ಅಂಕೋಲಾ : ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ವ್ಯಕ್ತಿಯೊಬ್ಬ ಧಾಂದಲೆ ನಡೆಸಿದ್ದಾನೆ ಎಂದು ಪೊಲೀಸ್ ಪ್ರಕರಣ ದಾಖಲಾದ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಇದರಲ್ಲಿ ಹಿಲ್ಲೂರು ಗ್ರಾಮದ ತಿಂಗಳಬೈಲ್ನ ಮೂಲಿಗದ್ದೆಯ ಪ್ರದೀಪ ಮಾಣೇಶ್ವರ ನಾಯಕ ಅವನ ಯಾವುದೇ ತಪ್ಪಿಲ್ಲ ಎಂದು ರಾಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪ್ರವೀಣ ನಾಯಕ ಸ್ಪಷ್ಠಪಡಿಸಿದ್ದಾರೆ.
ಈ ಬಗ್ಗೆ ಪ್ರವೀಣ ನಾಯಕ ಅವರು ಹೇಳಿಕೆ ನೀಡಿ ಕಳೆದ ಹಲವಾರು ದಿನಗಳಿಂದ ಸಂಘ ಪರಿವಾರದವರು ರಾಮಲಿಂಗೇಶ್ವರ ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದರು. 29-12-2023 ರಂದು ಸಭೆ ಕರೆದು ಸದ್ರಿ ದೇವಸ್ಥಾನವನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷದ ಅಥವಾ ಸಂಘ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದೆಂದು ಠರಾವು ಪಾಸು ಮಾಡಿದರೂ, ಅದನ್ನು ಗಾಳಿಗೆ ತೂರಿ ಪುನಃ ಮೀಟಿಂಗ್ ನಡೆಸಿದ್ದರು.
ಇದನ್ನು ಪ್ರತಿಭಟಿಸಿದ ಪ್ರದೀಪ ಮಾಣೇಶ್ವರ ನಾಯಕ ಮತ್ತು ಫಿರ್ಯಾದುದಾರರಿಗೆ ಮಾತಿಗೆ ಮಾತು ನಡೆದು ಈರ್ವರ ಮೇಲೆಯೂ ಹಲ್ಲೆಯಾಗಿದೆ.
ನಾವು ನಮ್ಮ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಹೊರತುಪಡಿಸಿ ಯಾವುದೇ ರಾಜಕೀಯ ಮತ್ತು ಸಂಘ–ಸAಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಬಾರದೆಂದು ತೀರ್ಮಾನಿಸಿ ಠರಾವು ಪಾಸು ಮಾಡಿದ್ದೇವೆ. ಆದರೆ ಪುನಃ ರಾಜಕೀಯದ ಕಾರ್ಯಕ್ರಮವನ್ನು ನಡೆಸಲು ಸಭೆ ಸೇರಿದ್ದಾರೆಂದು ಮಾಹಿತಿ ಬಂದಿತ್ತು. ದೇಗುಲದ ಅಧ್ಯಕ್ಷನಾದರೂ ಇಲ್ಲಿ ಸಭೆ ಸೇರುವ ವಿಚಾರವನ್ನು ನನ್ನ ಗಮನಕ್ಕೆ ತಂದಿರಲಿಲ್ಲ. ಹೀಗಾಗಿ ರಾಜಕೀಯ ಪ್ರೇರಿತವಾಗಿ ಅಮಾಯಕ ಪ್ರದೀಪ ಮಾಣೇಶ್ವರ ನಾಯಕ ಅವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪ್ರವೀಣ ನಾಯಕ ತಿಳಿಸಿದ್ದಾರೆ.
ಪ್ರಕರಣ ಏನಾಗಿತ್ತು..?
ಹಿಲ್ಲೂರಿನ ತಿಂಗಳಬೈಲನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಎದುg ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ವ್ಯಕ್ತಿಯೊಬ್ಬ ಧಾಂದಲೆ ನಡೆಸಿ ಎಂದು ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ನಡೆಸಿದ್ದಾನೆ ಎಂದು ದತ್ತಾತ್ರೇಯ ಗಣಪತಿ ಹೆಗಡೆ ದೂರು ನೀಡಿದ್ದರು. ಈ ಬಗ್ಗೆ ಅಂಕೊಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳಬೈಲ್ನ ಮೂಲಿಗದ್ದೆಯ ಪ್ರದೀಪ ಮಾಣೇಶ್ವರ ನಾಯಕ ಆರೋಪಿತನಾಗಿದ್ದ.
ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿ ಸದಸ್ಯ ಸಚಿತ ಗೋವಿಂದ್ರಾಯ ನಾಯಕ. ಹಿಲ್ಲೂರು ಹಾಗೂ ನಾಗರಾಜ ಗಣಪತಿ ಹೆಗಡೆ ಹಾಗೂ ದತ್ತಾತ್ರೇಯ ಗಣಪತಿ ಹೆಗಡೆ ಹಲ್ಲೆಗೊಳಗಾದವರಾಗಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.