ಅಂಕೋಲಾ : ಇಲ್ಲಿನ ಪೊಲೀಸ್ ಠಾಣೆಯ ಎಸೈ ಒಬ್ಬರ ಮನೆಯಲ್ಲಿ ಚಾಲಾಕಿತನದಿಂದ ಚಿನ್ನ ಕದ್ದ ಇಬ್ಬರು ಯುವತಿಯರನ್ನ ಅಂಕೋಲಾ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ.
ಕೋಟೆವಾಡಾದ ರೋಮಾನಾ ಮೌಲಾಲಿ ತಂದೆ ಹುಸೇನಸಾಬ ಹಾಗೂ ಅಮದಳ್ಳಿಯ ಸುಮೇಧಾ ದಿಗಂಬರ ಮಹಾಲೆ ಬಂಧಿತ ಆರೋಪಿಗಳು.
ಈ ಚಾಲಾಕಿ ಯುವತಿಯು ಒಬ್ಬಳು ಕೋಟೆವಾಡಾದವಳಾಗಿದ್ದು, ಇನ್ನೊಬ್ಬಳು ಅಮದಳ್ಳಿಯವಳಾಗಿದ್ದಾಳೆ. ಈ ಯುವತಿಯರಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಘಟನೆ ಏನಾಗಿತ್ತು..?
ಪಟ್ಟಣದ ಕೋಟೆವಾಡಾದ ರಸ್ತೆಯಲ್ಲಿರುವ ಮನೆಯಲ್ಲಿ ಎಸೈ ಅವರ ಪತ್ನಿ ಟೇಲರಿಂಗ್ ಕೆಲಸ ಮಾಡುತ್ತಾರೆ. ಈ ಇಬ್ಬರು ಯುವತಿಯರು ಬಟ್ಟೆ ಹೊಲೆಯಲು ನೀಡಲು ಆಗಾಗ ಬಂದು ಪರಿಚಿತರಾಗಿದ್ದರು. ಕೆಲವು ದಿನಗಳ ಹಿಂದೆ ಎಸೈ ಅವರ ಪತ್ನಿ ೩೪ ಗ್ರಾಂ ತೂಕದ ಬಳೆ ಹಾಗೂ ೩ ಗ್ರಾಂ ತೂಕ ಉಂಗುರವನ್ನು ಟೇಬಲ ಮೇಲೆ ಇಟ್ಟಿದ್ದರು. ಈ ವೇಳೆ ಈ ಬಂಗಾರದ ಆಭರಣ ಕಳ್ಳತನವಾಗಿತ್ತು. ಈ ಬಗ್ಗೆ ಅಂಕೋಲಾ ಪೊಲೀಸ್ ಠಾನೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿತ್ತು.
ಚಿನ್ನವನ್ನು ಚಾಲಾಕಿತನದಿಂದ ಕಳವು ಮಾಡಿಕೊಂಡು ಈ ಯುವತಿಯರು ತೆಗೆದುಕೊಂಡು ಹೋಗಿ ಕಣ್ಣಕಣೇಶ್ವರ ದೇವಸ್ಥಾನದ ಸಮೀಪ ಇರುವ ಮುತೂಡ್ ಪೈನಾನ್ಸ್ನಲ್ಲಿ ಅಡವಿಗೆ ಇಟ್ಟು ಹಣ ಪಡೆದುಕೊಂಡಿದ್ದರು. ಪೊಲೀಸರು ಈ ಯುವತಿಯರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡ ವೇಳೆ ಕಳವು ಮಾಡಿದ್ದು ಒಪ್ಪಿಕೊಂಡಿರುವದಾಗಿ ತಿಳಿದುಬಂದಿದೆ. ಪೊಲೀಸರಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದ್ದು, ಪೊಲೀಸ್ ಪ್ರಕಟಣೆಯು ಮಾದ್ಯಮಕ್ಕೆ ತಲುಪಿಸಿದ ನಂತರವೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.