ಗೋವಾದ ಕ್ಯಾಸಿನೋ ಪಾಲಾದ ಅಂಕೋಲಾದ ಸ್ತಿçà ಶಕ್ತಿ ಸ್ವಸಹಾಯ ಸಂಘದ ಬಡ ಮಹಿಳೆಯ ಹಣ..?
ಅಂಕೋಲಾಕ್ಕೆ ಸಿಐಡಿ ಅಧಿಕಾರಿಗಳ ತಂಡ
ರಾಘು ಕಾಕರಮಠ.
ಅಂಕೋಲಾ : ಇಲ್ಲಿನ ಕೆನರಾ (ಸಿಂಡಿಕೇಟ್) ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ವೆಂಕಟೇಷ ಮಜ್ಜಿಗುಡ್ಡಾ ಅವರಿಂದ ನಡೆದ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂದಿಸಿದ0ತೆ ವಿಶೇಷ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಮುಂದಾಗಿದೆ.
ಸೋಮವಾರದಿಂದ ತನಿಖೆ ಕೈಗೊಳ್ಳಲು ಮುಂದಾದ ಸಿಐಡಿ ತಂಡ ಬ್ಯಾಂಕಗೆ ಪ್ರಥಮವಾಗಿ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದೆ. ದೂರು ನೀಡಿರುವ ಪ್ರಸ್ತುತ ಕೆನರಾ (ಸಿಂಡಿಕೇಟ್ ಬ್ಯಾಂಕಿನ) ಮ್ಯಾನೇಜರ್ ಪ್ರತೀಕ್ಷಾ ಕಾರೆ ಅವರಿಂದ ಸಮಗ್ರ ವಿವರಣೆ ಪಡೆದು ವಿಚಾರಣೆಗೆ ಮುಂದಾಗಲಿದೆ.
ಸಿಐಡಿಯ ಡಿವೈಎಸ್ಪಿ, ಸೇರಿದಂತೆ 8 ಸಿಬ್ಬಂದಿಗಳ ತಂಡ ತನಿಖಾ ಕಾರ್ಯ ಕೈಗೊಳ್ಳಲಿದೆ ಎಂದು ಆಪ್ತ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. ಈ ಅಪರಾತಪರಾ ಪ್ರಕರಣದಲ್ಲಿ ಕೇವಲ ಮ್ಯಾನೇಜರ್ ಅಷ್ಟೇ ಪಾಲ್ಗೊಳ್ಳದೆ, ಇನ್ನು ಮೂವರು ಕಿರಿಯ ಸಿಬ್ಬಂದಿಗಳು ಸಹ ಭಾಗಿಯಾಗಿದ್ದಾರೆ ಎಂದು ಆರೋಪವು ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಸಹ ಸಿಐಡಿ ತಂಡ ವಿಚಾರಣೆಗೆ ಒಳಪಡಿಸುತ್ತದೆ ಎಂಬ ಮಾಹಿತಿ ಗೊತ್ತಾಗಿದೆ.
ಬ್ಯಾಂಕಿನಲ್ಲಿ ಅಪರಾತಪರಾ ಮಾಡಿದ ಹಣವನ್ನು ತನ್ನ ಮಾವ, ಪತ್ನಿಯ ಹಾಗೂ ಇನ್ನಿತರ ಖಾತೆಗೆ ವರ್ಗಾವಣೆಯಾಗಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ.
ಗೋವಾದ ಕ್ಯಾಸಿನೋಕ್ಕೆ ಅಂಕೋಲಾದ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಬಡ ಮಹಿಳೆಯ ಹಣ..?
ಕೆನರಾ (ಸಿಂಡಿಕೇಟ್) ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ವೆಂಕಟೇಷ ಮಜ್ಜಿಗುಡ್ಡಾ ಅವರು ಸುಮಾರು 4 ಕೋಟಿಗೂ ಹೆಚ್ಚು ಹಣ ಗೋವಾದ ಕ್ಯಾಸಿನೋಕ್ಕೆ ಸುರಿದಿದ್ದಾರೆ ಎಂದು ಗೊತ್ತಾಗಿದೆ. ಇದರಲ್ಲಿ ಬ್ಯಾಂಕಿಗೆ ಸಂಬAದಿಸಿದAತೆ 1 ಕೋಟಿ 94 ಲಕ್ಷ ಹಣ ದುರಪಯೋಗಗೊಂಡಿದೆ ಎಂದು ಪೊಲೀಸ್ ದೂರು ದಾಖಲಾಗಿದೆ.
ಹಾಗೆ ವೆಂಕಟೇಷ ಮಜ್ಜಿಗುಡ್ಡಾ ಅವರು ಕಾಕರಮಠದಲ್ಲಿರುವ ಸ್ನೇಹಿತನ ಜೊತೆ ನಿರಂತರ ಪೋನ್ ಸಂಪರ್ಕ ಇರುವದು ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಸಹ ವಿಚಾರಣೆ ನಡೆಸಲು ಸಿಐಡಿ ತಂಡ ರೂಪುರೇಷೆ ಸಿದ್ಧಪಡಿಸಿಕೊಂಡಿದೆ ಎಂದು ಗೊತ್ತಾಗಿದೆ. ಹಾಗೆ ವಂಚನೆಗೊಳಗಾದ 50 ಸ್ವಸಹಾಯ ಸಂಘದ ಮಹಿಳೆಯರಿಂದಲೂ ಹೇಳಿಕೆ ಪಡೆದುಕೊಳ್ಳಲಿದೆ.
ಪ್ರಕರಣವೇನು..?
ಸ್ತಿçà ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಿ, ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಸಹ, ದಾಖಲೆಗಳಲ್ಲಿ ನಮೂದಿಸದೇ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾಗಿದ್ದ ವೆಂಕಟೇಷ ಮಜ್ಜಿಗಡ್ಡಾ ನಮಗೆ ಮೋಸ ಮಾಡಿದ್ದಾರೆ ಎಂದು ಸಂಘದ ಮಹಿಳೆಯರು ಇವರ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಹಾಗೆ ಬ್ಯಾಂಕಿನ ಇತರೆ ಸಿಬ್ಬಂದಿಗಳ ಐಡಿ ಬಳಸಿ ಬ್ಯಾಂಕ ಹಾಗೂ ಗ್ರಾಹಕರಿಗೆ ವಂಚಿಸಿರುವ ಬಗ್ಗೆ ದೂರು ಕೇಳಿ ಬಂದಿತ್ತು.
ಮಣಿಪಾಲದ ಕೆನರಾ ಬ್ಯಾಂಕ್‌ನಿAದ ಆಗಮಿಸಿದ ತನಿಖಾ ತಂಡ ಇಲಾಖಾ ವಿಚಾರಣೆ ನಡೆಸಿತ್ತು. ಈ ವೇಳೆ ವೆಂಕಟೇಷ ಮಜ್ಜಿಗಡಾ ಅವರು ಬ್ಯಾಂಕನಲ್ಲಿ ಅಪರಾತಪರಾ ಮಾಡಿರುವದು ಸಾಬೀತಾದ ಹಿನ್ನಲೆಯಲ್ಲಿ ಅವರ ಮೇಲೆ ಬ್ಯಾಂಕ್ ಕಾಯ್ದೆಯಡಿ ದೋಷಾರೋಪಣ ಪಟ್ಟಿಯನ್ನ ಕೆನರಾ ಬ್ಯಾಂಕಿನ ರಾಜ್ಯ ಮುಖ್ಯ ಅಧಿಕಾರಿಗಳಿಗೆ ಸಲ್ಲಿಸಿದ್ದರು.
ವರದಿಯನ್ನು ಸಂಪೂರ್ಣ ಅವಲೋಕಿಸಿದ ಆರ್.ಬಿ.ಐ ಮುಖ್ಯ ಅಧಿಕಾರಿ ಅವರು ವೆಂಕಟೇಷ ಮಜ್ಜಿಗಡ್ಡಾ ಅವರನ್ನು ಸೇವೆಯಿಂದಲೆ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದರು.