ಅಂಕೋಲಾ : ತಾಲೂಕಿನ ಬಹುಮುಖ ಪ್ರತಿಭೆ, ಸೃಜನಶೀಲ ವ್ಯಕ್ತಿತ್ವದ ಸುಜೀತ್ ಎನ್. ನಾಯ್ಕ ಅವರ 13 ನೇ ಕೃತಿ ‘ಅನ್ಯಾಯದ ಕುರುಕ್ಷೇತ್ರ ಸಿಡಿದೆದ್ದ ನ್ಯಾಯ ದೇವತೆ ಅರ್ಥಾತ್ ಮಸಣ ಸೇರಿದ ಜೂಜುಗಾರ ನಾಟಕ’ ಕೃತಿಯು ಶ್ರೀ ಮಾಲ ಮಾಸ್ತಿ ಅರುಣೋದಯ ನಾಟ್ಯ ಮಂಡಳಿಯಿ0ದ ಜ. 13 ರಂದು ರಾತ್ರಿ 9 ಗಂಟೆಗೆ ನಡೆಯುವ ನಾಟಕ ಪ್ರದರ್ಶನದಲ್ಲಿ ಬಿಡುಗಡೆಯಾಗಲಿದೆ.
ಆಧುನಿಕತೆಯ ಹೈಟೆಕ್ ಸ್ಪರ್ಶಕ್ಕೆ ಮನರಂಜನಾ ಕ್ಷೇತ್ರ ನಲುಗಿ, ನಾಟಕ ರಂಗವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಇಲ್ಲೊಬ್ಬ ಯುವ ಕಲಾವಿದ, ಲೇಖಕ ಕಳೆದ 23 ವರ್ಷಗಳಿಂದ ನಾಟಕವನ್ನು ರಚಿಸುತ್ತಾ, ಅಭಿನಯಿಸುತ್ತ ಇದೀಗ 2001 ನೇ ಪ್ರದರ್ಶನದತ್ತ ಹೆಜ್ಜೆ ಇಡುತ್ತಾ ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸುತ್ತಿದ್ದಾರೆ.
ತಾಲೂಕಿನ ಅವರ್ಸಾದ ಮೂಡೆಕಟ್ಟಾದ ಸುಜೀತ್ ಎನ್. ನಾಯ್ಕ ಉತ್ತರ ಕನ್ನಡ ಜಿಲ್ಲೆಯ ನಾಟಕ ರಂಗಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಈಗಾಗಲೇ 12 ನಾಟಕ ರಚಿಸಿದ್ದು, 1600 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರ 12 ನಾಟಕಗಳು ಎರಡು ಸಾವಿರಕ್ಕೂ ಹೆಚ್ಚು ಕಡೆ ಪ್ರದರ್ಶನಗೊಂಡಿವೆ.
ಸುಜೀತ ಅವರಿಗೆ ನಾಟಕ ರಚನೆ, ನಿರ್ದೇಶನ ಪ್ರವೃತ್ತಿ. 1998 ರಲ್ಲಿ ತಂಗಿ ತೀರಿಸಿದ ಅಣ್ಣನ ಋಣ ಚೊಚ್ಚಲ ನಾಟಕ ಕೃತಿಯ ಮೂಲಕ ತಮ್ಮ ಲೇಖನ ಆರಂಭಿಸಿದರು. ಇಲ್ಲಿಯವರೆಗೆ ‘ಪಾಪದ ಹಣೆಗೆ ಪುಣ್ಯದ ಸಿಂಧೂರ’, ಕುರುಡಿ ಧರಿಸಿದ ಮಂಗಲಸೂತ್ರ’, ‘ವಿಧವೆ ತುಳಿದ ಸಪ್ತಪದಿ’, ‘ವಿಧುರ ಕಟ್ಟಿದ ತಾಳಿ’, ‘ಧರ್ಮ ದೀಪ’, ‘ದಿಕ್ಕು ತಪ್ಪಿದ ಪತಿಗೆ ಕಾಣಿಕೆ ನೀಡಿದ ಸತಿ’, ‘ತಾಯಿ ಸಾಕ್ಷಿ’ ರಚಿಸಿದ್ದಾರೆ. ಈಗ ರಚಿಸಿರುವ ‘ರೌಡಿ ಸಾಮ್ರಾಜ್ಯದಲ್ಲಿ ಕಾನೂನು ಸಮರ’ ಧರಣಿ ಮಂಡಲ ದೊಳಗೆ ಬೆಂಕಿ ಬಿರುಗಾಳಿ, ದರ್ಪಕ್ಕೆ ತೀರ್ಪು ಕೊಟ್ಟ ಸರ್ಪಿಭಣಿ, ರಣಾಂಗಣದಲ್ಲಿ ಪಾಣಿಗ್ರಹಣ ನಾಟಕದ ಕೃತಿಗಳು ಈಗಾಗಲೇ ಲೋಕಾಪ್ಣೆಗೊಂಡಿದೆ,
2001ನೇ ಪ್ರಯೋಗ :
ಸುಚಿತ ಅವರ ಸಾಂಸಾರಿಕ ಹಾಗೂ ಹಾಸ್ಯಮಯ ನಾಟಕಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಉತ್ತರ ಕರ್ನಾಟಕ ಭಾಗಗಳಲ್ಲೂ ಸೈ ಎನಿಸಿಕೊಂಡು ನೂರಾರು ಪ್ರದರ್ಶನ ಕಂಡಿವೆ. 1998 ರಿಂದ ಇಲ್ಲಿಯವರೆಗೆ ಅವರ ನಾಟಕಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದೆ. ಕೆಲವು ಕೃತಿಗಳನ್ನು ಗಜೇಂದ್ರ ಪ್ರಕಾಶನದವರು ಪ್ರಕಟಿಸಿದ್ದಾರೆ.
ಸಮಕಾಲೀಸ ಟಚ್ :
ಸುಜೀತ ಅವರ ನಾಟಕದ ಪ್ರದರ್ಶನದಲ್ಲಿ ಸ್ಥಳೀಯ ವಿದ್ಯಮಾನ ಟಿಚ್ ಇಟ್ಟುಕೊಂಡೆ ಪ್ರದರ್ಶನಗೊಳ್ಳುತ್ತದೆ. ಉದಾಹರಣೆಗೆ ಎಸಿಫ್ ಮದನ ನಾಯಕ ದುಷ್ಕರ್ಮಿಗಳ ಹಲ್ಲೆಗೆ ಬಲಿಯಾದಾಗ ದಕ್ಷ ಅಧಿಕಾರಿ ಪಾಡೇನು ಎಂಬ ಬಗ್ಗೆ ತಮ್ಮ ನಾಟಕದಲ್ಲೇ ಪಾತ್ರವನ್ನು ಜೋಡಿಸಿದ್ದರು. ಹಾಗೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಆರ್.ಎನ್.ನಾಯಕ ಕಥೆಯ ಎಳೆಯನ್ನು ಸಮಕಾಲೀನ ವಿದ್ಯಮಾನಕ್ಕೆ ಹೈಟೆಕ್ ಟಚ್ ನೀಡಿ ತಮ್ಮ ಸೃಜನಶೀಲತೆಯನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಕೇವಲ ಬರವಣಿಗೆ, ನಿರ್ದೇಶನಕ್ಕಷ್ಟೆ ಪ್ರತಿಭೆಯನ್ನು ಮೀಸಲಿಡದ ಸುಚಿತ, ಅಭಿನಯದಲ್ಲೂ ಸೈ ಎನಿಸಿಕೊಂಡು 250 ಕ್ಕೂ, ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ರಂಗಭೂಮಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿರುವ ಈಗಿನ ಸಂದರ್ಭದಲ್ಲಿ ಯುವ ಕಲಾವಿದ ಸುಜೀತ ನಾಟಕಗಳಲ್ಲಿ ಅಭಿನಯ ಹಾಗೂ ನಿರ್ದೇಶನ ನೀಡುವುದರ ಜತೆಗೆ ನಾಟಕದ ಕೃತಿಗಳನ್ನು ಹೊರತರುತ್ತಿರುವದು ನಿಜಕ್ಕೂ ಶ್ಲಾಘನೀಯ. ಇಂತಹ ಬೆಳವಣಿಗೆ ಜಾನಪದ ಲೋಕದ ಉಳಿವಿಗೆ ಸಹಕಾರಿ.
ನಾಗೇಂದ್ರ ಮಹಾದೇವ ನಾಯ್ಕ, ಪಿಡಿಒ. ಸುಂಕಸಾಳ ಗ್ರಾ.ಪಂ.
ಕಲಾವಿದರ ಸ್ಫೂರ್ತಿಯೇ ನನಗೆ ನಾಟಕವನ್ನು ರಚಿಸಲು ಪ್ರೇರಣೆಯಾಯಿತು. ನಾಟಕ ರಂಗವನ್ನು ಉಳಿಸಲು ಸರಕಾರವು ಕೂಡ ವಿಶೇಷವಾಗಿ ಚಿಂತಿಸಬೇಕು. ನಾಟಕಗಳಿಂದ ಸಮಾಜದಲ್ಲಿ ಸಾಮರಸ್ಯ ಹಾಗೂ ಜಾನಪದದ ಕಲೆಯನ್ನು ಗಟ್ಟಿಗೊಳಿಸುವ ಶಕ್ತಿಯಿದೆ.