗಿದೆ.
ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಆದರೆ ಸಾಂದರ್ಬಿಕ ಸಾಕ್ಷಿಗಳನ್ನು ಸರಿಯಾಗಿ ನ್ಯಾಯಾಲಯಕ್ಕೆ ದಾಖಲೆಯ ಮೂಲಕ ಮನವರಿಕೆ ಮಾಡಿ ಕೊಟ್ಟಿದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಸಹ ಅಫರಾಧಿಗಳೆಂದು ಸಾಭೀತು ಆಗುವಂತಾಗಿದೆ. ಜನವರಿ 2 ರಂದು ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡುವಂತೆ ಮತ್ತೆ ವಾದ ಮಂಡಿಸುತ್ತೇನೆ.
ಶಿವಪ್ರಸಾದ ಆಳ್ವ.
ಸರಕಾರದ ವಿಶೇಷ ಅಭಿಯೋಜಕರು.
ಪ್ರಕರಣ ಏನಾಗಿತ್ತು :
2019 ರ ಡಿ. 19 ರಂದು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆಯಲ್ಲಿ ಕೈಕಾಲು ಕಟ್ಟಿ ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.
ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ (78) ಹಾಗೂ ಇವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68) ಅವರು ಕೊಲೆಯಾಗಿದ್ದರು. ದುಷ್ಕರ್ಮಿಗಳು ಮನೆಯ ಹಿಂಬದಿಯ ಬಾಗಿಲಿನಿಂದ ಒಳ ನುಗ್ಗಿ, ದಂಪತಿಗಳ ಮೇಲೆ ಖಾರದ ಪುಡಿ ಎರಚಿ ಹತ್ಯೆಗೈದಿದ್ದರು. ಮನೆಯ ಹಿಂಬದಿಯ ಬಾಗಿಲಿನ ಹೊರಗಡೆ ನಾರಾಯಣ ನಾಯಕ ಅವರ ಮೃತ ದೇಹವು ಕೈಕಾಲು ಕಟ್ಟಿ ಹಾಕಿದ ರೀತಿಯಲ್ಲಿ ಮತ್ತು ಸಾವಿತ್ರಿ ನಾಯಕ ಅವರ ಮೃತ ದೇಹವು ಮನೆಯೊಳಗಿನ ಕೊಠಡಿಯಲ್ಲಿ ಬೆಡ್ಶೀಟ್ನಿಂದ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಗಮ್ಟೇಪ್ ಸುತ್ತಿ ಕೊಲೆ ಮಾಡಲಾಗಿತ್ತು.
ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗನೆ ಆರೋಪಿಯಾಗಿದ್ದ;
ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಖೇಶ ಚಂದ್ರು ನಾಯಕ (42) ಆರೋಪಿಯಾಗಿದ್ದ. ಚಿನ್ನಾಭರಣ ಮತ್ತು ಹಣದ ವ್ಯಾಮೋಹಕ್ಕೆ ತನ್ನ ದೊಡ್ಡಪ್ಪ ಮತ್ತು ದೊಡ್ಡಮ್ಮನ್ನು ಉಸಿರು ಗಟ್ಟಿಸಿ ಕೊಲೆ ಮಾಡಿರುವದಾಗಿ ಪೊಲೀಸರ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದ ಈತ ಕಳೆದ ನಾಲ್ಕು ವರ್ಷಗಳಿಂದ ಜಾಮೀನು ಸಿಗದೇ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಜೈಲು ವಾಸದಲ್ಲಿದ್ದಾನೆ. ( ಭಾಗ 2 ಮುಂದುವರೆಯುವದು.)
*ಸುಖೇಶನಿಗೆ ಸಾಥ್ ನೀಡಿದ ಆರೋಪ ಎದುರಿಸುತ್ತಿರುವ ಇನ್ನು ಮೂರು ಆರೋಪಿಗಳು :*
ಬೆಂಗಳೂರಿನ ಇಂಡಸ್ಟ್ರೀಯಲ ಜಿಗಣೆ ಏರಿಯಾದ ವೆಂಕಟರಾಜಪ್ಪ, ಭರತ್ ಇ, ನಾಗರಾಜ್ ವಾಯ್ ಇವರು ಸಹ ಅಫರಾದಿಗಳಾಗಿದ್ದಾರೆ.
ಪೊಲೀಸರ ದೋಷಾರೋಪಣ ಪಟ್ಟಿರುವ ಇರುವ ಅಂಶವೆನೆಂದರೆ ಭರತ್ ಇ, ಅವರು ಚಹಾ ವ್ಯಾಪಾರಿಯಾಗಿದ್ದು, ಕಂಪನಿಯ ಸಿಬ್ಬಂದಿಗಳಿಗೆ ಪ್ರತಿನಿತ್ಯ ಚಹಾ ತಂದು ಕೊಡುತ್ತಿದ್ದನು. ಇನ್ನು ವೆಂಕಟರಾಜಪ್ಪ, ಮತ್ತು ನಾಗರಾಜ್ ಅವರು ಸುಖೇಶನ ಕಂಪನಿಯಲ್ಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ.
ಸುಖೇಶ ನಾಯಕ ಈ ಮೂವರ ಗೆಳೆತನ ಬೆಳೆಸಿಕೊಂಡು, ತನ್ನ ಊರು ಅಂಕೋಲಾದ ಆಂದ್ಲೆಯಲ್ಲಿ ಒಂಟಿ ಮನೆಯಿದ್ದು, ಅಲ್ಲಿ ಸಾಕಷ್ಟು ಚಿನ್ನಾಭರಣವಿದೆ. ಅದರ ಕೀಲಿ ಕೈ ಇಡುವ ಸ್ಥಳ ನನಗೆ ತಿಳಿದಿದೆ. ದಂಪತಿಗಳಿಗೂ ಸಾಕಷ್ಟು ವಯಸಾಗಿದ್ದು, ಅವರು ಮಲಿಗಿರುವ ಸಮಯದಲ್ಲಿ ಮನೆಯ ಹಿಂಬದಿಯ ಬಾಗಿಲು ಒಡೆದು ಚಿನ್ನಾಭರಣವನ್ನು ತೆಗೆದುಕೊಂಡು ಪಾಲು ಮಾಡಿಕೊಳ್ಳುವದಾಗಿ ಮೂವರಲ್ಲಿಯು ತಿಳಿಸಿದ್ದ.
ಈ ಮೂವರು ಆರೋಪಿಗಳು ಬೆಂಗಳೂರಿನಿಂದ ಸುಖೇಶನೊಂದಿಗೆ ಕಾರ್ನಲ್ಲಿ ಹೊರಟು ಆಂದ್ಲೆಗೆ ದರೋಡೆಗೆ ಬಂದಿಳಿಯುತ್ತಾರೆ. ಆದರೆ ದರೋಡೆಗೆ ಮನೆಯ ಹಿಂಬಂದಿಗೆ ಹೋದಾಗ, ಸುಖೇಶ ನಾಯಕನ ಸೂಚಿಸಿದಂತೆ ಬಾಗಿಲು ಒಡೆಯದೇ, ಗೂಡಿನಲ್ಲಿದ್ದ ಕೋಳಿ ಬಿಟ್ಟು ನಾರಾಯಣ ನಾಯಕ ಅವರನ್ನು ಹೊರ ಬರುವಂತೆ ಮಾಡೋಣ, ನಂತರ ಅವರನ್ನು ಕಟ್ಟಿ ಹಾಕಿ ದರೋಡೆ ನಡೆಸೋಣ ಎಂದು ತಿಳಿಸುತ್ತಾನೆ ಎನ್ನಲಾಗಿದೆ. ಸುಖೇಶ ತಿಳಿಸಿದಂತೆ ಈ ಮುವರು ಆರೋಪಿಗಳು ಗೂಡಿನಲ್ಲಿದ್ದ ಕೋಳಿ ಬಿಟ್ಟು ಮರೆಯಲ್ಲಿ ನಿಲ್ಲುತ್ತಾರೆ.
ಮನೆಯಲ್ಲಿ ಹೊರ ಬಂದ ನಾರಾಯಣ ನಾಯಕನ್ನು ಹಿಂಬಂದಿಯಿಂದ ಹೊಡೆದು ನೆಲಕ್ಕೆ ಒತ್ತಿ ಹಿಡಿದು ಸುಖೇಶನೆ ಕೊಲೆ ಮಾಡಿದ್ದಾನೆ. ಆಗ ಆತನಿಗೆ ನಾವು ಸಹಾಯ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಆರೋಪಿತರು ಬಾಯಿ ಬಿಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇನ್ನು ಮಂಚದ ಮೇಲೆ ಮಲಗಿದ್ದ ಸಾವಿತ್ರಿ ನಾಯಕಳನ್ನು ಬಾಯಿಗೆ ಗಮ್ಟೇಪ್ ಸುತ್ತಿ ಸುಖೇಶನೆ ಕೊಲೆ ನಡೆಸಿದ್ದಾಗಿ, ಆತನ ಕೃತ್ಯದಲ್ಲಿ ತಾವು ಸಹಾಯ ಮಾಡಿದ್ದಾಗಿ ತಿಳಿದ್ದಾನೆ. ನಂತರ ದರೋಡೆಗೈದ ಚಿನ್ನಾಭರಣದಲ್ಲಿ ಬೆಂಗಳೂರಿನ ಮೂವರು ಆರೋಪಿತರು ಪ್ರತಿಯೊಬ್ಬರು 5 ಚಿನ್ನಾಭರಣದಂತೆ ಹಂಚಿಕೊಳ್ಳುತ್ತಾರೆ. ಉಳಿದ ಆಭರಣ ಮತ್ತು 2 ಲಕ್ಷ ರೂ ಹಣವನ್ನು ಸುಖೇಶ ಇಟ್ಟು ಕೊಂಡಿರುವದಾಗಿ ಆರೋಪಿತರು ಪಂಚನಾಮೆಯ ವೇಳೆ ಪೊಲಿಸರಿಗೆ ವಿವರಿಸಿದ್ದಾಗಿ ತಿಳಿಸಲಾಗಿತ್ತು.
ಅಂದು ಡಿವೈಎಸ್ಪಿ ಶಂಕರ ಮಾರಿಹಾಳ ಅವರ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪಂಚನಾಮೆ ನಡೆಸಿದ್ದರು. ( ಭಾಗ 3 ಮುಂದುವರೆಯುವದು.)
