ನೇಣಿಗೆ ಶರಣಾದ ಅಗಸೂರಿನ ಬಾಲಚಂದ್ರ ನಾಯಕ
ಅಂಕೋಲಾ : ಖ್ಯಾತ್ ಗುತ್ತಿಗೆದಾರ, ಅಗಸೂರು ಗ್ರಾಮ ಪಂಚಾಯತನ ಮಾಜಿ ಅಧ್ಯಕ್ಷ ಬಾಲಚಂದ್ರ ಆರ್. ನಾಯಕ ಅವರು ಸೋಮವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆಯ ಹಿಂಬದಿಯಲ್ಲಿರುವ ತೋಟದ ಮನೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಬಾಲಚಂದ್ರ ನಾಯಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಶೆಟಗೇರಿಯವರಾದ ಇವರು ಸದ್ಯ ಆಗಸೂರನಲ್ಲಿ ವಾಸವಾಗಿದ್ದರು. ಇವರ ಅಂತ್ಯ ಕ್ರಿಯೆ ನಾಳೆ ಆಗಸೂರಿನಲ್ಲಿ ನಡೆಯಲಿದೆ.
ಕ್ರೀಯಾಶೀಲ ವ್ಯಕ್ತಿತ್ವದ ಬಾಲಚಂದ್ರ ನಾಯಕ ಅವರು ಎಲ್ಲರೊಂದಿಗೂ ಚೆನ್ನಾಗಿದ್ದು ಆತ್ಮೀಯ ವ್ಯಕ್ತಿತ್ವಕ್ಕೆ ಪಾತ್ರನಾಗಿದ್ದ. ಪ್ರಥಮ ದರ್ಜೆಯ ಗುತ್ತಿಗೆದಾರನಾಗಿ ತನ್ನ ವೃತ್ತಿಯನ್ನು ಕಂಡು ಕೊಂಡ ಬಾಲಚಂದ್ರ ನಾಯಕ ಕ್ಯಾಂಟೀನ ಬಾಬು ಎಂದೆ ಪ್ರಖ್ಯಾತಿಯ ಹೆಸರಿನವನಾಗಿದ್ದ.
ಅಗಸೂರಿನ ಶ್ರೀ ಗಣೇಶೊತ್ಸವ ಸಮಿತಿಯ ಅಧ್ಯಕ್ಷನಾಗಿ, ಅಗಸೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷನಾಗಿ ಪ್ರಸ್ತುತವಾಗಿ ಸೇವೆ ಸಲ್ಲಿಸುತ್ತ ಜನಪ್ರೀಯನಾಗಿದ್ದ.
ಅಗಸೂರು ಗ್ರಾಮ ಪಂಚಾಯತದ ಅಧ್ಯಕ್ಷನಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿ ಮಾದರಿ ಆಡಳಿತ ನೀಡಿದ ಕಿರ್ತೀಯು ಬಾಲಚಂದ್ರ ನಾಯಕ ಅವರದ್ದಾಗಿದೆ. ಊರಿನ ಸರಪಂಚನಂತೆ ನಿಂತು ಎಷ್ಟೋ ಸಮಸ್ಯೆಗಳನ್ಬು ಬಗೆಹರಿಸಿದ ಬಾಲಚಂದ್ರ ನೊಂದವರ ಪಾಲಿನ ಧ್ವನಿಯಾಗಿದ್ದ.
ಮೃತ ಬಾಲಚಂದ್ರ ನಾಯಕ ಅವರು ತಾಯಿ ಸಣ್ಣಮ್ಮ ನಾಯಕ, ಪತ್ನಿ ಸುಮನಾ ನಾಯಕ ಮಕ್ಕಳಾದ ಸಾಗರ, ವಿಜಯಲಕ್ಷ್ಮೀ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.