ವರದಿ : ಅವಿನಾಶ ಆಗೇರ. ಅವರ್ಸಾ.
ಅಂಕೋಲಾ : ಆಗೇರ ಸಮಾಜದ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿಗಾಗಿ 30 ವರ್ಷದಿಂದ ಕ್ರೀಯಾಶೀಲವಾಗಿ ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘ ಅನೇಕ ವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತ ಬಂದಿದೆ. ಇದರ ಭಾಗವಾಗಿ ಫೆ. 25 ರ ಭಾನುವಾರ ಬೆಳಿಗ್ಗೆ 9-30 ಘಂಟೆಗೆ ಸ್ವಾತಂತ್ರö್ಯ ಸಂಗ್ರಾಮ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಚಾರ್ಯರು ಹಾಗೂ ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಸಲಹಾ ಸಮಿತಿಯ ಅಧ್ಯಕ್ಷರು ಆದ ಡಾ. ಆರ್.ಜಿ. ಗುಂದಿ ಹೇಳಿದರು.
ಅವರು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಆಗೇರ ಸಮಾಜವು ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಅಭಿವೃದ್ಧಿ ಸಾಧಿಸುತ್ತಿರುವದು ಆಶಾದಾಯಕ ಬೆಳವಣೆಗೆಯಾಗಿದೆ. ಇದಕ್ಕೆ ಪೂರಕವಾಗಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 16 ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮೆರೆದ 40 ಸಾಧಕರನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ನಡೆಯಲಿದೆ.
ಕಾರ್ಯದಿಂದಾಗಿ ಸಮಾಜದ ಅಭಿವೃದ್ಧಿಯ ಅವಲೋಕನವು ತೆರೆದುಕೊಳ್ಳಲಿದೆ. ಅಲ್ಲದೆ ಆಗೇರ ಸಮಾಜದವರು ಪ್ರಸ್ತುತವಾಗಿ ಸ್ವಾವಲಂಬಿಯಾಗಿ ಬದುಕು ಕಾಣುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗೇರ ಸಮಾಜದ ಭಾಂದವರಿAದಲೆ ಆರ್ಥಿಕ ಸಂಪನ್ಮೂಲ ಕ್ರೋಡಿಕರಿಸಿ ನಡೆಸಲಾಗುತ್ತಿದೆ. ಕಾರ್ಯಕ್ರಮವನ್ನು ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮು ಅರ್ಗೆಕರ ಉದ್ಘಾಟಿಸಲಿದ್ದು, ಅಭಿವೃದ್ಧಿ ಸಂಘದ ಅಧ್ಯಕ್ಷ ಗುರು ಶೇಡಗೇರಿ ಅಧ್ಯಕ್ಷತೆವಹಿಸಿದ್ದಾರೆ. ಹಾಗೆ ಇನ್ನುಳಿದ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಜಯಶೀಲ ಆಗೇರ ಮಾತನಾಡಿ ಸಭಾ ಕಾರ್ಯಕ್ರಮದ ನಂತರ ಮೊಟ್ಟ ಮೊದಲ ಬಾರಿಗೆ ಪ್ರಯೋಗಾತ್ಮಕವಾಗಿ ಆನಂದ ಅಂಕೋಲಾ ಅವರ ಸಾರಥ್ಯದಲ್ಲಿ ಸಮಾಜದ ಉದಯೋನ್ಮುಖ ಕಲಾವಿದರಿಂದ ಯಕ್ಷ ಅರ್ಥ ವೈಭವ ನಡೆಯಲಿದೆ. ನಂತರ ಸಮೂಹ ನೃತ್ಯ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ಜೀವಮಾನದ ಉತ್ತಮ ಸಾಧನೆಯನ್ನು ಗುರುತಿಸಿ ಡಾ.ರಾಮಕೃಷ್ಣ ಗುಂದಿ ಅವರಿಗೆ ಪುರಸ್ಕಾರ ನೀಡಿ ಗೌರವಿಲಾಗುವದು ಎಂದರು.
ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಗುರು ಶೇಡಗೇರಿ, ಕಾರ್ಯಾಧ್ಯಕ್ಷ ಎಮ್.ಬಿ. ಆಗೇರ, ಗೌರವಾಧ್ಯಕ್ಷ ಅರುಣ ಶೇಡಗೇರಿ, ಉಪಾಧ್ಯಕ್ಷರಾದ ವಾಮನ ಆಗೇರ, ಮಾರುತಿ ಆಗೇರ, ಈಶ್ವರ ವಂದಿಗೆ, ಯಾಧವ ಲಕ್ಷೆö್ಮÃಶ್ವರ, ಖಜಾಂಚಿ ಹೊನ್ನಪ್ಪ ಆಗೇರ, ಸಮಿತಿಯ ದಿಗಂಬರ ಲಕ್ಷೆö್ಮÃಶ್ವರ, ಜಗಧೀಶ್ವರ ಸೂರ್ವೆ, ರವಿ ಲಕ್ಷೆö್ಮÃಶ್ವರ, ನಾಗರಾಜ್ ಆಗೇರ, ಭರತ ಪುರಲಕ್ಕೀಭೇಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.