ಸಾಲವನ್ನು ಮರು ಪಾವತಿ ಮಾಡಿದರೂ, ಸಾಲಕ್ಕೆ ಅಡವಾಗಿ ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಅಸಡ್ಡೆ :
ಬ್ಯಾಂಕ್‌ನ ವಿರುಧ್ಧ ಪ್ರತಿಭಟನೆ ನಡೆಸಿ, ಘೇರಾವ ಹಾಕಿದ ನಾಗರಿಕರು.

ರಾಘು ಕಾಕರಮಠ.
ಅಂಕೋಲಾ : ಸಾಲವನ್ನು ಮರು ಪಾವತಿ ಮಾಡಿದರೂ ಸಹ, ಸಾಲಕ್ಕೆ ಅಡವಾಗಿ ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಸತಾಯಿಸುತ್ತಿದ್ದ ಇಲ್ಲಿನ ಕೆನರಾ (ಸಿಂಡಿಕೇಟ್) ಬ್ಯಾಂಕ್‌ನ ವಿರುಧ್ಧ ಪ್ರತಿಭಟನೆ ನಡೆಸಿ, ಘೇರಾವ ಹಾಕಿದ ಘಟನೆ ಗುರುವಾರ ನಡೆದಿದೆ.
ಹಾರವಾಡದ ಇಳಿ ವಯಸ್ಸಿನ ಇಂದು ಚಂದ್ರು ತಾಂಡೇಲ ಅವರ ಓಂ ನಮ: ಶಿವಾಯ ಬೋಟ್ ಮಾರ್ಚ ೪ ರಂದು ತಾಲೂಕಿನ ಕುಕ್ಕಡ ಗುಡ್ಡದ ಲೇವಲ ಸರ್ವೆ ವ್ಯಾಪ್ತಿಯಲ್ಲಿ ಆಳ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಹವಾಮಾನ ವೈಪರೀತ್ಯ ಸಿಲುಕಿ ಸಂಪೂರ್ಣ ಮುಳಗಿ ಹೋಗಿತ್ತು. ಹೀಗಾಗಿ ಈ ಕುಟುಂಬದವರು ಅತಂತ್ರ ಸ್ಥಿತಿಗೆ ತಲುಪಿದ್ದರು.
ಈ ಬೋಟ್‌ನ ಮೇಲೆ ಮಾಡಿದ ಸಾಲವನ್ನು ಖಾಸಗಿ ಬ್ಯಾಂಕ್ ಹಾಗೂ ಕೈಗಡ ಸಾಲ ಮಾಡಿಕೊಂಡು ಸಾಲವನ್ನು ಬ್ಯಾಂಕಿಗೆ ಮರು ಪಾವತಿ ಮಾಡಿದ್ದರು. ಬ್ಯಾಂಕನಲ್ಲಿ ಸಾಲ ಮಾಡುವ ಸಂದರ್ಭದಲ್ಲಿ ಇಟ್ಟ ಬೋಟ್‌ನ ಆರ್.ಸಿ. ಮತ್ತು ಇತರೆ ದಾಖಲೆಗಳನ್ನು ಬ್ಯಾಂಕಿನ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ನೀಡದೆ ಸತಾಯಿಸುತ್ತಿದ್ದರು.
ಇಂದು ತಾಂಡೇಲ ಅವರು ಬ್ಯಾಂಕಗೆ ಎರಡು ಭಾರಿ ಬಂದು ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಪರಿ ಪರಿಯಾಗಿ ಕೇಳಿಕೊಂಡರು ಕ್ಯಾರೆ ಎನ್ನದೆ ವ್ಯವಸ್ಥಾಪಕರು ಇಂದು ಬಾ, ನಾಳೆ ಬಾ ಎನ್ನುತ್ತಲೆ ಕಾಲ ಕಳೆದಿದ್ದರು. ಬ್ಯಾಂಕನ ಅಮಾನವೀಯ ವರ್ತನೆಯಿಂದ ರೋಸಿ ಹೋದ ನಾಗರಿಕರು ಬ್ಯಾಂಕಗೆ ಘೇರಾವ ಹಾಕಿ ಪ್ರತಿಭಟನೆ ನಡೆಸಿದರು.
ನನಗೆ ಕನ್ನಡ ಬರೋದಿಲ್ಲ. ನಿಮ್ಮ ಹತ್ತಿರ ನಾನು ಮಾತನಾಡುವದಿಲ್ಲ ಎಂದು ಹೇಳಿ ಬ್ಯಾಂಕನ ಒಳ ಕೊಠಡಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕಿ ಹೋಗಿ ಕುಳಿತುಕೊಂಡು ಬಿಟ್ಟರು. ಬ್ಯಾಂಕನಲ್ಲಿ ಪ್ರತಿಭಟನೆಯ ಕಾವು ಜಾಸ್ತಿಯಾದ್ದಂತೆ ಪಿಎಸೈಗಳಾದ ಸುನೀಲ ಹುಲ್ಲೋಳ್ಳಿ ಮತ್ತು ಜಯಶ್ರೀ ಪ್ರಭಾಕರ ಅವರು ಬ್ಯಾಂಕಗೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ದೀಪಕ ಚಂದ್ರು ತಾಂಡೇಲ ಮಾತನಾಡಿ ನನ್ನ ತಾಯಿಯ ಹೆಸರಿನಲ್ಲಿದ್ದ ಸಾಲ ಮರುಪಾವತಿ ಆಗಿದೆ. ನಾವು ಬಹಳ ಕಷ್ಟದ ಪರಿಸ್ಥಿಯಲ್ಲಿ ಇದ್ದೇನೆ. ಸುಖಾಸುಮ್ಮನೆ ನಮಗೆ ತೊಂದರೆ ಕೊಡದೆ, ನಮ್ಮ ದಾಖಲೆಗಳನ್ನು ವಾಪಸ್ ಕೊಡಿ ಎಂದು ಕೇಳಿಕೊಂಡರು.
ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ಮಾತನಾಡಿ ದಾಖಲೆಗಳನ್ನು ವಾಪಸ್ ನೀಡಲು ಬಹಳಷ್ಟು ಸಮಯ ಬೇಕಾಗತ್ತೆ. ಇಷ್ಟೆ ದಿನ ಅಂತಾ ಹೇಳೊಕೆ ಆಗಲ್ಲಾ. ಹುಡುಕಿ ಕೊಡುತ್ತೇನೆ ಎಂದು ಬೇಜವಬ್ದಾರಿ ಮಾತಿನಿಂದ ಕೋಪಗೊಂಡ ನಾಗರಿಕರು ವ್ಯವಸ್ಥಾಪಕಿಯನ್ನು ತೀವ್ರವಾಗಿ ತೆಗೆದುಕೊಂಡ ಘಟನೆಯು ನಡೆಯಿತು.
ಪಿಎಸೈಗಳಾದ ಸುನೀಲ ಹುಲ್ಲೋಳ್ಳಿ ಮತ್ತು ಜಯಶ್ರೀ ಪ್ರಭಾಕರ ಮಾತನಾಡಿ ನೋಡಿ ನೀವು ಈ ರೀತಿ ಹೇಳೊಕೆ ಆಗಲ್ಲಾ. ಸಾಲ ಮರು ಪಾವತಿ ಆಗಿದ್ದು ನಿಜ ಆಗಿರುವಾಗ, ಅವರ ದಾಖಲೆಗಳನ್ನು ವಾಪಸ್ ನೀಡಲು ಕಾನೂನಿನಲ್ಲಿ ತೊಂದರೆ ಇಲ್ಲ. ಇಲ್ಲದಿದ್ದರೆ ನಮ್ಮ ಭಾಷೆಯಲ್ಲೆ ಕಾನೂನು ಕ್ರಮ ಕೈಗೊಳ್ಳಬೇಕಾಗತ್ತೆ ಎಂದು ಎಚ್ಚರಿಸಿದ ಬೆನ್ನಲ್ಲೆ ಕಸಿವಿಸಿಗೊಂಡ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ನಾನು ಈಗಲೇ ದಾಖಲೆಗಳನ್ನು ವಾಪಸ್ ಕೊಡತೆನೆ. ಕನ್ನಡ ಸರಿಯಾಗಿ ಬರೋದೆ ಇರುವದರಿಂದ ನನಗೆ ತೊಂದರೆ ಆಗಿದೆ ವಿಷಾದಿಸಿ, ಈಗಲೆ ದಾಖಲೆಗಳನ್ನು ಮರಳಿಸುವದಾಗಿ ಹೇಳಿದರು.
ಅಂತೂ ಪಿಎಸೈ ಸುನೀಲ ಹುಲ್ಲೋಳ್ಳಿ ಮತ್ತು ಜಯಶ್ರೀ ಪ್ರಭಾಕರ, ಅಫರಾಧ ದಳದ ಸಿಬ್ಬಂದಿಗಳಾದ ಆಸೀಪ ಕುಂಕುರ, ರೋಹಿದಾಸ ದೇವಾಡಿಗ ಅವರ ವಿಶೇಷ ಸಹಕಾರದಲ್ಲಿ ಪ್ರಕರಣ ಇರ್ತಥ್ಯಗೊಂಡಿತು. ಸಹಾಯಕ ವ್ಯವಸ್ಥಾಪಕಿ ಶೀಲಾ ಎಚ್.ಎಸ್. ಇದ್ದರು.
ಈ ಸಂದರ್ಭದಲ್ಲಿ ವಿಘ್ನೇಶ ನಾಯ್ಕ, ಚಂದು ನಾಯ್ಕ, ಲಕ್ಷಿö್ಮÃದಾಸ ನಾಯ್ಕ, ಯಶಕುಮಾರ ನಾಯಕ, ಪ್ರವೀಣ ತಾಂಡೇಲ, ಬಾಳು ನಾಯ್ಕ, ರೋಹಿತ್ ತಾಂಡೇಲ, ಮೋಹನ ದುರ್ಗೆಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಬೋಟ್ ಮುಳಗಡೆಯಾಗಿದ್ದರಿಂದ ಇಂದು ತಾಂಡೇಲ ಕುಟುಂಬ ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆನರಾ ಬ್ಯಾಂಕನನ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ಅವರು ಅಮಾನವೀಯವಾಗಿ ಸಾಲ ಮರು ಪಾವತಿಸಿದರೂ ಸಹ, ದಾಖಲೆಗಳನ್ನು ಹಿಂತಿರಿಗಿಸದೆ ಸತಾಯಿಸುತ್ತಿರವ ಬಗ್ಗೆ ವ್ಯಾಪಕ ಚರ್ಚೆಯ ಜೊತೆಗೆ ಖಂಡನೀಯ ಮಾತುಗಳು ಕೆಳಿ ಬಂದವು. ಈ ಹಿಂದಿನ ಮ್ಯಾನೇಜ್‌ರ ವೆಂಕಟೇಷ ಮಜ್ಜಿಗುಡ್ಡಾ ಅವರು ಕೋಟ್ಯಾಂತರ ರೂಪಾಯಿ ಬ್ಯಾಂಕನ ಹಣ ಲಪಟಾಯಿಸಿಕೊಂಡು ಹೋಗುವ ಪ್ರಕರಣ ಮಾಸುವ ಮುನ್ನವೆ ಕೆನರಾ ಬ್ಯಾಂಕಗೆ ಈ ಪ್ರಕರಣ ಇನ್ನೊಂದು ಕಪ್ಪು ಚುಕ್ಕೆ ತಗಲಿದಂತಾಗಿದೆ.