TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಫೆ 10 ರಂದು ಅಂಕೋಲಾಕ್ಕೆ ಚಕ್ರವರ್ತಿ ಸೂಲಿಬೆಲೆ

Feb 9, 2024 | ವಿಶೇಷ |

ಫೆ 10 ರಂದು ಅಂಕೋಲಾಕ್ಕೆ ಚಕ್ರವರ್ತಿ ಸೂಲಿಬೆಲೆ

ಅಂಕೋಲಾ : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಮತ್ತೆ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕಾಗಿ ನಮೋ ಬ್ರಿಗೇಡ್ ತಂಡ ಫೆ 10 ರ ಶನಿವಾರದಂದು ನಗರದ ಪಿ ಎಮ್ ಹೈಸ್ಕೂಲ ಆವರಣದಲ್ಲಿ ಸಂಜೆ 4.30 ಗಂಟೆಗೆ ನಮೋ ಭಾರತ್ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅಂಕೋಲಾ ತಾಲೂಕ ನಮೋ ಬ್ರಿಗೇಡ್‌ನ ಸಂಚಾಲಕ ಸಂದೀಪ ಗಾಂವಕರ ಹೇಳಿದರು.

ಅವರು ದೈವಜ್ಞ ಸಭಾಭವನದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ನಮೋ ಬ್ರಿಗೇಡ್ ತಂಡದ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಮಾತನಾಡಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾಗುತ್ತ ಬಂದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಪ್ರತಿಯೊಬ್ಬರ ಆಶಯವಾಗಿದೆ. ಅದರ ಅಂಗವಾಗಿ ರಾಜ್ಯಾಧ್ಯಂತ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇಶವನ್ನು ಬಲಿಷ್ಠವಾಗಿ ಕಟ್ಟಲು ಮೋದಿ ಅವರ ನಾಯಕತ್ವ ಅಗತ್ಯವಿದೆ. ಭಾರತದ ಭಾಗ್ಯ ವಿಧಾತನ ಸಾಧನೆ ತಿಳಿಸಲು ನಮೋ ಬ್ರಿಗೇಡ್ ತಂಡ ರಾಜ್ಯದಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂಕೋಲಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪತ್ರಕರ್ತ ರಾಘು ಕಾಕರಮಠ, ಅವರ್ಸಾದ ದಿನೇಶ ಮೇತ್ರಿ, ಸಂಜಯ ತಳೇಕರ, ಸುರೇಶ ವೆರ್ಣೇಕರ ಅಲಗೇರಿ ಹಾಗೂ ಪುರುಷೋತ್ತಮ ನಾಯಕ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಗಣೇಶ ಕುಡ್ತಲಕರ ಹಾಗೂ ನಾಗರಾಜ ಐಗಳ ಮಾತನಾಡಿದರು ರಾಘವೇಂದ್ರ ಗಾಂವಕರ ಸ್ವಾಗತಿಸಿದರು. ರಾಘು ನಾಯ್ಕ್ ವಂದಿಸಿದರು. ಪ್ರಮುಖರಾದ ಪ್ರವೀಣ ನಾಯ್ಕ, ಸುರೇಶ ಗೌಡ, ಸಂತೋಷ ನಾಯ್ಕ, ಪವನ ಗಾಂವಕರ, ನಾಗರಾಜ ನಾಯ್ಕ್, ಸುಬ್ರಮಣ್ಯ ರೇವಣಕರ, ಸುಪ್ರೀತ ಗಾಂವಕರ, ಕರಣ ನಾಯ್ಕ, ಪ್ರವೀಣ ಗೌಡ, ವಿನಾಯಕ ಗುಡಿಗಾರ, ಗಜಾನನ ನಾಯ್ಕ್,ಪುಷ್ಪಾ ಶೆಟ್ಟಿ,ಸುಲಕ್ಷಾ ಭೋ ಸೇರಿದಂತೆ ನಮೋ ಬ್ರಿಗೇಡನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.

Share:

Rate:

Previousಗಂಡನ ತಮ್ಮನಿಂದ ದೈಹಿಕವಾಗಿ ಹಲ್ಲೆ ಹಾಗೂ ಬಟ್ಟೆ ಹರಿದು ಮಾನಕ್ಕೆ ಕುಂದು : ಮಹಿಳೆಯಿಂದ ದೂರು
Nextಫೆ. 15 ರಂದು ಕೆನರಾ ಬ್ಯಾಂಕ ಎದುರು ಮಹಿಳೆಯರಿಂದ ಪೊರಕೆ ಹಿಡಿದು ಪ್ರತಿಭಟನೆ

Related Posts

ಅಂಕೋಲಾದ‌ ಮಣ್ಣಿನ ಮಗ ಎಸಿಪಿ ರವೀಶ ನಾಯಕರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರ

ಅಂಕೋಲಾದ‌ ಮಣ್ಣಿನ ಮಗ ಎಸಿಪಿ ರವೀಶ ನಾಯಕರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರ

August 14, 2024

ಶಾಂತಿನಿಕೇತನದಲ್ಲಿ ಅದ್ದೂರಿಯಾಗಿ ನಡೆದ ಮುದ್ದು ಕೃಷ್ಣ, ಮುದ್ದು ರಾಧೆ ಸ್ಪರ್ಧೆ

ಶಾಂತಿನಿಕೇತನದಲ್ಲಿ ಅದ್ದೂರಿಯಾಗಿ ನಡೆದ ಮುದ್ದು ಕೃಷ್ಣ, ಮುದ್ದು ರಾಧೆ ಸ್ಪರ್ಧೆ

September 9, 2023

ಜೈಹಿಂದ್ ಆಟೋರಿಕ್ಷಾ ಮಾಲಕ ಮತ್ತು ಚಾಲಕರ ಸಂಘದ ವತಿಯಿಂದ 77 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಜೈಹಿಂದ್ ಆಟೋರಿಕ್ಷಾ ಮಾಲಕ ಮತ್ತು ಚಾಲಕರ ಸಂಘದ ವತಿಯಿಂದ 77 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

August 16, 2023

ಅಂಕೋಲಾದಲ್ಲಿ ಸಿಎಮ್ ಸಿದ್ಧರಾಮಯ್ಯ ಅವರ ದಿನಾಚರಣೆ

ಅಂಕೋಲಾದಲ್ಲಿ ಸಿಎಮ್ ಸಿದ್ಧರಾಮಯ್ಯ ಅವರ ದಿನಾಚರಣೆ

August 3, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy