ಅಂಕೋಲಾ : ತಾಯಿ– ಮಗ ಇಬ್ಬರೂ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ತಾಲೂಕಿನ ಅವರ್ಸಾದಲ್ಲಿ ಸೋಮವಾರ ಸಂಜೆ ನಡೆದಿದೆ.
ಫೆಬ್ರವರಿ 17 ರ ರಾತ್ರಿ ತಾಯಿ ಗೀರಿಜಾ ಗಿರಿಯಪ್ಪ ಮೇತ್ರಿ ಅನಾರೋಗ್ಯದಿಂದ ನಿಧನರಾಗಿದ್ದರು. ತಾಯಿಯ ಅಗಲುವಿಕೆಯ ನೋವಿನಲ್ಲಿದ್ದ ಮಗ ನಾಗೇಶ ಗಿರಿಯಪ್ಪ ಮೇತ್ರಿ ಫೆ. 19 ಸಂಜೆ 7-13 ಘಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೋಮಾರಪಂಥ ಸಮಾಜದ ಗುರುಮನೆಯರಾದ ಇವರು ಆದರ್ಶ ಕುಟುಂಬದವರಾಗಿ, ಎಲ್ಲರ ಪ್ರೀತಿಗೆ ಪಾತ್ರರಾಗಿ ಆತ್ಮೀಯತೆಗೆ ಕಾರಣರಾಗಿದ್ದರು. ಗಿರಿಯಪ್ಪಾ ಮೇತ್ರಿ ಅವರ ಮೂರನೇ ಮಗನಾದ ನಾಗೇಶ ಮೇತ್ರಿ ಅವರು ಸದಾ ಕ್ರೀಯಾಶೀಲನಾಗಿ, ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡು, ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸದಾ ಹಸನ್ಮುಖಿಯಾಗಿ, ಸ್ನೇಹಿತರ ಜೊತೆ ತಮಾಷೆ ಮಾಡುತ್ತ ಕಾಲ ಕಳೆಯುತ್ತಿದ್ದ ವಿಶೇಷ ವ್ಯಕ್ತಿತ್ವದ ನಾಗೇಶ ಮೇತ್ರಿ ಅವರ ಅಕಾಲಿಕ ನಿಧನ ವಾರ್ತೆಯಿಂದಾಗಿ ಆಪ್ತ ಹಾಗೂ ಕುಟುಂಬದ ವಲಯದಲ್ಲಿ ಶೋಕ ಮಡುಗಟ್ಟಿದಂತಾಗಿದೆ.
ನಾಗೇಶ ಅವರ ಅಂತ್ಯಕ್ರಿಯೆಯನ್ನು ಫೆ. 20 ರ ಮಂಗಳವಾರ ಬೆಳಿಗ್ಗೆ9 ಗಂಟೆಗೆ ನೆರವೇರಿಸಲಾಗುವದು ಎಂದು ಸಹೋದರ ಗುರುಮನೆಯ ಶ್ರೀಧರ ಮೇತ್ರಿ ತಿಳಿಸಿದ್ದಾರೆ.
ಮೃತ ನಾಗೇಶ ಅವರು ಪತ್ನಿ ವಿದ್ಯಾ, ಮಕ್ಕಳಾದ ಮಂಜುನಾಥ, ಸಂದೇಶ, ನಂದನ ಸೇರಿದಂತೆ ನಾಲ್ವರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ರಾಘು ಕಾಕರಮಠ.