ಕೆ.ಎಲ್.ಇ ರಸ್ತೆಯಲ್ಲಿ ಮಟ್ಕಾ ಆಡಿಸುತ್ತಿದ್ದವನ ಬಂಧನ

ಅ0ಕೋಲಾ : ಪಟ್ಟಣದ ಕೆ.ಎಲ್.ಇ. ರಸ್ತೆಯಲ್ಲಿ ನಿಂತು ಮಟಕಾ ಆಟ ನಡೆಸುತ್ತಿದ್ದಾಗ ಇಲ್ಲಿನ ಪೊಲೀಸರು ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕುಮಟಾದ ಗಂಗಾವಳಿಯವನಾದ, ಹಾಲಿ ಬೆಳಂಬಾರದ ನಿವಾಸಿಯಾದ ಬಲಿಯಾ ನಾಯ್ಕ ಇವರ ಮೇಲೆ ಮಟಕಾ ಆಡಿಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಈತನು ಕೆ.ಎಲ್.ಇ. ರಸ್ತೆಯಲ್ಲಿ ನಿಂತು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ನಿಂತು ಓಸಿ ಚೀಟಿ ಬರೆಯುತ್ತಿದ್ದಾಗ ಪಿಎಸೈ ಉದ್ದಪ್ಪ ಧರೆಪ್ಪನವರ್ ದಾಳಿ ಅವರು ಸಿಬ್ಬಂದಿಯೊ0ದಿಗೆ ದಾಳಿ ನಡೆಸಿದಾಗ 360 ರೂ ನಗದು ಹಣ ಮತ್ತು ಮಟಕಾ ಆಡಲು ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಎಸೈ ಸುನೀಲ ಹುಲ್ಲೊಳ್ಳಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಆರೋಪಿ ಬಲಿಯಾ ನಾಯ್ಕ ಅವರ ಮೇಲೆ ಕೆ.ಪಿ. ಆಕ್ಟ್ ಅನ್ವಯ 78(3) ಪ್ರಕರಣ ದಾಖಲಾಗಿದೆ.