ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಗ0ಡನ ತಮ್ಮನೆ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಹಾಗೂ ಬಟ್ಟೆ ಹರಿದು ಮಾನಕ್ಕೆ ಕುಂದು ತಂದಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪಟ್ಟಣದ ಕಾಕರಮಠದ ಮಹಿಳೆಯೊಬ್ಬಳು ಈ ಬಗ್ಗೆ ಪೊಲೀಸ್ ದೂರು ನೀಡಿ ಫೆ. 4 ರಂದು ಸಂಜೆ 4-50 ರಿಂದ 5-15 ರ ಅವಧಿಯಲ್ಲಿ ನಾನು ಅಂಗಡಿಯಿ0ದ ಮನೆಗೆ ಬಂದಾಗ ಗಂಡನ ತಮ್ಮ ಉಮರ ಅಹ್ಮದ ಶೇಖ ಈತ ಅವಾಚ್ಯವಾಗಿ ಬೈದು ನಿನ್ನ ಗಂಡ ಎಲ್ಲಿ ಹೋಗಿದ್ದಾನೆ. ಈಗ ಎಲ್ಲಿದ್ದಾನೆ. ಆತನ ಮೇಲೆ ನಾವು ಪೊಲೀಸ್ ಸ್ಟೇಷನನಲ್ಲಿ ಕೇಸ್ ಕೊಟ್ಟಿದ್ದೇವೆ. ಆತನಿಗೆ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಲೆ. ನನ್ನ ಹಿಂಬಾಲಿಸುತ್ತ ಬೆಡ್ ರೂಮಿಗೆ ಬಂದವನು ಬಲ ಕೈ ಹಿಡಿದು ಎಳೆದು, ಹೊಡೆದಿದ್ದಲ್ಲದೆ, ಚುಡಿದಾರವನ್ನು ಹಿಡಿದು ಎಳೆದು ಹರಿದು ಹಾಕಿ, ಮಾನಕ್ಕೆ ಕುದುಂಟು ಮಾಡಿದ್ದಾನೆ.
ಆಗ ನಾನು ಜೋರಾಗಿ ಕೂಗಿಕೊಂಡಾಗ, ಆಗ ಆತ ನನ್ನನ್ನು ದೂಡಿ ಹಾಕಿ ಬೆಡ್ ರೂಮ್‌ನಿಂದ ಹೊರ ಬಂದು, ಮತ್ತೆ ಅವಾಚ್ಯವಾಗಿ ನಿಂದಿಸಿ ನಿನಗೆ ಹಾಗೂ ನಿನ್ನ ಗಂಡನನ್ನು ನಾನು ಸುಮ್ಮನೆ ಬಿಡುವದಿಲ್ಲ. ಇಬ್ಬರನ್ನು ಕೊಂದು ಹಾಕುತ್ತೇನೆ ಎಂದು ದೂರಿನ ಸಾರಾಂಶದಲ್ಲಿ ವಿವರಿಸಿದ್ದಾಳೆ.
ಆರೋಪಿ ಉಮರ ಅಹ್ಮದ ಶೇಖ ಅವರ ವಿರುದ್ದ ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಯ ಮೇಲೆ ಐಪಿಸಿ 506,504,323,354 ಕಲಂಅಡಿ ಪ್ರಕರಣ ದಾಖಲಾಗಿದೆ.