ಅಂಕೋಲಾ : ವಾಕಿಂಗ್‌ಗೆ ತೆರಳಿದಾಗ ಟಾಟಾಏಸ್ ವಾಹನ ಬಡಿದು ಸ್ಥಳದಲ್ಲಿಯೇ ಸಾವು ಕಂಡ ಘಟನೆ ರಾಷ್ಟಿçÃಯ ಹೆದ್ದಾರಿಯ ಕೋಟೇವಾಡಾದ ಲಿಂಬುಚಾಳ ಎದುರಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಸಪ್ನ ಹೋಟೆಲ್ ಹಿಂದುಗಡೆಯ ನಿವಾಸಿಯಾಗಿದ್ದ ಲಕ್ಷ್ಮೀ ರಮೇಶ್ ನಾಯಕ (65) ಮೃತಪಟ್ಟವರು.
ಪಿಕಾಕ್ ಬಾರ ಬಳಿಯಿಂದ ಅಜ್ಜಿಕಟ್ಟಾಕ್ಕೆ ಕಡೆಗೆ ಲಕ್ಷ್ಮೀ ನಾಯಕ ಅವರು ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅಂಕೋಲಾ ಕಡೆಗೆ ಕಾರವಾರದಿಂದ ಡಿಜೆ ಸೌಂಡ್ ಸಿಸ್ಟ್ಂ ತುಂಬಿಕೊ0ಡು ಬರುತ್ತಿದ್ದ ಟಾಟಾಏಸ್ ವಾಹನವು ಲಕ್ಷೀ ನಾಯಕ ಅವರಿಗೆ ಹಿಂಬ0ದಿಯಿ0ದ ಬಂದು ಅಫಘಾತ ಪಡಿಸಿದೆ. ಲಕ್ಷೀ ನಾಯಕ ಅವರು ತೀವ್ರವಾಗಿ ಗಾಯಗೊಂಡಿದ್ದರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗುಣದಲ್ಲಿ ಸಾಕ್ಷಾತ್ ಲಕ್ಷೀಯೆ ಆಗಿದ್ದ ಲಕ್ಷ್ಮೀ ನಾಯಕ ಕುಟುಂಬದ ಅನ್ನಪೂರ್ಣೆಯಂತಿದ್ದರು. ಸರಳ ವ್ಯಕ್ತಿತ್ವದರಾದ ಲಕ್ಷ್ಮೀ ನಾಯಕ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಲಕ್ಷ್ಮೀ ನಾಯಕ ಅವರು ಪತಿ ರಮೇಶ ನಾಯಕ, ಪುತ್ರಿ ಮಂಜುಶಾ, ಅಳಿಯ ಅಪೂರ್ವ ಸೇರಿದಂತೆ ಅಪಾರ ಬ0ಧು ಬಳಗವನ್ನು ಬಿಟ್ಟು ಅಗಲಿದ್ದಾರೆ.