ನೂರಾರು ಜನರ ಎದುರೆ ಸೀನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಹರಿದುಕೊಂಡು ನಾಪತ್ತೆಯಾದ ಭೂಪ
ವರದಿ : ದಾಮು.
ಗೋಕರ್ಣ : ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರನ ತೇರು ಎಳೆಯುತ್ತಿದ್ದ ಸಂದರ್ಭದಲ್ಲಿ ಸಿನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಹರಿದುಕೊಂಡು ನಾಪತ್ತೆಯಾದ ಘಟನೆ ಗೋಕರ್ಣದ ಗಣೇಶ ಗೆಸ್ಟ್ ಹೌಸ್ ಎದುರು ನಡೆದಿದೆ. ಈ ಕುರಿತು ಗೋಕರ್ಣ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು..?
ವೃತ್ತಿ: ಸಾಪ್ಟವೇರ್ ಇಂಜೀನಿಯರ್ ಆಗಿರುವ ಅಗ್ರಗೋಣದ ವಿನಾಯಕ ಕೃಷ್ಣಮೂರ್ತಿ ನಾಗರಕಟ್ಟೆ (34) ಇವರು ತನ್ನ ತಮ್ಮ ನಾಗೇಂದ್ರ ಕೃಷ್ಣಮೂರ್ತಿ ನಾಗರಕಟ್ಟೆ ಮತ್ತು ಸ್ನೇಹಿತರಾದ ರಮಾನಂದ ಕಮಲಾಕರ ನಾಯಕ ಹಾಗೂ ಶಶಿಕಾಂತ ದೇವಿದಾಸ ನಾಯಕ ಇವರುಗಳೊಂದಿಗೆ ಗೋಕರ್ಣದ ಗಣೇಶ ಗೆಸ್ಟ್ ಹೌಸ್ ಎದುರು ನಿಂತುಕೊAಡು ರಥೋತ್ಸವವನ್ನು ನೋಡುತ್ತಿದ್ದರು.
ಈ ವೇಳೆ ಒಬ್ಬ ಅಪರಿಚಿತ ವ್ಯಕ್ತಿಯು ಹಿಂದಿನಿAದ ಬಂದು ವಿನಾಯಕ ಕೃಷ್ಣಮೂರ್ತಿ ನಾಗರಕಟ್ಟೆ ಕುತ್ತಿಗೆಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಚೈನನ್ನು ಹರಿದುಕೊಂಡು ಓಡಿ ಹೋಗಿದ್ದಾನೆ.
ಚೈನನ್ನು ಹರಿದುಕೊಂಡು ಓಡಿ ಹೋದ ಅಪರಿಚಿತ ವ್ಯಕ್ತಿಗೆ ಸುಮಾರು 25 ವರ್ಷ ವಯಸ್ಸಾಗಿರಬಹುದು. ಸದೃಢ ಮೈಕಟ್ಟನ್ನು ಮತ್ತು ಕಪ್ಪು ಮೈ ಬಣ್ಣವನ್ನು ಹೊಂದಿದ್ದು, ಕ್ರೀಮ್ ಕಲರ್ ಅರ್ಧ ತೋಳಿನ ಟಿ ಶರ್ಟ ಹಾಗೂ ಬೂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ ಎಂದು ತನ್ನ ದೂರಿನಲ್ಲಿ ವಿನಾಯಕ ನಾಗರಕಟ್ಟೆ ತಿಳಿಸಿದ್ದಾರೆ.
ದರೋಡೆಗೊಳಗಾದ ಬಂಗಾರದ ಚೈನ್ 14 ಗ್ರಾಂ ಇದ್ದು, ಅದರ ಅಂದಾಜು ಮೌಲ್ಯ ಸುಮಾರು 84 ಸಾವಿರ ರೂಪಾಯಿ ಮೌಲ್ಯದ್ದಾಗಿದೆ.
ದೇವರ ರಥೋತ್ಸವದಲ್ಲಿ ಆಪಾದಿತನು ತನ್ನ ಚೈನನ್ನು ಹರಿದುಕೊಂಡು ಹೋಗಿದ್ದರಿಂದ ನಾನು ತೀವ್ರವಾಗಿ ಬೇಸರಗೊಂಡಿದ್ದರಿAದ ಮನೆಗೆ ಹೋಗಿ, ಮನೆಯ ಜನರಿಗೆ ವಿಷಯ ತಿಳಿಸಿ ಅವರೊಂದಿಗೆ ಚರ್ಚಿಸಿ, ಠಾಣೆಗೆ ಬಂದು ದೂರು ನೀಡಲು ವಿಳಂಭವಾಗಿರುತ್ತದೆ, ಕಾರಣ ತನ್ನ ಚೈನನ್ನು ದೋಚಿಕೊಂಡು ಹೋದ ಸದರ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ತನ್ನ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಿಎಸೈ ಶಶಿಧರ ಕೆ.ಎಚ್. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ನೂರಾರು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತನಲ್ಲಿರುವ ಸಂದರ್ಭದಲ್ಲಿ ದರೋಡೆಕೋರ ತನ್ನ ಕೈ ಚಳಕ ಪ್ರದರ್ಶಿಸಿ ಬಂಗಾರದ ಚೈನ್ ಹರಿದು ಪರಾರಿಯಾಗಿರುವದು ಪೊಲೀಸ್ ಇಲಾಖೆಗೆ ಈ ಘಟನೆ ಸವಾಲಾಗಿ ಪರಿಗಣಿಸಿದೆ.