ಅಂಕೋಲÁ : ಪೊಲೀಸರು ಒತ್ತಡ ಮಧ್ಯೆ ಕಾರ್ಯ ನಿರ್ವಹಿಸಿ ಈ ಸಮಾಜಕ್ಕೆ ಕೊಡುಗೆ ನೀಡುತ್ತಾರೆ. ಈ ಸೇವೆಯ ಹಿಂದೆ ಪೊಲೀಸರ ಕುಟುಂಬದ ತ್ಯಾಗವು ಮಹತ್ವದಾಗಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಸಂತೋಷ ಶೆಟ್ಟಿ ಹೇಳಿದರು.
ಅವರು ಪಟ್ಟಣದ ಪೊಲೀಸ್ ವಸತಿಗೃಹದ ರಾಮ ಮಂದಿರದ ಸಭಾಭವನದಲ್ಲಿ ಹಮ್ಮಿಕೊಂಡ “ ಪೊಲೀಸ್ ಸಾಂಸ್ಕೃತಿಕ ಕೂಟ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳ ಪರಿಶ್ರಮದದ ಫಲವಾಗಿ ನಾವು ಅನೇಕ ಕ್ಲೀಷ್ಠಕರ ಪ್ರಕರಣಗಳನ್ನು ಭೇಧಿಸಿ ನಾಗರಿಕರ ನೆಮ್ಮದಿಗೆ ಕಾರಣರಾಗಿದ್ದೇವೆ ಎಂಬ ಆತ್ಮ ತೃಪ್ತಿ ಇದೆ. ತಮ್ಮ ಬದುಕನ್ನು ಒತ್ತಡದಲ್ಲಿ ಹಾಕಿಕೊಂಡು ಪೊಲೀಸ್ ಇಲಾಖೆಗೆ ಸೇವೆ ನೀಡುತ್ತಿರುವ ನಮ್ಮ ಸಿಬ್ಬಂದಿಗಳ ಕಾರ್ಯ ವೈಖರಿ ಮಾದರಿಯಾಗಿದೆ ಎಂದರು.
ಪಿಎಸೈ ಉದ್ದಪ್ಪ ಧರೆಪ್ಪನವರ ಮಾತನಾಡಿ ದಿನದ ೨೪ ಘಂಟೆಯೂ ಸಮಾಜದ ರಕ್ಷಣೆಗೆ ಕಣ್ಣಾಗಿ ದುಡಿಯುವ ಪೋಲಿಸರಿಗೆ ಅನ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಹೊಸ ವರ್ಷದ ಸಂಭ್ರಮದಂದು ಸಾಂಸ್ಕೃತಿಕ ಕೂಟವನ್ನು ಹಮ್ಮಿಕೊಂಡು ಹೊಸ ಚೈತನ್ಯ ತುಂಬುವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ, ಪೊಲೀಸರು ತಮ್ಮ ವಿಶ್ರಾಂತ ರಹಿತ ಕರ್ತವ್ಯದಿಂದಾಗಿ ತಮ್ಮ ಖಾಸಗಿ ಬದುಕನ್ನ ಕಳೆದುಕೊಳ್ಳುತ್ತಿರವದು ಆತಂಕದ ಸಂಗತಿಯಾಗಿದೆ ಎಂದರು.
ಪಿಎಸೈ ಸುನೀಲ ಹುಲ್ಲೋಳ್ಳಿ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಪತ್ರಕರರ್ತರಾದ ಸುಭಾಷ ಕಾರೇಬೈಲ, ನಾಗರಾಜ್ ಜಾಂಬಳೇಕರ, ಅಕ್ಷಯ ನಾಯ್ಕ, ದಿನಕರ ನಾಯ್ಕ. ಅಲಗೇರಿ, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವ್ಹಾಯ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಹವಾಲ್ದಾರ ಚಂದ್ರಕಾಂತ ಗೌಡ ನಿರೂಸಿದರು. ಹವಾಲ್ದಾರ ಸತೀಶ ಅಂಬಿಗ ಸ್ವಾಗತಿಸಿದರು. ಆರಕ್ಷಕ ಸಿಬ್ಬಂದಿ ಪರಮೇಶ ಕಂಟೆಪ್ಪನವರ ವಂದಿಸಿದರು, ಪೊಲೀಸ್ ಸಿಬ್ಬಂದಿಗಳು, ಕುಟುಂಬದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಆರಕ್ಷಕರ ಕುಟುಂಬದ ಸಾಂಸ್ಕ್ರತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.
