ರಾಘು ಕಾಕರಮಠ.
ಅಂಕೋಲಾ : ಮನೆಯ ಬೆಡ್ ರೂಮಿನ ಕಪಾಟಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿಯ (8.25 ಲಕ್ಷ ರೂ ಮೌಲ್ಯದ) ಚಿನ್ನ ( GOLD ) ಕಳ್ಳತನವಾದ ಘಟನೆ ಜಿ.ಸಿ.ಕಾಲೇಜ್ ರಸ್ತೆಯ ದೇವಿದಾಸ ಪೊಂದು ಪ್ರಭು ಅವರ ಮನೆಯಲ್ಲಿ ನಡೆದಿದೆ.
ಈ ಬಗ್ಗೆ ದೇವಿದಾಸ ಪೊಂದು ಪ್ರಭು ಶನಿವಾರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನಲ್ಲಿ ಏನಿದೆ..?
ಯಾರೋ ಕಳ್ಳರು 27-12-2022 ರ ಸಂಜೆ 5 ಗಂಟೆಯ ಅವಧಿಯಿಂದ 4-12-2023 ರ ಸಂಜೆ 4 ಗಂಟೆಯ ಅವಧಿಯಲ್ಲಿ ಮನೆಯ ಬೆಡ್ ರೂಮಿನ ಕಪಾಟಿನಲ್ಲಿ ಪೌಚ್ ಪರ್ಸ್ನಲ್ಲಿ ಇಟ್ಟಿದ್ದ, ನನ್ನ ಪತ್ನಿಗೆ ಸಂಬAದಿಸಿದ 11 ಬಂಗಾರದ ಬಳೆಗಳು ( 175 ಗ್ರಾಂ ತೂಕದ ) 8 ಲಕ್ಷದ 75 ಸಾವಿರ ಮೌಲ್ಯದ ಕಳ್ಳತನ ಮಾಡಿಕೊಂಡು ಹೋಗಿದ್ದು, ಇದನ್ನು ಪತ್ತೆ ಮಾಡಿ ಕೊಡಬೇಕೆಂದು ಪೊಲೀಸ್ ದೂರು ನೀಡಿದ್ದಾರೆ. ತಮ್ಮ ಮನೆಗೆ ಬರುವ ಕೆಲಸದವಳನ್ನು ವಿಚಾರಿಸುವ ಪ್ರಯತ್ನದಲ್ಲಿ ದೂರು ನೀಡಲು ವಿಳಂಬವಾಗಿದೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.
ಘಟನೆ ನಡೆದು ಒಂದು ವರ್ಷವಾಗಿದ್ದರಿಂದ ಪೊಲೀಸರಿಗೆ ಪ್ರಕರಣದ ಪತ್ತೆಯು ಕೂಡ ಸವಾಲಾಗಿ ಪರಿಗಣಿಸಿದೆ. ಪಿಎಸೈ ಸುಹಾಸ್ ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.