ಅನಗತ್ಯ ಯಾವುದೇ ಕಡತ ಬಾಕಿ ಇಟ್ಟುಕೊಳದೀರಿ : ಶೀಘ್ರವಾಗಿ ತನಿಖೆ ನಡೆಸಿ : ಡಿವೈಎಸ್ಪಿ ಗಿರೀಶ ಎಸ್.ವಿ. ಸೂಚನೆ.

ರಾಘು ಕಾಕರಮಠ.
ಅಂಕೋಲಾ : ಕಾರವಾರ ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ಗಿರೀಶ ಎಸ್.ವಿ. ಅವರು ಗುರುವಾರ ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ಕ್ರೆöÊಂ (ಅಫರಾದÀ) ಕಡತಗಳನ್ನು ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದರು.
ಡೈನಾಮಿಕ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಡಿವೈಎಸ್ಪಿ ಗಿರೀಶ ಎಸ್.ವಿ. ಅವರು ಪೊಲೀಸ್ ತನಿಖಾ ಸಹಾಯಕ ಸಿಬ್ಬಂದಿಗಳೊAದಿಗೆ ಮಾತುಕತೆ ನಡೆಸಿ ಅಂಕೋಲಾ ಠಾಣೆಯಲ್ಲಿ ದಾಖಲಾಗುವ ಎಲ್ಲಾ ಪ್ರಕರಣದ ತನಿಖೆಯ ಕಡತವು ಆದಷ್ಟು ಶೀಘ್ರ ವಿಲೇವಾರಿಯಾಗಲು ಕ್ರಮಕೈಗೊಳ್ಳಬೇಕು.
ದಕ್ಷತೆಯಿಂದ ಕರ್ತೃವ್ಯ ನಿರ್ವಹಿಸಿ, ಸಮರ್ಪಕವಾಗಿ ಪ್ರಕರಣವನ್ನು ಅವಲೋಕಿಸಿ ಪ್ರಕರಣದ ಕಡತವನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಹಾಗೆ ಅಂಕೊಲಾದಲ್ಲಿರುವ ರೌಡಿ ಶೀರ್ಸ್ಗಳ ಬಗ್ಗೆ ಮಾಹಿತಿ, ಶಾಂತತಾ ಭಂಗ ಮಾಡಿ 107 ಕಲಂ ಅಡಿ ಪ್ರಕರಣವಾದವರ ವಿವರ, ಎಮ್.ಓ.ಬಿ. ಗಳ ವಿವರ ಮತ್ತು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯ ಪತ್ತೆಯ ಪ್ರಗತಿಯ ಹಿನ್ನೋಟವನ್ನು ಕಡತವನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜನಸ್ನೇಹಿ ವ್ಯವಸ್ಥೆಯೊಂದಿಗೆ ನಾವು ಕಾರ್ಯ ನಿರ್ವಹಣೆಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ಜನಸ್ನೇಹಿಯಾಗಿ ಉತ್ತಮ ಕಾರ್ಯ ನಿರ್ವಹಣೆಯೊಂದಿಗೆ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಿಎಸೈಗಳಾದ ಉದ್ದಪ್ಪ ಧರೆಪ್ಪನವರ್, ಸುನೀಲ ಹುಲ್ಲೊಳ್ಳಿ, ಸುಹಾಸ್, ಜಯಶ್ರೀ ಪ್ರಭಾಕರ, ತನಿಖಾ ಸಹಾಯಕರಾದ ಸಲೀಮ್ ಮೊಕಾಸಿ, ಸತೀಶ ಅಂಬಿಗ, ಗುರು ನಾಯ್ಕ, ಅರುಣ ಮೇತ್ರಿ ಅಫರಾಧ ಪತ್ತೆ ದಳದ ಸಿಬ್ಬಂದಿಗಳಾದ ಆಸೀಫ್ ಕುಂಕುರ, ಶ್ರೀಕಾಂತ ಕಟಬರ್, ಮನೋಜ್ ಡಿ, ಪ್ರಶಾಂತ ನಾಯ್ಕ ಉಪಸ್ಥಿತರಿದ್ದರು.
ಈ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಕಾರವಾರ ಹಾಗೂ ಅಂಕೋಲಾದಲ್ಲಿ ಕರ್ತವ್ಯ ನಿರ್ವಹಿಸುವದೆ ಒಂದು ಹೆಮ್ಮೆ. ಇಲ್ಲಿ ಸುಸಂಸ್ಕçತ ಜನರಿದ್ದಾರೆ. ಜನತೆ ಪೊಲೀಸರ ಜೊತೆ ಸಹಕಾರ ಭಾವನೆಯಿಂದ ವರ್ತಿಸಿದರೆ ಕ್ರೆöÊಂಗಳು ತಾನಾಗಿಯೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದರು.
ಕಾರವಾರ ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ಗಿರೀಶ ಎಸ್.ವಿ. ಅವರು 1999 ಬ್ಯಾಚಿನ್ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಹುನಗುಂದ, ಅಥಣಿ ವಿಭಾಗದಲ್ಲಿ ಡಿವೈಎಸ್ಪಿಯಾಗಿ, ಬೆಳಗಾವಿ ಗ್ರಾಮಾಂತರದ ಎಸಿಪಿಯಾಗಿ, ಕಾರವಾರ ಜಿಲ್ಲಾ ಎಸಿಬಿಯಲ್ಲಿ ಡಿವೈಎಸ್ಪಿಯಾಗಿ, ಬೆಂಗಳೂರಿನ ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕಾರವಾರದ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅನೇಕ ಕ್ಲೀಷ್ಠಕರಗಳನ್ನು ಬೇಧಿಸಿದ ಕಿರ್ತಿಯನ್ನ ಹೊಂದಿರುವ ಗಿರೀಶ ಎಸ್.ವಿ. ಅವರು ಮೂಲತ: ಹಾಸನದ ಸಕಲೇಶಪುರದವರಾಗಿದ್ದಾರೆ.
—————