ಅಂಕೋಲಾ: ಶಿರಸಿಯಲ್ಲಿ ಭಗತ್ ಸಿಂಗ್ ಬ್ರಿಗೇಡ್ (ರಿ) ವತಿಯಿಂದ ನಡೆದ ರನ್ ಶಿರಸಿ ರನ್ ಮೆರಥಾನ್ ಓಟ ಸ್ಪರ್ಧೆಯಲ್ಲಿ ಅವರ್ಸಾ ಭಾರತ್ ಅಕಾಡೆಮಿ ಯ ವಿದ್ಯಾರ್ಥಿನಿಯರು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ದೀಪ್ತಿ ಉಲ್ಲಾಸ್ ಗಾಂವ್ಕರ್ ( ಪ್ರಸ್ತುತ ಮಹಿಳಾ ಶಾಲೆ ಅವರ್ಸಾ ವಿದ್ಯಾರ್ಥಿನಿ ) 15 ವರ್ಷದೊಳಗಿನ 7 ಕಿಮೀ ಮಹಿಳಾ ಮೆರಥಾನ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಚಂದ್ರಿಕಾ ಸುಧಾಕರ್ ಗೌಡ (ಪ್ರಸ್ತುತ ಕೆ.ಎಲ್.ಇ. ಶಾಲೆ ಅಂಕೋಲಾ ವಿದ್ಯಾರ್ಥಿನಿ) 7 ಕಿಮೀ ಮಹಿಳಾ ಮುಕ್ತ ಮೆರಥಾನ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ತನ್ನೂರಿನ ಕೀರ್ತಿ ಹೆಚ್ಚಿಸಿರುತ್ತಾರೆ.

ಇವರು ಹಲವು ವರ್ಷಗಳಿಂದ ಎಕ್ಸ್ ಪ್ಯಾರಾ ಕಮಾಂಡೋ ಸುಧೀರ ನಾಯ್ಕ ಇವರ ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದು ಉತ್ತಮ ದೈಹಿಕ ಕ್ಷಮತೆ ಕರಗತ ಮಾಡಿಕೊಂಡಿದ್ದಾರೆ.

ಇವರ ಸಾಧನೆಗೆ ಪರೇಶ ಗಣಪತಿ ಆಚಾರಿ, ಶ್ರೀಕಾಂತ್ ಥಾಕು ನಾಯ್ಕ, ಕೆ.ಎಲ್.ಇ. ಶಾಲೆಯ ಶಿಕ್ಷಕರು, ಮಹಿಳಾ ಶಾಲೆಯ ಶಿಕ್ಷಕರು ಸೇರಿದಂತೆ ಅವರ್ಸಾ ಗ್ರಾಮದ ಎಲ್ಲ ಸಾರ್ವಜನಿಕರು ಶುಭಾಶಯ ಕೋರಿದ್ದಾರೆ.