ಅಂಕೋಲಾ : ವಜ್ರ ಮಹೋತ್ಸವದ ಸಂಭ್ರಮದ ಹಾದಿಯಲ್ಲಿರುವ ಅವರ್ಸಾದ ದಂಡೇಭಾಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕಿಡಿಗೇಡಿಗಳ ಉಪಟಳಕ್ಕೆ ತುತ್ತಾಗಿದೆ. ಶಾಲೆಯ ಆವಾರದಲ್ಲಿ ರಾತ್ರಿ ಹೊತ್ತು ದುಷ್ಕರ್ಮಿಗಳ ಪೈಶಾಚಿಕ ಕೃತ್ಯದಿಂದಾಗಿ ಶಾಲೆಯ ವಾತಾವರಣ ಹದಗೆಡುವಂತಾಗಿದ್ದು, ಶಿಕ್ಷಣ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು.. ಅವರ್ಸಾದ ದಂಢೇಭಾಗ ಶಾಲೆಗೆ ತನ್ನದೆ ಆದ ಸುಸಂಸ್ಕçತ ಇತಿಹಾಸವಿದೆ. ಅನೇಕ ಸಹೃದಯಿ ನಾಗರಿಕರಿಗೆ ಶಿಕ್ಷಣದ ಅಮೃತ ನೀಡಿ ಉಜ್ವಲ ಭವಿಷ್ಯಕ್ಕೆ ದಾರಿ ರೂಪಿಸಿದ್ದು ಇದೇ ಅವರ್ಸಾದ ದಂಡೇಭಾಗ ಶಾಲೆ. ಆದರೆ ಇದೀಗ ರಾತ್ರಿ ಹೊತ್ತು ಕಿಡಿಗೇಡಿಗಳ ಕುಕೃತ್ಯಕ್ಕೆ ಶಾಲೆಗೆ ಸಂಬAದಿಸಿದ ವಸ್ತುಗಳು ಹಾನಿಯಾಗುತ್ತಿದೆ.
ಕಳೆದ ಎರಡು ದಿನದ ಹಿಂದೆ ಶಾಲೆಯ ಆವಾರಕ್ಕೆ ನುಗ್ಗಿದ ಕಿಡಿಗೇಡಿಗಳು ಶಾಲೆಯ ಸುಂದರ ತೋಟವನ್ನು ಹಾಳು ಗೇಡಿವಿದ್ದಾರೆ. ಅಲ್ಲದರೆ ತೋಟಕ್ಕೆ ನೀರಣಿಸಲು ಹಾಕಿದ್ದ ಪೈಪಗಳನ್ನು ಕಿತ್ತು ಹಾಕಿ ಅಟ್ಟಹಾಸ ಮೆರೆದಿದ್ದಾರೆ. ಕೆಲವು ನೀರಿನ ಪೈಪಗಳನ್ನು ಕಿತ್ತು ಶಾಲೆಯ ಬದಿಯ ಆವಾರದಲ್ಲಿ ಎಸೆದಿದ್ದಾರೆ. ಹಾಗೆ ಹತ್ತಾರು ಬಾಳೆ ಗಿಡಗಳನ್ನು ನೆಲಕ್ಕುರುಳಿಸಿದ್ದಾರೆ. ಹಾಗೆ ಶಾಲೆಯ ಬಾಗಿಲುಗಳಿಗೆ ಹಾನಿ ಮಾಡಲು ಪ್ರಯತ್ನಿಸುವದು ಕೂಡ ಕಂಡು ಬಂದಿದೆ ಎನ್ನುತ್ತಾರೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ನಾಯ್ಕ.
ಈ ಕೀಡಿಗೇಡಿಗಳನ್ನು ಪತ್ತೆ ಮಾಡಿ ಶಾಲೆಯ ಆಸ್ತಿಯನ್ನ ಉಳಿಸಿಕೊಡುವಂತೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ನಾಯ್ಕ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹೊನ್ನಪ್ಪ ವಿಠೋಬ ನಾಯ್ಕ ಆಗ್ರಹಿಸಿದ್ದಾರೆ.