ನಿಲೇಕಲ್ಲು ತೆಗೆಯಲು ಹೋದಾಗ 12 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವು

ಅಂಕೋಲಾ : ಗೆಳೆಯರೊಂದಿಗೆ ನಿಲೆಕಲ್ಲು ತೆಗೆಯಲು ಹೋದಾಗ ಆಯ ತಪ್ಪಿ, ನೀರಿನಲ್ಲಿ ಮುಳುಗಿ 12 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಧಿಭಾಗದ ಅಳಿವೆ ಬಾಯಿಯ ಮುಡ್ರಾಣಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಬೆಳಂಬಾರದ ಮುಡ್ರಾಣಿಯ ಐಶ್ವರ್ಯ ವಿಠ್ಠಲ ಗೌಡ (12) ಮೃತಪಟ್ಟ ಬಾಲಕಿಯಾಗಿದ್ದಾಳೆ.
ಘಟನೆಯ ವಿವರ :
ಐಶ್ವರ್ಯ ಗೌಡ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಸಮುದ್ರ ಸಂಗಮ ಪ್ರದೇಶವಾದ ಮುಡ್ರಾಣಿ ಅಳಿವೆಯಲ್ಲಿ ನಿಲೆಕಲ್ಲು ತೆಗೆಯಲು ತೆರಳಿದ್ದರು.
ಈ ವೇಳೆ ನೀರಿನ ಸುಳಿಗೆ ಸಿಲುಕಿ ಮೂವರು ಬಾಲಕಿಯರು ನದಿಯಲ್ಲಿ ಬಿದ್ದಿದ್ದಾರೆ.ಇದನ್ನು ಗಮನಿಸಿದ ಶೇಡಿಕುಳಿಯ ಗ್ರಾಮಸ್ಥರು ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಆದರೆ ವಿಧಿಯಾಟಕ್ಕೆ ಐಶ್ವರ್ಯ ಮಾತ್ರ ಬಾರದ ಲೋಕಕ್ಕೆ ತೆರಳಿದ್ದಾಳೆ.
ಮುಡ್ರಾಣಿಯ ಹಿ.ಪ್ರಾ.ಶಾಲೆಯಲ್ಲಿ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಐಶ್ವರ್ಯ ತೀವ್ರ ಬಡತನದ ಕುಟುಂಬದಿಂದ ಬಂದ ಬಾಲಕಿಯಾಗಿದ್ದಾಳೆ. ಕಳೆದ ವರ್ಷ ತಂದೆ ವಿಠ್ಠಲ ಗೌಡ ಅಕಾಲಿಕವಾಗಿ ಮೃತಪಟ್ಟಿದ್ದರು. ಇನ್ನು ಸರಿಯಾಗಿ ಕಿವಿ ಕೇಳದ ತಾಯಿ ತನ್ನ ಮೂವರು ಮಕ್ಕಳನ್ಬು ಕೂಲಿ ಮಾಡಿ ಸಾಕುತ್ತಿದ್ದಳು ಎಂದು ತಿಳಿದು ಬಂದಿದೆ.
ಪಿಎಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.