ಅಂಕೋಲಾ ತಾಲೂಕಿಗೆ ಮಾನ್ಯಾ ನಾಯ್ಕ ಪ್ರಥಮ

ಅಂಕೋಲಾ : 2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಜಿ.ಸಿ.ಕಾಲೇಜಿನ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಾನ್ಯಾ ಮಂಜುನಾಥ ನಾಯ್ಕ 98.33 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ನಾಲ್ಕನೇ ಹಾಗೂ ರಾಜ್ಯಕ್ಕೆ 9 ನೇ ರ್ಯಾಂಕ ದಾಖಲಿಸುವ ಮೂಲಕ ಹೆಮ್ಮೆ ತಂದಿದ್ದಾಳೆ.
ಪಿಸಿಎಮ್ಬಿಯಲ್ಲಿ ಶೇ. 100 ಅಂಕ ಗಳಿದ್ದಾಳೆ. ಸಾಧನೆಗೈದ ವಿದ್ಯಾರ್ಥಿನಿ ಮಾನ್ಯಾ ಕೆನರಾ ಟಿವಿಯ ವ್ಯವಸ್ಥಾಪಕ ಸಂಪಾದಕ ಮಂಜುನಾಥ ನಾಯ್ಕ ಬೆಳಂಬಾರ ಹಾಗೂ ಸುಮಾ ಪಂಪತಿಗಳ ಅವರ ಪುತ್ರಿಯಾಗಿದ್ದಾಳೆ. ವಿದ್ಯಾರ್ಥಿಯ ಸಾಧನೆಗೆ ಕಾಜೇಜಿನ ಪ್ರಾಚಾರ್ಯ ಸುಜಾತಾ ಲಾಡ್ ಆಡಳಿತ ಮಂಡಳಿಯ ಆಡಳಿತಾಧಿಕಾರಿ ರವೀಂದ್ರ ಕೇಣಿ, ಸಿಇಟಿ ಉಪನ್ಯಾಸಕ ಮಧು ಶಾನಭಾಗಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
