ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

ರಾಘು ಕಾಕರಮಠ.
ಚುನಾವಣೆಯ ನೀತಿ ಸಂಹಿತೆಯ ಕಾವು ಒಂದಡೆ ಬಿಗಿಗೊಳುತ್ತಿದೆ. ಆದರೆ ಇನ್ನೊಂದಡೆ ತಾಲೂಕಿನ ಮೂಲೆಮನೆಯಲ್ಲಿ ಮಾತ್ರ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ ಮುಕ್ತವಾಗಿ ತೆರೆದುಕೊಂಡಿದ್ದು ಆಡಳಿತ ವ್ಯವಸ್ಥೆಯನ್ನೆ ಅಣಕಿಸುವಂತಿದೆ.
ರಾಜಸ್ಥಾನದಿಂದ ಬಂದ ಮಿಕ್ಸಿಂಗ್ ಪರಿಣಿತರು :
ಈ ಅಡ್ಡ ಕಳ್ಳ ದಂಧೆಯ ಡಾಂಬರ್ ಮಿಕ್ಸಿಂಗ್ ಮಾಡಲು ರಾಜಸ್ಥಾನದಿಂದ ಇಬ್ಬರು ಪರಿಣಿತರನ್ನು ಕರೆಯಿಸಿಕೊಂಡು ಈ ಕುಕೃತ್ಯ ನಡೆಸಲಾಗುತ್ತಿದೆ. ಹಾಗೆ ವಾಹನದಿಂದ ಡಾಂಬರ್ ಇಳಿಸಲು ಓರಿಸ್ಸಾದ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.
ಮೂಲೆಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಡಾಂಬರಗೆ ಮಿಕ್ಸಿಂಗ್ ಮಾಡಲು ಕೆಮಿಕಲ್‌ನನ್ನು ಸಂಗ್ರಹಣಾ ಮಾಡಿ ಇಡಲಾಗಿದ್ದು, ಖಾಕಿಯ ರಕ್ಷಣೆಯ ಮೇರೆಗೆ ಈ ಅಡ್ಡೆಯ ಕಳ್ಳದಂಧೆ ನಡೆಯುತ್ತಿರುವ ಕುರಿತು ಆರೋಪದ ಮಾತುಗಳು ಕೇಳಿ ಬಂದಿದೆ.
ಡಾಂಬರ್ ವಾಹನದ ಚಾಲಕರನ್ನು ಪಟಾಯಿಸಿಕೊಂಡು, ಅವರಿಗೆ ಹಣದ ಆಮಿಷ ಹಾಕಿ ಪ್ರತಿ ದಿನ ಸುಮಾರು 30 ಕ್ಕೂ ಹೆಚ್ಚು ಲಾರಿಗಳಿಂದ ಅಕ್ರಮವಾಗಿ ಡಾಂಬರನ್ನು ಇಳಿಸಿಕೊಳ್ಳಲಾಗುತ್ತದೆ. ಇಳಿಸಿಕೊಂಡ ಡಾಂಬರಿಗೆ ಬಿಳಿಯ ಬಣ್ಣದ ರಾಸಾಯನಿಕ ಪೌಡರನ್ನು ಮಿಶ್ರಣಗೊಳಿಸಿ ಮತ್ತೆ ಕಳ್ಳಾಟದಲ್ಲಿ ಬೇರೆಯವರಿಗೆ ಮಾರಲಾಗುತ್ತದೆ.
ಈ ಅಕ್ರಮಕ್ಕೆ ಸಂಬ0ಧ ಪಟ್ಟ ಕೆಲವು ಇಲಾಖೆಯ ಶಾಮೀಲಾತಿಯು ಕೂಡ ಎದ್ದು ಕಾಣುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಕೆಯು ಆಗಿದೆ ಎಂದು ಗೊತ್ತಾಗಿದೆ. ನೀವು ಅಸಲಿ ಡಾಂಬರಗೆ ಏನಾದರೂ ಮಿಕ್ಸಿಂಗ್ ಮಾಡಿಕೊಳ್ಳಿ ನಮ್ಮನ್ನು ಮಾತ್ರ ಸರಿಯಾಗಿ ನೋಡಿಕೊಳ್ಳಿ ಎಂದು ಅಧಿಕಾರಿಯೊಬ್ಬರು ನೀಡಿದ ಆಸ್ವಾಹನೆಯ ಮೇರೆಗೆ ಯಾವುದೇ ಭಯವಿಲ್ಲದೆ ಮೂಲೆಮನೆಯಲ್ಲಿ ಬಿಂದಾಸ ಆಗಿ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ ತೆರೆದುಕೊಂಡಿದೆ ಎಂದು ಹೇಳಲಾಗುತ್ತಿದೆ.