ಅಂಕೋಲಾದಲ್ಲಿ ಮಟ್ಕಾ ಮಾಫಿಯಾದ ವಿರುದ್ಧ ಸಿಡಿದು ನಿಂತ ಸಿಪಿಐ ಶ್ರೀಕಾಂತ ತೋಟಗಿ

ರಾಘು ಕಾಕರಮಠ.
ಅಂಕೋಲÁ : ಅಂತೂ ಅಂಕೋಲಾದಲ್ಲಿ ಮೈತಳೆದು ಕೊಳಕು ಗಬ್ಬೆದ್ದು ನಾರುತ್ತಿದ್ದ ಮಟ್ಕಾ ದಂಧೆಗೆ ಪೊಲೀಸ್ ಇಲಾಖೆ ಅಂಕುಶ ಹಾಕಿದೆ. ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಶ್ರೀಕಾಂತ ತೋಟಗಿ ಅವರ ವಿಶೇಷ ಕಾರ್ಯತತ್ಪರತೆಗೆ ಮಟ್ಕಾ ಮಾಫಿಯಾ ನಲುಗುವಂತಾಗಿದ್ದು, ಬಡ ಜನತೆ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
ಅ0ಕೋಲಾದಲ್ಲಿ ಮಟ್ಕಾ (ಓಸಿ) ದಂಧೆಯ ಸಾಮಾಜ್ಯವನ್ನ ಅನೇಕರು ಆಳಿದ್ದಾರೆ. ಆ ಆ ಸಂದರ್ಭದ ರಾಜಕೀಯ ಸ್ಥಿತಿಗತಿಗೆ ಅನುಗುಣವಾಗಿ, ಮಟ್ಕಾ ಮಾಫಿಯಾ ಮೆರೆದಿದೆ ಎಂದು ಹೇಳಬಹುದಾಗಿದೆ. ಅಂಕೋಲಾಕ್ಕೆ ಪೊಲೀಸ್ ಅಧಿಕಾರಿಯಾಗಿ ವರ್ಗಾವಣೆಯಾಗಿ ಬರಲು ಬಯಸುವ ಅಧಿಕಾರಿಗಳಿಗೆ ಅಂಕೋಲಾದಲ್ಲಿ ಬೃಹತ ಪ್ರಮಾಣದಲ್ಲಿ ನಡೆಯುವ ಮಟ್ಕಾ ದಂಧೆಯ ಹಪ್ತಾವೆ ಮೂಲ ಆದಾಯ ಎಂಬುದು ಗುಟ್ಟಾಗಿ ಉಳಿಯದ ಸಂಗತಿಯಲ್ಲ.
ಹಾಗಾಗಿಯೆ ಅಂಕೋಲಾಕ್ಕೆ ಪೊಲೀಸ್ ಅಧಿಕಾರಿಗಳಾಗಿ ಬರಲು ತಾಮುಂದು ಎಂದು ವಸೂಲಿ ಹಚ್ಚಿದವರೆ ಹೆಚ್ಚು. ತಿಂಗಳಿಗೆ 7 ಲಕ್ಷದ 20 ಸಾವಿರ ಕಪ್ಪ ಕಾಣಿಕೆ ಖಾಕಿಗೆ ಸಂದಾಯವಾದರೆ ಮಾತ್ರ ಇಲ್ಲಿ ಮಟ್ಕಾ ಆಟ ಸಲಿಸು ಎಂಬದು ಇಲ್ಲಿ ವಿಶ್ನೇಷಣೆಗೆ ಒಳಪಡುವ ಅಂಶವು ಆಗಿದೆ.
ಅಂಕೋಲಾಕ್ಕೆ ಪೊಲೀಸ್ ನೀರಿಕ್ಷಕರಾಗಿ ಬರಲು ಒಟ್ಟು 8 ಕ್ಕೂ ಅಭ್ಯರ್ಥಿಗಳು ಉಮೇದುದಾರರಾಗಿದ್ದರೇ, ಪಿಎಸೈ ಒನ್ ಹುದ್ದೆ 13 ಕ್ಕೂ ಅಧಿಕಾರಿಗಳು ಕಣ್ಣಿಟ್ಟಿದ್ದರು. ಏಕೆಂದರೆ ಅಂಕೋಲಾ ಎಲ್ಲದರಲ್ಲೂ ಸೇಫ್. ಏಕೆಂದರೆ ಇಲ್ಲಿ ಪೊಲೀಸಿಂಗ್ ವ್ಯವಸ್ಥೆಗೆ ಜನರು ಗೌರವಿಸುತ್ತಾರೆ. ಜೊತೆಗೆ ದೊ- ನಂಬರ್ ಖದೀಮರು ಮಾತ್ರ ಪ್ರತಿ ತಿಂಗಳು ೧ ತಾರೀಕು ಆಯಿತೆಂದರೆ ಸಾಕು, ತಮ್ಮ ನಿಯತ್ತನ್ನು ಚಾಚು ತಪ್ಪದೆ ಜೇಬಿಗಿಳಿಸಿ ಹೋಗುತ್ತಾರೆ. ಹಾಗಾಗಿಯೆ ಅಂಕೋಲಾಕ್ಕೆ ಅಧಿಕಾರಿಗಳಾಗಿ ಬರಲು ಉತ್ಸುಕತೆ ಹೆಚ್ಚು ಪ್ರದರ್ಶನವು ಆಗುತ್ತಿದೆ.
ಈ ಎಲ್ಲ ವಿದ್ಯಮಾನದ ನಡುವೆ ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡು ಅಂಕೋಲಾದ ಠಾಣೆಗೆ ಆಗಮಿಸಿರುವ ಸಿಪಿಐ ಶ್ರೀಕಾಂತ ತೋಟಗಿ ಅವರು ಲಕ್ಷಾಂತರ ರೂಪಾಯಿ ಮಟ್ಕಾ ಹಣವನ್ನು ತಮ್ಮ ಎಡಗೈಯಲ್ಲೂ ಮಟ್ಟದೆ, ಮಟ್ಕಾ ಬಂದ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಸಿಪಿಐ ಶ್ರೀಕಾಂತ ತೋಟಗಿ ಅವರು ಕಾರ್ಯ ನಿರ್ವಹಿಸಿದ ಎಲ್ಲಾ ಠಾಣೆಗಳಲ್ಲೂ ಸಹ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಕಿರ್ತಿ ಇದೆ. ಜನಸ್ನೇಹಿಯಾಗಿ, ನೋವುಂಡ ಬಡ ಜನರ ಕುಸಿದಂಥ ಬಾಳಿನ ನೊಗಕೆ ಶ್ರೀಕಾಂತ ತೋಟಗಿ ಹೆಗಲಾದವರು.
ಹೀಗಾಗಿ ಶ್ರೀಕಾಂತ ತೋಟಗಿ ಅವರಿಗೆ ಬಡ ಜನರ ಉಸಿರಿನ ನೋವು ಅರಿತವರಾಗಿದ್ದಾರೆ. ಈ ಮಟ್ಕಾ ಮಾಫಿಯಾದಿಂದ ಹತ್ತಾರು ಕುಟುಂಬಗಳು ಬೀದಿಗೆ ಬಿದ್ದಿರುವದನ್ನು ಅವರು ಅರಿತಿದ್ದಾರೆ. ಹೀಗಾಗಿ ಮಟ್ಕಾಕ್ಕೆ ಕಡಿವಾಣವನ್ನು ಹಾಕಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಆದರೆ ಮಟ್ಕಾ ಬಂದ ಮಾಡಿಸಿದ ಕೋಪಕ್ಕೆ ಈ ಮಾಫಿಯಾ ಮಕ್ಕಳು ಮಾತ್ರ ಸಿಪಿಐ ಶ್ರೀಕಾಂತ ತೋಟಗಿ ಅವರು ಅಂಕೋಲಾದಲ್ಲಿರುವ 8 ಬುಕ್ಕಿದ್ದಾರರಿಂದ ತಲಾ 25 ಸಾವಿರ ಹೆಚ್ಚು ಹಣ ಕೇಳುತ್ತಿದ್ದಾರೆ. ಹಾಗಾಗಿಯೇ ಬಂದ ಮಾಡಿಸಿದ್ದಾರೆ ಎಂಬ ಆರೋಪವನ್ನು ಹಾಕಿ ಸಿಪಿಐ ಅವರ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಮಾನವನ್ನು ಸೂಕ್ಷö್ಮವಾಗಿ ನೋಡುತ್ತಿರುವ ಶ್ರೀಕಾಂತ ತೋಟಗಿ ಅವರು ಮಟ್ಕಾ ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ತಮ್ಮ ಸಿಬ್ಬಂದಿಗಳಿಗೆ ದಾಳಿ ನಡೆಸುವಂತೆ ಸೂಚನೆ ನೀಡಿರುವದು ಮಟ್ಕಾ ಬುಕ್ಕಿಗಳ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ.
ಇನ್ನು ಅಂಕೋಲಾದ ಮಟ್ಕಾ ಮಾಫಿಯಾದ ಅರಸನಾಗಿರುವ ಕಡಲ ತಡಿಯ ಈ ಪೋರ್ ಮುಂದಿನ ಜಿಲ್ಲಾ ಪಂಚಾಯತ ಸದಸ್ಯ ನಾನೆ ಆಗುತ್ತಿದ್ದೇನೆ. ಸಮಯ ಬಂದರೆ ಇನ್ನು ಹತ್ತು ವರ್ಷದಲ್ಲಿ ನಾನೆ ಶಾಸಕನಾದರೂ ಆಗಬಹುದು. ನಾನಷ್ಟು ಜನಪ್ರೀಯ ಎಂದು ಬೊಗಳೆ ಬಿಡುವ ಇತನ ಪುಂಗಿ ನಾದವನ್ನು ಆ ಬೆಳಬಾರದ ಮಂಜುನಾಥ ಸ್ವಾಮಿಯೆ ಕೇಳಬೇಕಾಗಿದೆ.
ಒಟ್ಟಾರೆ ಸಿಪಿಐ ಶ್ರೀಕಾಂತ ತೋಟಗಿ ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಅಂಕೋಲಾ ನಾಗರಿಕರಲ್ಲಿ ಹರ್ಷಕ್ಕೆ ಕಾರಣವಾಗಿದೆ. ಮಟ್ಕಾದ ಕರಾಳ ಪ್ರಪಂಚಕ್ಕೆ ಶ್ರೀಕಾಂತ ತೋಟಗಿ ಅವರ ಪ್ರಯೋಗಿಸಿದ ಕಾನೂನಿನ ದಂಡ ಮಟ್ಕಾ ಮಾಫಿಯಾಗಳಿಗೆ ಶೂಲವಾಗಿ ನಿಂತಿದೆ.