ನೀತಿ ಸಂಹಿತೆ ಜಾರಿ : ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರ,

ಅಂಕೋಲಾ : ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯ ಹಿನ್ನಲೆಯಲ್ಲಿ ತಾಲೂಕಿನ ರಾಷ್ಟಿçÃಯ ಹೆದ್ದಾರಿ 63 ರ ಬಾಳೆಗುಳಿ ಕ್ರಾಸ್‌ನ ಚುನಾವಣಾ ಕಣ್ಗಾವಲು ಚೆಕ್ ಪೋಸ್ಟ್ನಲ್ಲಿ ತಪಾಸಣೆ ತೀವ್ರಗೊಂಡಿದೆ. ಡಿವೈಎಸ್ಪಿ ಗಿರೀಶ ಎಸ್. ವಿ. ಹಾಗೂ ಸಿಪಿಐ ಶ್ರೀಕಾಂತ ತೋಟಗಿ ಅವರು ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಅಗತ್ಯ ಮಾರ್ಗದರ್ಶನ ನೀಡಿದರು.
ದಿನದ 24 ಘಂಟೆಯ ಕಾಲ ಹಗಲು ಹಾಗೂ ರಾತ್ರಿಯಲ್ಲೂ ವಾಹನಗಳ ನಿರಂತರ ತಪಾಸಣಾ ವ್ಯವಸ್ಥೆಯು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಮುಂದುವರಿಯಲಿದೆ. ಚೆಕ್ ಪೋಸ್ಟ್ನಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಒರ್ವ ಹವಾಲ್ದಾರ ಹಾಗೂ ಇರ್ವರು ಪೊಲೀಸ್ ಸಿಬ್ಬಂದಿ ಚೆಕ್ ಪೋಸ್ಟ್ನಲ್ಲಿ ನಿಯೋಜಿಸಲಾಗಿದೆ.
ಡಿವೈಎಸ್ಪಿ ಗಿರೀಶ ಎಸ್. ವಿ. ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ಸೂಚನೆ ನೀಡಿ ಕಟ್ಟು ನಿಟ್ಟಾಗಿ ವಾಹನ ತಪಾಸಣೆ ನಡೆಸಬೇಕು. ಸರಕು ಸಾಗಣೆ ಮಾಡುವವರು ಸೂಕ್ತ ಕಾನೂನು ದಾಖಲೆಗಳನ್ನು ಹೊಂದಿದ್ದಾರೆಯೆ.? ಸರಕು ವಾಹನ ತಪಾಸಣೆ ವೇಳೆ ಮಾಲಕರು ಅಥವಾ ಸರುಕು ಸಾಗಣೆದಾರರು ಜಿಎಸ್‌ಟಿ ಬಿಲ್ ಮತ ಇತರೆ ದಾಖಲೆಗಳನ್ನು ಇಟ್ಟುಕೊಂಡಿರುವುದು ಅತ್ಯಗತ್ಯ. ಇದಲ್ಲದೆ ವಸ್ತುವನ್ನು ಖರೀದಿಸಿದ ಸ್ಥಳ, ಉದ್ದೇಶ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡಿರುವದು ಪರಿಶೀಲಿಸಿ ಹಾಗೆ ಅಕ್ರಮ ಸಾರಾಯಿಯ ಬಗ್ಗೆ ತೀವ್ರ ನಿಗಾ ಇಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಪುನೀತ ನಾಯ್ಕ, ಚಾಲಕರಾದ ಗಣೇಶ ನಾಯ್ಕ, ಯತೀಶ ಪಾಟೀಲ ಉಪಸ್ಥಿತರಿದ್ದರು.