ರೆಸಾರ್ಟ ಉದ್ಯಮದ ಬಗ್ಗೆ ಪ್ರಚಾರ ಮಾಡುತ್ತೇನೆಂದು ಹೇಳಿ ಲಕ್ಷಾಂತರ ರೂಪಾಯಿ ಯುವತಿಯಿಂದ ಪಂಗನಾಮ
ಮೋಸಕ್ಕೆಒಳಗಾದ ಗೋಕರ್ಣದ ನಿವಾಸಿ.

ರೆಸಾರ್ಟ ಉದ್ಯಮದ ಬಗ್ಗೆ ಪ್ರಚಾರ ಮಾಡುತ್ತೇನೆಂದು ಹೇಳಿ ಲಕ್ಷಾಂತರ ರೂಪಾಯಿ ಯುವತಿಯಿಂದ ಪಂಗನಾಮ
ಮೋಸಕ್ಕೆ ಒಳಗಾದ ಗೋಕರ್ಣದ ನಿವಾಸಿ.
ವರದಿ : ಹರೀಶ ಗೌಡ. ಗೋಕರ್ಣ.
ಗೋಕರ್ಣ : ರೆಸಾರ್ಟ ಉದ್ಯಮದ ಬಗ್ಗೆ ಪ್ರಚಾರ ಮಾಡುತ್ತೇನೆ ಎಂದು ಹೇಳಿ, ಒಳ್ಳೆಯ ಸ್ನೇಹ ಬೆಳೆಸಿ ವಿಶ್ವಾಸ ಬರುವಂತೆ ವರ್ತಿಸಿ ರೇಸಾರ್ಟ ಮಾಲಿಕನಿಂದ ಯುವತಿಯೊಬ್ಬಳು ಬರೋಬ್ಬರಿ 3 ಲಕ್ಷದ 29400 ರೂಪಾಯಿ ಪಡೆದುಕೊಂಡು ಪಂಗನಾಮ ಹಾಕಿ ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ ನಡೆದಿದೆ.
ಗೋಕರ್ಣದ ಬೀಚ್‌ನಲ್ಲಿರುವ ರೇಸಾರ್ಟ್ನ ವ್ಯಕ್ತಿ ಮೋಸಕ್ಕೆ ಒಳಗಾದವರಾಗಿದ್ದಾರೆ. ಬೆಂಗಳೂರಿನ ಹೇಮಾ ರಾಮ್ ಆಪಾದಿತೆಯಾಗಿದ್ದಾಳೆ.
ಈ ವ್ಯಕ್ತಿ ತನ್ನ ದೂರಿನಲ್ಲಿ ನೀಡಿರುವ ಸಾರಾಂಶವೆನೆ0ದರೆ ಇನ್ಸಾ÷್ಟಗ್ರಾಂ ಮೂಲಕ ಪರಿಚಯವಾದ ಬೆಂಗಳೂರಿನ ಹೇಮಾ ರಾಮ್ ಎಂಬಾಕೆ ಗೋಕರ್ಣದ ಬೇಲೆಖಾನದ ರೇಸಾರ್ಟ ಬಗ್ಗೆ ಪ್ರಚಾರ ಮಾಡುತ್ತೇನೆ ಎಂದು ಹೇಳಿ. ಒಳ್ಳೆಯ ಸ್ನೇಹ ಬೆಳೆಸಿ ವಿಶ್ವಾಸ ಬರುವಂತೆ ವರ್ತಿಸಿ 05-02-2023 ರಂದು ಗೋಕರ್ಣಕ್ಕೆ ಬಂದು ತನಗೆ ಭೇಟಿಯಾಗಿ, ತನ್ನ ರೆಸಾರ್ಟ ಬಗ್ಗೆ, ಪ್ರಚಾರ ಮಾಡುವುದಾಗಿ ತಿಳಿಸಿದ್ದರು.
ತನ್ನಿಂದ ಒಟ್ಟೂ 3 ಲಕ್ಷದ 29,400 ರೂಪಾಯಿ (2 ಲಕ್ಷದ 34,000/- ರೂಪಾಯಿಯನ್ನು ಆನ್ ಲೈನ್ ಮೂಲಕ ಮತ್ತು 95 ಸಾವಿರ ರೂಪಾಯಿ ನಗದು ರೂಪದಲ್ಲಿ. ಪಡೆದುಕೊಂಡಿದ್ದಳು. ಸ್ವಲ್ಪ ಸಮಯದ ಬಳಿಕ ತಾನು ಸಾಲವನ್ನು ಹಿಂತಿರುಗಿಸುವAತೆ ಕೇಳಿದಾಗ ಆಪಾದಿತೆಯು ಏನಾದರೊಂದು ಕಾರಣವನ್ನು ಹೇಳಿ ಕೊಟ್ಟ ಹಣವನ್ನು ಹಿಂತಿರುಗಿಸುವುದಾಗಿ ನಂಬಿಸುತ್ತಾ ಬಂದಿದ್ದಳು.
ಕಳೆದ ನವೆಂಬರ್ ತಿಂಗಳಲ್ಲಿ ತಾನು ಸಾಲವನ್ನು ಹಿಂತಿರುಗಿಸುವ0ತೆ ಒತ್ತಾಯಿಸಲು ಪ್ರಾರಂಭಿಸಿದಾಗ ಆಪಾದಿತೆಯು ಸರಿಯಾಗಿ ಮಾತನಾಡದೇ ತನ್ನ ಪೋನ್ ಕರೆಯನ್ನು ಸ್ವೀಕರಿಸಲು ನಿಲ್ಲಿಸಿದ್ದು ಇರುತ್ತದೆ. ಈ ಬಗ್ಗೆ ತಾನು ದಿನಾಂಕ: 11-11-2023 ರಂದು ಆಪಾದಿತೆಯ ವಿಳಾಸಕ್ಕೆ ಭೇಟಿ ನೀಡಿದರೂ ಆಪಾದಿತೆ ಸಿಕ್ಕಿರುವುದಿಲ್ಲ. ಬಳಿಕ ಕಳೆದ ಡಿಸೆಂಬರ್ ತಿಂಗಳಲ್ಲಿಯೂ ಸಹ ತಾನು ಆಪಾದಿಗೆ ಹಣವನು ಮರಳಿಸಲು ಕೇಳಿದ್ದು ಇನ್ನು 2 ವಾರದ ಒಳಗಾಗಿ ಮರಳಿಸುವುದಾಗಿ ತಿಳಿಸಿದ್ದಳು.
ಆ ನಂತರದಲ್ಲಿ ತಾನು ಹಣವನ್ನು ಹಿಂತಿರುಗಿಸುವAತೆ ಆಪಾದಿತೆಗೆ ಕೇಳಿದಾಗ ಇನ್ನೊಮ್ಮೆ ಹಣವನ್ನು ಕೇಳಿದ್ದೆ ಆದಲ್ಲಿ ತನ್ನ ಮೇಲೆ ಸುಳ್ಳು ದೂರು ನೀಡುವುದಾಗಿ ಹಾಗೂ ತನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿ ಪಡೆದ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿದ್ದಾಳೆ ಎಂದು ಮೋಸ ಹೋದ ವ್ಯಕ್ತಿ ಕುಮಟಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಗೋಕರ್ಣ ಠಾಣೆಯ ಪಿಎಸೈ ಶಶಿಧರ ಕೆ.ಎಚ್. ಅವರು ಆಪಾದಿತೆ ಹೇಮಾ ರಾವ್ ಅವರ ವಿರುದ್ಧ ಈಪಿಸಿ 420 ಹಾಗೂ 506 ಕಲಂ ಅಡಿ ಪ್ರಕರಣ ದಾಖಲಿಸಿಕೊಮಡು ಕಾನೂನು ಕ್ರಮ ಕೈಗೊಂಡಿದ್ದಾರೆ.