ಕೇವಲ ವಸ್ತುಗಳಲ್ಲಿ ಮಾತ್ರವಲ್ಲದೆ ಕೆಲವು ಮಹಿಳಾ ಉಡುಪು ಖರೀದಿ ಜಾಲತಾಣಗಳಲ್ಲಿಯೂ ಸಹ ಮೋಸ ನಡೆಯುತ್ತಿದೆ. ದುಬಾರಿ ಬೆಲೆಯ ಬಟ್ಟೆಗಳನ್ನು ಖರೀದಿಸಿದಾಗ ಮನೆಗೆ ಮುಟ್ಟಿದ ವಸ್ತು ನೂರು ರೂಪಾಯಿಗೂ ಲಾಯಕ್ಕಿಲ್ಲದ ಉಡುಗೆಗಳು ಇರುತ್ತವೆ. ಹೊರಗೆ ಹೇಳಿದರೆ ಎಲ್ಲಿ ಗಂಡನಿ0ದ ಧರ್ಮದೇಟು ಬೀಳುತ್ತದೆಯೋ ಎಂಬ ಭಯದಿಂದ ಯಾರಿಗೂ ತಿಳಿಸದೇ ವಿಷಯ ಮರ್ಮವಾಗೇ ಉಳಿದು ಬಿಡುತ್ತದೆ.

ಇತ್ತೀಚೆಗೆ ಆನ್ಲೈನ್ ವಂಚನೆ ಹೆಚ್ಚಾಗಿದ್ದು ಈಗ ಅದು ವಸ್ತು ಖರೀದಿಯಲ್ಲೂ ಆಗುತ್ತಿರುವುದು ವಿಷಾದನೀಯ. ಕೇವಲ ನಂಬಿಕೆಯ ಆಧಾರದ ಮೇಲೆ ಈ ಇಲ್ಲ ವ್ಯವಹಾರಗಳು ನಡೆಯುತ್ತವೆ. ಅದರೆ ಇಂತಹ ಘಟನೆಗಳು ಆನ್ಲೈನ್ ಖರೀದಿಯ ಮೇಲೆ ಅವಿಶ್ವಾಸ ಮೂಡುವಂತೆ ಮಾಡುತ್ತವೆ. ಖರೀದಿ ಜಾಲತಾಣ ಕಂಪನಿಗಳು ರಫ್ತು ಮಾಡುವ ವಸ್ತುಗಳ ಬಗ್ಗೆ ಕೂಲಂಕುಶ ಪರೀಕ್ಷೆ ನಡೆಸಿ ಮಾರಾಟ ಮಾಡುವುದು ಬಹಳ ಅವಶ್ಯಕವಾಗಿದೆ.

 ದಾಮು ಗೌಡ.