ಅರುಣ ಶೆಟ್ಟಿ@shetti.arun@gmail.com
ಅಂಕೋಲಾ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಿದ್ದತೆಗಳು ನಡೆದಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಪ್ರಮುಖ ದೇವಾಲಯುಗಳಿಗೆ ಬಾಂಬ ನಿಷ್ಕ್ರಿಯ ದಳದವರು ಆಗಮಿಸಿ ಭಾನುವಾರ ತಪಾಸನೆ ನಡೆಸಿದರು.
ಎಎಸೈ ಸಂಜು ಬೋವಿ ತಂಡ ಜೊತೆಗೆ ಬಾಂಬ ಪತ್ತೆ ಪರಿಣಿತಿ ಜೊತೆಗೆ ಬಾಂಬ ಪತ್ತೆ ಪರಿಣಿತಿ ಹೊಂದಿದ ಶೈನಿ ಡಾಗ್ ಕಾರವಾರದಿಂದ ಆಗಮಿಸಿ ಪಟ್ಟಣದೆಲ್ಲೆಡೆ ಮತ್ತು ದೇವಸ್ಥಾನಗಳಿಗೆ ತೆರಳಿ ಪರಿಶೀಲಿಸಿದರು.
ಅಂಕೋಲಾ ಪಟ್ಟಣದಲ್ಲಿ ಶ್ವಾನ ದಳದವರು ಓಡಾಟ ನಡೆಸಿದ್ದರಿಂದಾಗಿ ನಾಗರಿಕರು ಒಮ್ಮೆಲೆ ಆತಂತಕ್ಕೆ ಒಳಗಾದ ಘಟನೆಯು ನಡೆಯಿತು. ನಂತರ ಈ ತಪಾಸಣೆ ನಡೆದದ್ದು ಶ್ರೀ ರಾಮನ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಿಮಿತ್ತ ಎಂದು ಅರಿತ ಮೇಲೆ ನಾಗರಿಕರು ನಿಟ್ಟಿಸಿರುಇ ಬಿಡುವಂತಾಯಿತು.
ತಾಲೂಕು ಕೇಂದ್ರಗಳ ಪ್ರಮುಖ ವೃತ್ತ, ಸ್ಥಳಗಳಲ್ಲಿ ರಾಮನ ಬಂಟಿAಗ್, ಬ್ಯಾನರ್, ಫ್ಲೆಕ್ಸ್ ಅಳವಡಿಸಲಾಗಿದೆ. ಒಂದೆಡೆ ಸಂಭ್ರಮ ಜೋರಾಗಿದ್ದರೆ, ಕೆಲವರು ಅಡ್ಡಿಪಡಿಸದಿರಲಿ ಎಂದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಫ್ಲೆಕ್ಸ್ ಬಂಟಿAಗ್ಸ್ ಗಳ ಮೇಲೆ ನಿಗಾ ಇಟ್ಟು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸನ್ನದ್ದವಾಗಿದೆ.