ವರದಿ: ದಿನಕರ ನಾಯ್ಕ ಅಲಗೇರಿ.
ಅಂಕೋಲಾ : ಪ್ಯಾರಾ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬಳು, ಉಡುಪಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋದವಳು, ಇನ್ನು ಮನಗೆ ಬಾರದೆ ನಾಪತ್ತೆಯಾಗಿದ್ದಾಳೆ. ಅವಳನ್ನು ಹುಡುಕಿಕೊಡುವಂತೆ ಎಂದು ಯುವತಿಯ ತಾಯಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೀಡಿದ್ದಾರೆ.
ಮಾದನಗೇರಿಯ ಬಳಲೆಯವಳಾದ ಪ್ರೀತಿ ಶ್ರೀನಿವಾಸ ನಾಯ್ಕ (ಪ್ರಾಯ 21 ವರ್ಷ) ನಾಪತ್ತೆಯಾದವಳಾಗಿದ್ದಾಳೆ.
ನಾಪತ್ತೆಯಾದ ಪ್ರೀತಿ ಶ್ರೀನಿವಾಸ ನಾಯ್ಕ ಅವರ ತಾಯಿ ಮಾದೇವಿ ಶ್ರೀನಿವಾಸ ನಾಯ್ಕ ಸೋಮವಾರದಂದು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿ ತನ್ನ ಮಗಳಾದ ಪ್ರೀತಿ ನಾಯ್ಕ ಮಂಗಳೂರಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದವಳು. ಕಳೆದ ಮೂರು ತಿಂಗಳ ಹಿಂದೆ ಕಾಲೇಜ್ ಬಿಟ್ಟು ಮನೆಯಲ್ಲಿಯೇ ಬಂದು ಉಳಿದುಕೊಂಡಿದ್ದಳು.
ನವAಬರ 11 ರಂದು ಬೆಳಿಗ್ಗೆ 06- 00 ಗಂಟೆಗೆ ಉಡುಪಿಗೆ ಕೆಲಸಕ್ಕೆ ಹೋಗುತ್ತೇನೆ ಅಂತಾ ಮನೆಯಲ್ಲಿ ಹೇಳಿ ಅಂಕೋಲಾ ತಾಲೂಕಿನ ಬಳಲೆ, ಮಾದನಗೇರಿಯಲ್ಲಿರುವ ತನ್ನ ಮನೆಯಿಂದ ಹೋದವಳು ಇದೂವರೆಗೂ ವಾಪಸ್ ಮನೆಗೆ ಬಾರದೇ. ಪೋನ್ ಸಂಪರ್ಕಕ್ಕೂ ಸಿಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.
ಪ್ರೀತಿ 5 ಪುಟ್ 3 ಇಂಚ್ ಎತ್ತರವಿದ್ದು, ಕನ್ನಡ ಭಾಷೆ ಬಲ್ಲವಳಾಗಿದ್ದು, ಗೋದಿ ಮೈ ಬಣ್ಣ, ಉದ್ದನೆಯ ಮುಖ, ಸಾದಾರಣ ಮೈ ಕಟ್ಟು ಹೊಂದಿದ್ದಾಳೆ. ನಾಪತ್ತೆಯಾಗುವ ವೇಳೆಯಲ್ಲಿ ಗುಲಾಬಿ ಬಣ್ಣದ ಟಾಪ್, ಬಿಳಿ ಬಣ್ಣದ ಲಗಿನ್ಸ್ ಪ್ಯಾಂಟ್, ಬಿಳಿ ಬಣ್ಣದ ವೇಲ್, ಕುತ್ತಿಗೆಯಲ್ಲಿ ಕಪ್ಪು ದಾರ, ಬಲಕೈಯಲ್ಲಿ ಕಪ್ಪು ದಾರ ಮತ್ತು ಗದೆ ಲೊಕೇಟ್ ಧರಿಸಿದ್ದಾಳೆ ಎಂದು ಯುವತಿಯ ತಾಂಯಿ ಮಾದೇವಿ ಶ್ರೀನಿವಾಸ ನಾಯ್ಕ ತನ್ನ ದೂರಿನಲ್ಲಿ ವಿವರಿಸಿದ್ದಾರೆ.
ಇವರ ಬಗ್ಗೆ ಎಲ್ಲಾದರೂ ಮಾಹಿತಿ ಕಂಡು ಬಂದಲ್ಲಿ ಅಂಕೋಲಾ ಠಾಣೆಯ ಮೊಬೈಲ ಸಂಖ್ಯೆ 9480805250 _ಅಥವಾ 9480805268 ನಂಬರಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.