ಅಂಕೋಲಾದ ವೈಧ್ಯೆ ವಿರುದ್ದದ ಪೋಕ್ಸೋ ಕೇಸ್ ರದ್ದು
ಅಪ್ರಾಪ್ತೆ ಗರ್ಭಿಣಿಯಾದ ಬಗ್ಗೆ ಮಾಹಿತಿ ನೀಡದ್ದಕ್ಕೆ ಪ್ರಕರಣ

ರಾಘು ಕಾಕರಮಠ.
ಅಂಕೋಲಾ ; ಅಪ್ತಾಪ್ತ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾದ ಮಾಹಿತಿ ಒದಗಿಸದ ಆರೋಪ ಸಂಬAಧ ವೈದ್ಯೆಯೊಬ್ಬರ ವಿರುದ್ಧ ಅಂಕೋಲಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ದಾಖಲಿಸಿದ್ದ ದೋಷಾ ರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿದ್ದ ಲತಾ ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್‌ಈ ಆದೇಶ ಮಾಡಿದ್ದಾರೆ.
ಸಂತ್ರಸ್ತೆಯು ಸರ್ಕಾರಿ ಆಸ್ಪತ್ರೆಯ ರಸೀದಿ, ತಾಯಿ ಹಾಗೂ ಮೊದಲನೇ ಆರೋಪಿಯಾದ ಯುವಕನೊಂದಿಗೆ (ಸಂತ್ರಸ್ತೆಯ ಪ್ರಿಯಕರ) ವೈದ್ಯೆಯನ್ನು ಭೇಟಿಯಾಗಿದ್ದರು. ಆಸ್ಪತ್ರೆಗೆ ದಾಖಲಾಗುವಾಗ ಅರ್ಜಿಗಳಲ್ಲಿ ಸಂತ್ರಸ್ತೆಗೆ 18 ವರ್ಷ ತುಂಬಿದೆ ಎಂದು ಹೇಳಿದ್ದರು. ಹಾಗಾಗಿ ಸಂತ್ರಸ್ತೆ ಅತ್ಯಾಚಾರ/ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಆಕೆಗೆ 18 ವರ್ಷ ತುಂಬಿರಲಿಲ್ಲ ಎಂಬುದನ್ನು ಪತ್ತೆ ಮಾಡಲು ಅರ್ಜಿದಾರರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ, ಅವರ ವಿರುದ್ಧ ಅಪರಾಧಿಕ ಹೊಣೆ ಹೊರಿಸಲಾಗದು ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಯಾಗಿದ್ದರು ಎನ್ನವುದು ತಿಳಿದಿದ್ದರೂ, ಅರ್ಜಿದಾರರು ದೂರು ನೀಡದೆ ಸತ್ಯಾಂಶವನ್ನು ಮರೆ ಮಾಚಿದ್ದಾರೆ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರವನ್ನು ಪೊಲೀಸರು ಒದಗಿಸಿಲ್ಲ. ಈ ಸಂಬAಧ ಅನುಮಾನದ ಕತೆ ಹೇಳಿದ್ದಾರೆ. ಪೊಲೀಸರ ಅನುಮಾನದ ಕತೆಯನ್ನು ನ್ಯಾಯಾಲಯ ನಂಬಲು ಸಾಧ್ಯವಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ಎಂಬ ಆದೇಶದಲ್ಲಿ ತಿಳಿಸಿದೆ.
ಫೇಸ್‌ಬುಕ್‌ನಲ್ಲಿ ಅಪ್ರಾಪ್ತೆ ಪರಿಚಯ:
ಯುವಕ ಅಪ್ರಾಪ್ತಿಯನ್ನು (ಸಂತ್ರಸ್ತೆ) ಫೇಸ್‌ಬುಕ್ ಮೂಲಕ ಪರಿಚಯಿಸಿಕೊಂಡಿದ್ದ. ಅವರು ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಭರವಸೆ ನೀಡಿದ್ದ ಯುವಕ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಳು. ಆ ವಿಚಾರವನ್ನು ಆಕೆ ತಾಯಿಗೆ ತಿಳಿಸಿದ್ದಳು. ಆದರೆ, ಗರ್ಭಪಾತ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ ತಾಯಿ, ಆರೋಪಿ ಮತ್ತು ಸಂತ್ರಸ್ತೆಯನ್ನು ಅರ್ಜಿದಾರೆ ವೈದ್ಯೆ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಯುವಕ ಹಾಗೂ ಸಂತ್ರಸ್ತೆ ಪತ್ನಿ–ಪತ್ನಿಯಾಗಿದ್ದು, 18 ವರ್ಷ ತುಂಬಿದೆ. ಸಂತ್ರಸ್ತೆ ಗರ್ಭ ಧರಿಸಿದ್ದು, ಅದನ್ನು ಮುಂದುವರಿಸಲು ಇಷ್ಟವಿಲ್ಲ, ಗರ್ಭಪಾತ ಮಾಡುವಂತೆ ಕೋರಿದ್ದರು. ಆ ಕುರಿತ ದಾಖಲೆಗಳಿಗೆ ಸಹಿ ಹಾಕಿದ್ದರು. ಅದರಂತೆ ಗರ್ಭಪಾತ ಮಾಡಲಾಗಿತ್ತು.
ಇದಾದ ಬಳಿಕ ಯುವಕ ಸಂತ್ರಸ್ತೆಯನ್ನು ವಿವಾಹವಾಗಲು ನಿರಾಕರಿಸಿದ್ದ. ಈ ಕುರಿತು ಸಂತ್ರಸ್ತೆ ಪೊಲೀಸರಿಗೆ ದೂರು ದಾಖಲಿಸಿದ್ದರು. ಘಟನೆ ನಡೆದಾಗ ತನಗೆ 17 ವರ್ಷವಾಗಿತ್ತು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಳು. ಈ ಸಂಬAಧ ತನಿಖೆ ನಡೆಸಿದ್ದ ಪೊಲೀಸರು, ಯುವಕ ಹಾಗೂ ಅರ್ಜಿದಾರ ವೈದ್ಯರನ್ನು ಕ್ರಮವಾಗಿ ಮೊದಲ ಮತ್ತು ಎರಡನೇ ಆರೋಪಿಯನ್ನಾಗಿ ಮಾಡಿದ್ದರು. ಅಪ್ರಾಪ್ತಯು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ ಗರ್ಭ ಧರಿಸಿರುವ ಸಂಗತಿ ತಿಳಿದಿದ್ದರೂ ಆ ಕುರಿತು ದೂರು ನೀಡದೆ ಸತ್ಯ ಮರೆ ಮಾಚಿದ ಆರೋಪ ಸಂಬ0ಧ ಪೋಕ್ಸೋ ಕಾಯ್ದೆಯಡಿ ಸೆಕ್ಷನ್ 19 ಹಾಗೂ 21ರ ಅಡಿಯಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
