TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣ : ಡಿ. 27 (ಇಂದು) ತೀರ್ಪು

Dec 27, 2023 | ಅಪರಾಧ |

ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣ : ಡಿ. 27 (ಇಂದು) ತೀರ್ಪು

ರಾಘು ಕಾಕರಮಠ.

ಅಂಕೋಲಾ: ಕೈಕಾಲು ಕಟ್ಟಿ ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಆರೋಪದ ಎದುರಿಸುತ್ತಿರುವ ಆರೋಪಿಗಳಿಗೆ ಡಿಸೆಂಬರ್ 27 ರ ಬುಧವಾರ0ದು ತಿರ್ಪು ನೀಡಲು ಕಾರವಾರದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮುಂದಾಗಿದೆ.

ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಆರೋಪ ಹೊತ್ತಿರುವ ನಾಲ್ವರು ಆರೋಪಿಗಳು ನಿರ್ದೋಶಿಗಳಾಗುತ್ತಾರೋ ಅಥವಾ ಅಫರಾಧ ಸಾಬೀತಾಗಿ ಶಿಕ್ಷೆಗೆ ಗುರಿಯಾಗುತ್ತಾರೋ ಎನ್ನುವದು ನಾಗರಿಕರ ಕುತೂಹಲಕ್ಕೆ ಕಾರಣವಾಗಿದೆ.

ಸರಕಾರದ ಪರವಾಗಿ ಖ್ಯಾತ್ ನ್ಯಾಯವಾದಿ ಶಿವಪ್ರಸಾದ ಆಳ್ವ ವಾದ ಮಂಡಿಸಿದ್ದು, ನ್ಯಾಯಾಲಯದ ಕಲಾಪ ಅಂತಿಮ ಘಟ್ಟಕ್ಕೆ ತಲುಪಿದ್ದು, (ಇಂದು) ಡಿಸೆಂಬರ್ 27 ರಂದು ಪ್ರಕರಣದ ನ್ಯಾಯದ ಬಾಗಿಲು ತೆರೆಯಲಿದೆ. ಅಂದು ತಿರ್ಪನ್ನು ಪ್ರಕಟಿಸುವದಾಗಿ ಜಿಲ್ಲಾ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ.

ನಡೆದದ್ದೇನು :

ಡಿ. 19 ರಂದು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆಯಲ್ಲಿ ಕೈಕಾಲು ಕಟ್ಟಿ ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ (78) ಹಾಗೂ ಇವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68) ಅವರು ಕೊಲೆಯಾಗಿದ್ದರು.

ದುಷ್ಕರ್ಮಿಗಳು ಮನೆಯ ಹಿಂಬದಿಯ ಬಾಗಿಲಿನಿಂದ ಒಳ ನುಗ್ಗಿ, ದಂಪತಿಗಳ ಮೇಲೆ ಖಾರದ ಪುಡಿ ಎರಚಿ ಹತ್ಯೆಗೈದಿದ್ದರು. ಮನೆಯ ಹಿಂಬದಿಯ ಬಾಗಿಲಿನ ಹೊರಗಡೆ ನಾರಾಯಣ ನಾಯಕ ಅವರ ಮೃತ ದೇಹವು ಕೈಕಾಲು ಕಟ್ಟಿ ಹಾಕಿದ ರೀತಿಯಲ್ಲಿ ಮೃತ ದೇಹ ಮತ್ತು ಸಾವಿತ್ರಿ ನಾಯಕ ಅವರ ಮೃತ ದೇಹವು ಮನೆಯೊಳಗಿನ ಕೊಠಡಿಯಲ್ಲಿ ಬೆಡ್‌ಶೀಟ್‌ನಿಂದ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಗಮ್‌ಟೇಪ್ ಸುತ್ತಿ ಕೊಲೆ ಮಾಡಲಾಗಿತ್ತು.

ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗನೆ ಆರೋಪಿಯಾಗಿದ್ದ..

ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಖೇಶ ಚಂದ್ರು ನಾಯಕ (42) ಆರೋಪಿಯಾಗಿದ್ದ. ಚಿನ್ನಾಭರಣ ಮತ್ತು ಹಣದ ವ್ಯಾಮೋಹಕ್ಕೆ ತನ್ನ ದೊಡ್ಡಪ್ಪ ಮತ್ತು ದೊಡ್ಡಮ್ಮನ್ನು ಉಸಿರು ಗಟ್ಟಿಸಿ ಕೊಲೆ ಮಾಡಿರುವದಾಗಿ ಪೊಲೀಸರ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದ ಈತ ಕಳೆದ ನಾಲ್ಕು ವರ್ಷಗಳಿಂದ ಜಮೀನು ಸಿಗದೇ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಜೈಲು ವಾಸದಲ್ಲಿದ್ದಾನೆ.

ಸುಖೇಶನನೆ ಸಾಥ್ ನೀಡಿದ ಆರೋಪ ಎದುರಿಸುತ್ತಿರುವ ಇನ್ನು ಮೂರು ಆರೋಪಿಗಳು :

ಬೆಂಗಳೂರಿನ ಇಂಡಸ್ಟಿçÃಯಲ್ ಏರಿಯಾದ ಜಿಗಣೆ ಏರಿಯಾದ ವೆಂಕಟರಾಜಪ್ಪ, ಭರತ್ ಇ, ನಾಗರಾಜ್ ವಾಯ್ ಇವರು ಸಹ ಆರೋಪಿಗಳಾಗಿದ್ದಾರೆ.

ಪೊಲೀಸರ ದೋಷಾರೋಪಣ ಪಟ್ಟಿರುವ ಇರುವ ಅಂಸವೆನೆAದರೆ ಭರತ್ ಇ, ಅವರು ಚಹಾ ವ್ಯಾಪಾರಿಯಾಗಿದ್ದು, ಕಂಪನಿಯ ಸಿಬ್ಬಂದಿಗಳಿಗೆ ಪ್ರತಿನಿತ್ಯ ಚಹಾ ತಂದು ಕೊಡುತ್ತಿದ್ದನು. ಇನ್ನು ವೆಂಕಟರಾಜಪ್ಪ, ಮತ್ತು ನಾಗರಾಜ್ ಅವರು ಸುಖೇಶನ ಕಂಪನಿಯಲ್ಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ.

ಸುಖೇಶ ನಾಯಕ ಈ ಮೂವರ ಗೆಳೆತನ ಬೆಳೆಸಿಕೊಂಡು, ತನ್ನ ಊರು ಅಂಕೋಲಾದ ಆಂದ್ಲೆಯಲ್ಲಿ ಒಂಟಿ ಮನೆಯಿದ್ದು, ಅಲ್ಲಿ ಸಾಕಷ್ಟು ಚಿನ್ನಾಭರಣವಿದೆ. ಅದರ ಕೀಲಿ ಕೈ ಇಡುವ ಸ್ಥಳ ನನಗೆ ತಿಳಿದಿದೆ. ದಂಪತಿಗಳಿಗೂ ಸಾಕಷ್ಟು ವಯಸಾಗಿದ್ದು, ಅವರು ಮಲಿಗಿರುವ ಸಮಯದಲ್ಲಿ ಮನೆಯ ಹಿಂಬದಿಯ ಬಾಗಿಲು ಒಡೆದು ಚಿನ್ನಾಭರಣವನ್ನು ತೆಗೆದುಕೊಂಡು ಪಾಲು ಮಾಡಿಕೊಳ್ಳುವದಾಗಿ ಮೂವರಲ್ಲಿಯು ತಿಳಿಸಿದ್ದ.

ಈ ಮೂವರು ಆರೋಪಿಗಳು ಬೆಂಗಳೂರಿನಿ0ದ ಸುಖೇಶನೊಂದಿಗೆ ಕಾರ್‌ನಲ್ಲಿ ಹೊರಟು ಆಂದ್ಲೆಗೆ ದರೋಡೆಗೆ ಬಂದಿಳಿಯುತ್ತಾರೆ. ಆದರೆ ದರೋಡೆಗೆ ಮನೆಯ ಹಿಂಬAದಿಗೆ ಹೋದಾಗ, ಸುಖೇಶ ನಾಯಕನ ಸೂಚಿಸಿದಂತೆ ಬಾಗಿಲು ಒಡೆಯದೇ, ಗೂಡಿನಲ್ಲಿದ್ದ ಕೋಳಿ ಬಿಟ್ಟು ನಾರಾಯಣ ನಾಯಕ ಅವರನ್ನು ಹೊರ ಬರುವಂತೆ ಮಾಡೋಣ, ನಂತರ ಅವರನ್ನು ಕಟ್ಟಿ ಹಾಕಿ ದರೋಡೆ ನಡೆಸೋಣ ಎಂದು ತಿಳಿಸುತ್ತಾನೆ ಎನ್ನಲಾಗಿದೆ. ಸುಖೇಶ ತಿಳಿಸಿದಂತೆ ಈ ಮುವರು ಆರೋಪಿಗಳು ಗೂಡಿನಲ್ಲಿದ್ದ ಕೋಳಿ ಬಿಟ್ಟು ಮರೆಯಲ್ಲಿ ನಿಲ್ಲುತ್ತಾರೆ. ಮನೆಯಲ್ಲಿ ಹೊರ ಬಂದ ನಾರಾಯಣ ನಾಯಕನ್ನು ಹಿಂಬAದಿಯಿAದ ಹೊಡೆದು ನೆಲಕ್ಕೆ ಒತ್ತಿ ಹಿಡಿದು ಸುಖೇಶನೆ ಕೊಲೆ ಮಾಡಿದ್ದಾನೆ. ಆಗ ಆತನಿಗೆ ನಾವು ಸಹಾಯ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಆರೋಪಿತರು ಬಾಯಿ ಬಿಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಮಂಚದ ಮೇಲೆ ಮಲಗಿದ್ದ ಸಾವಿತ್ರಿ ನಾಯಕಳನ್ನು ಬಾಯಿಗೆ ಗಮ್‌ಟೇಪ್ ಸುತ್ತಿ ಸುಖೇಶನೆ ಕೊಲೆ ನಡೆಸಿದ್ದಾಗಿ, ಆತನ ಕೃತ್ಯದಲ್ಲಿ ತಾವು ಸಹಾಯ ಮಾಡಿದ್ದಾಗಿ ತಿಳಿದ್ದಾನೆ. ನಂತರ ದರೋಡೆಗೈದ ಚಿನ್ನಾಭರಣದಲ್ಲಿ ಬೆಂಗಳೂರಿನ ಮೂವರು ಆರೋಪಿತರು ಪ್ರತಿಯೊಬ್ಬರು 5 ಚಿನ್ನಾಭರಣದಂತೆ ಹಂಚಿಕೊಳ್ಳುತ್ತಾರೆ. ಉಳಿದ ಆಭರಣ ಮತ್ತು 2.5 ಲಕ್ಷ ರೂ ಹಣವನ್ನು ಸುಖೇಶ ಇಟ್ಟು ಕೊಂಡಿರುವದಾಗಿ ಆರೋಪಿತರು ಪಂಚನಾಮೆಯ ವೇಳೆ ಪೊಲಿಸರಿಗೆ ವಿವರಿಸಿದ್ದಾಗಿ ತಿಳಿಸಲಾಗಿತ್ತು.

ಅಂದು ಡಿವೈಎಸ್ಪಿ ಶಂಕರ ಮಾರಿಹಾಳ ಅವರ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪಂಚನಾಮೆ ನಡೆಸಿದ್ದರು. ಪ್ರಕರಣದ ತನಿಖಾಧಿಕಾರಿ ಸಿಪಿಐ ಕೃಷ್ಣಾನಂದ ನಾಯಕ, ಅಂಕೋಲಾ ಠಾಣೆಯ ಪಿಎಸೈ ಆಗಿದ್ದ ಸಂಪತ್‌ಕುಮಾರ, ತನಿಖಾ ಸಹಾಯಕ ಪರಮೇಶ, ಗುಪ್ತಚರದ ಸಿಬ್ಬಂದಿ ಆಸೀಪ ಕುಂಕುರ, ಅಫರಾಧ ದಳದ ಸಿಬ್ಬಂದಿಗಳಾದ ಮಂಜುನಾಥ ಲಕ್ಷಾö್ಮಪುರ, ಮೋಹನದಾಸ ಶೇಣ್ವಿ, ರೋಹಿದಾಸ ದೇವಾಡಿಗಾ ಕಾರ್ಯಾಚರಣೆಯಲ್ಲಿದ್ದರು. ( ಭಾಗ 2 ಮುಂದುವರೆಯುವದು.)

Share:

Rate:

Previousಪೊಲೀಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮೆರೆದ ಸಿಪಿಐ ಶ್ರೀಧರ ಎಸ್.ಆರ್.
Nextನಾಲ್ವರು ಆರೋಪಿಗಳು ಅಫರಾಧಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

Related Posts

ಕಾನೂನು ರಕ್ಷಕರ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್ ವಂಚಕರಿ0ದ ಹಣ ವಸೂಲಿ ದಂಧೆ

ಕಾನೂನು ರಕ್ಷಕರ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್ ವಂಚಕರಿ0ದ ಹಣ ವಸೂಲಿ ದಂಧೆ

September 22, 2024

ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಎಸ್ ವಾಹನಕ್ಕೆ ಬೆಂಕಿ. ಔಷಧಿ ಸುಟ್ಟು ಕರಕಲು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಎಸ್ ವಾಹನಕ್ಕೆ ಬೆಂಕಿ. ಔಷಧಿ ಸುಟ್ಟು ಕರಕಲು.

July 12, 2023

ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನ :

ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನ :

August 27, 2022

ಬೈಕ್ ಹಾಗೂ ಕಾರ್ ಅಘಘಾತ : ಭೈಕ್ ಸವಾರ ಸಾವು

ಬೈಕ್ ಹಾಗೂ ಕಾರ್ ಅಘಘಾತ : ಭೈಕ್ ಸವಾರ ಸಾವು

December 18, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
  • ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
    ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
  • ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
    ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy