TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ವೃದ್ದ ದಂಪತಿಗಳ ಭೀಕರ ಕೊಲೆಗೈದ ಸುಖೇಶ ನಾಯಕ ಗ್ಯಾಂಗ್‌ಗೆ ಗಲ್ಲೋ..? ಅಥವಾ ಜೀವಾವಧಿಯೋ..? ಜನವರಿ 9 ರಂದು ತಿರ್ಪು

Jan 3, 2024 | Uncategorized |

ವೃದ್ದ ದಂಪತಿಗಳ ಭೀಕರ ಕೊಲೆಗೈದ ಸುಖೇಶ ನಾಯಕ ಗ್ಯಾಂಗ್‌ಗೆ ಗಲ್ಲೋ..? ಅಥವಾ ಜೀವಾವಧಿಯೋ..? ಜನವರಿ 9 ರಂದು ತಿರ್ಪು

ರಾಘು ಕಾಕರಮಠ.

ಅಂಕೋಲಾ : ತಾಲೂಕನ್ನೆ ಬೆಚ್ಚಿ ಬಿಳಿಸಿದ್ದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಸುಖೇಶ ನಾಯಕ ಗ್ಯಾಂಗ್‌ಗೆ ಗಲ್ಲು ಶಿಕ್ಷೆಯೊ ಅಥವಾ ಜೀವಾವಧಿಯ ಶಿಕ್ಷೆಯೊ ಎನ್ನುವದನ್ನು ಜನವರಿ 9 ರಂದು ತಿರ್ಪು ಹೊರ ಬೀಳಲಿದೆ.

 ತೀವ್ರ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಆಂದ್ಲೆಯಲ್ಲಿ ನಡೆದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು, ಅಪಧಾರಿಗಳೆಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಅವರು ಡಿ. 27 ರಂದು ತಿರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು 2024 ರ ಜನವರಿ 2 ರಂದು ಪ್ರಕಟಿಸುದಾಗಿ ಆದೇಶಿಸಿದ್ದರು.

 ಜನವರಿ 2 ರಂದು ನ್ಯಾಯಾಲಯದ ಕಾರ್ಯ ಕಲಾಪ ನಡೆದು, ಜನವರಿ 3 ಕ್ಕೆ ತಿರ್ಪು ಕಾಯ್ದಿಟ್ಟಿದ್ದರು. ಜನವರಿ 3 ರ ಬುಧವಾರದಂದು ಅಫರಾದಿಗಳ ಪರ ನ್ಯಾಯವಾದಿಗಳು ಅಪಡವೇಟ್ ಸಲ್ಲಿಸಿ ಈ ಅಫರಾಧಿಗಳಿಗೆ ಯಾವುದೇ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಕೇವಲ ಮನೆಯನ್ನು ಕಳವು ಮಾಡಲು ಬಂದಿದ್ದರು. ಈ ಹತ್ಯೆ ಎನ್ನುವದು ಕೇವಲ ಆಕಸ್ಮಿಕ ಹಾಗಾಗಿ ಶಿಕ್ಷೆಯನ್ನು ಕಡಿಮೆಗೊಳಿಸಿ ನೀಡುವಂತೆ ಮಾನ್ಯ ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿದ್ದರು.

 ಈ ವೇಳೆ ಸರಕಾರಿ ಸರಕಾರದ ವಿಶೇಷ ಅಭಿಯೋಜಕರಾದ ಶಿವಪ್ರಸಾದ ಆಳ್ವ ಕೆ. ಅವರು ಅಫರಾಧಿಗಳು ರಾಕ್ಷಿಸಿ ಪ್ರವೃತಿಯಂತೆ ಅತ್ಯಂತ ಬರ್ಬರವಾಗಿ ಹತ್ಯೆಗೈದಿದ್ದಾರೆ. ಹೀಗಾಗಿ ಅವರಿಗೆ ಗರಿಷ್ಠ ಕಠಿಣ ಜೀವಾವಧಿ ಶಿಕ್ಷೆ ನೀಡುವಂತೆ ಮನವಿ ಮಾಡಿದರು.

 ಮಾನ್ಯ ನ್ಯಾಯಾಧೀಶರು ಉಭಯ ನ್ಯಾಯಾವಾದಿಗಳ ವಾದವನ್ನು ದಾಖಲಸಿಕೊಂಡು ಜ. 9 ರ ಮಂಗಳವಾರದAದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವದಾಗಿ ಆದೇಶಿಸಿದರು.

ಜ. 9 ರಂದು ಆರೋಪಿಗಳ ಎದುರು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಘೋಷಿಸಲಿದ್ದಾರೆ. ಈಗಾಗಲೇ ಸಾಂದರ್ಬಿಕ ಸಾಕ್ಷಿಯ ಅಡಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ ಕಲಂ ಅಡಿಯಲ್ಲಿ 302, 201, ಮತ್ತು 449, 235(2), 120 (ಬಿ) ಹಾಗೂ 392 ರ ಅಡಿಯಲ್ಲಿ ಇವರು ಅಪರಾಧ ಎಸೆಗಿರುವದು ಸ್ಪಷ್ಠವಾದ ಹಿನ್ನಲೆಯಲ್ಲಿ ಅಫರಾಧಿಗಳಿಗೆ ಗಲ್ಲು ಶಿಕ್ಷೆಯ ಉರುಳೊ ಅಥವಾ ಜೀವಾವಧಿಯ ಶಿಕ್ಷೆಯೊ ಎನ್ನುವದು ನ್ಯಾಯಾಲಯದ ತೀರ್ಪಿನ ಮೇಲೆ ನಿರ್ಧರಿತವಾಗಲಿದೆ.

 ಈ ಪ್ರಕರಣದಲ್ಲಿ ಪ್ರಮುಖವಾಗಿ ಕೊಲೆ ಮಾಡಿದ್ದು ಸಾಬೀತಾಗಿರುವದು (ಐಪಿಸಿ 302), ಸಾಕ್ಷಿ ನಾಶ (ಐಪಿಸಿ 201), ಕೊಲೆಗೆ ಪೂರ್ವ ಸಂಚು (ಐಪಿಸಿ 120 (ಬಿ)) ಹಾಗೂ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶ (ಐಪಿಸಿ 449) ಹಾಗೂ ದರೋಡೆ (ಐಪಿಸಿ 392) ಈ ಆಪಾದನೆಗಳು ಸಾಭೀತಾಗಿದೆ.

 ಪ್ರಕರಣ ಏನಾಗಿತ್ತು :

2019 ರ ಡಿ. 19 ರಂದು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆಯಲ್ಲಿ ಕೈಕಾಲು ಕಟ್ಟಿ ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.

ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ (78) ಹಾಗೂ ಇವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68) ಅವರು ಕೊಲೆಯಾಗಿದ್ದರು.

ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಖೇಶ ಚಂದ್ರು ನಾಯಕ (42), ಬೆಂಗಳೂರಿನ ಇಂಡಸ್ಟ್ರೀಯಲ ಜಿಗಣೆ ಏರಿಯಾದ ವೆಂಕಟರಾಜಪ್ಪ, ಭರತ್ ಇ, ನಾಗರಾಜ್ ವಾಯ್ ಈ ದುಷ್ಕರ್ಮಿಗಳು ಮನೆಯ ಹಿಂಬದಿಯ ಬಾಗಿಲಿನಿಂದ ಒಳ ನುಗ್ಗಿ, ದಂಪತಿಗಳ ಮೇಲೆ ಖಾರದ ಪುಡಿ ಎರಚಿ ಹತ್ಯೆಗೈದಿದ್ದರು.

ಮನೆಯ ಹಿಂಬದಿಯ ಬಾಗಿಲಿನ ಹೊರಗಡೆ ನಾರಾಯಣ ನಾಯಕ ಅವರ ಮೃತ ದೇಹವು ಕೈಕಾಲು ಕಟ್ಟಿ ಹಾಕಿದ ರೀತಿಯಲ್ಲಿ ಮತ್ತು ಸಾವಿತ್ರಿ ನಾಯಕ ಅವರ ಮೃತ ದೇಹವು ಮನೆಯೊಳಗಿನ ಕೊಠಡಿಯಲ್ಲಿ ಬೆಡ್‌ಶೀಟ್‌ನಿಂದ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಗಮ್‌ಟೇಪ್ ಸುತ್ತಿ ಕೊಲೆಗೈದು, ಸಾಕ್ಷö್ಯ ನಾಶ ಮಾಡಿ ನಾಪತ್ತೆಯಾಗಿದ್ದರು.

Share:

Rate:

Previousಪೊಲೀಸರ ಮಹತ್ತರ ಸೇವೆಯ ಹಿಂದೆ ಪೊಲೀಸ ಕುಟುಂಬದ ತ್ಯಾಗವು ಮಹತ್ವದಾಗಿದೆ : ಸಂತೋಷ ಶೆಟ್ಟಿ.
Nextಅಂಕೋಲಾದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇಧನ ಪ್ರಕರಣ

Related Posts

ರಾಷ್ಟ್ರಪತಿ ಪದಕಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಹೆಚ್ ಆಯ್ಕೆ

ರಾಷ್ಟ್ರಪತಿ ಪದಕಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಹೆಚ್ ಆಯ್ಕೆ

January 25, 2025

ಗೋಕರ್ಣದ ಹೊಸ್ಕಟ್ಟಾದಲ್ಲಿ ಮಾನಭಂಗಕ್ಕೆ ಪ್ರಯತ್ನ

ಗೋಕರ್ಣದ ಹೊಸ್ಕಟ್ಟಾದಲ್ಲಿ ಮಾನಭಂಗಕ್ಕೆ ಪ್ರಯತ್ನ

June 30, 2022

ಹಿಲ್ಲೂರಿನಲ್ಲಿ ತಾಯಿ-ಮಗಳ ಡಬಲ  ಮರ್ಡರ್..!

ಹಿಲ್ಲೂರಿನಲ್ಲಿ ತಾಯಿ-ಮಗಳ ಡಬಲ ಮರ್ಡರ್..!

June 21, 2024

ಪುರಲಕ್ಕಿಬೇಣ ಹಾಗೂ ಕೆಪಿಟಿಸಿಎಲ್ ಎದರು ರಸ್ತೆಯಲ್ಲಿ  ಶ್ರಮದಾನ

ಪುರಲಕ್ಕಿಬೇಣ ಹಾಗೂ ಕೆಪಿಟಿಸಿಎಲ್ ಎದರು ರಸ್ತೆಯಲ್ಲಿ  ಶ್ರಮದಾನ

September 17, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy